Advertisement

ಕಮಲಾಪುರ ಪಟ್ಟಣ ಪಂಚಾಯ್ತಿಗೆ ಪುರಸಭೆ ಭಾಗ್ಯ

05:37 PM Apr 03, 2022 | Team Udayavani |

ಹೊಸಪೇಟೆ: ಹಂಪಿಗೆ ಹೆಬ್ಟಾಗಿಲು ಎಂದೇ ಕರೆಸಿಕೊಳ್ಳುವ ತಾಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿಗೆ ಇದೀಗ ಪುರಸಭೆಯಾಗಿ ಮೇಲ್ದರ್ಜೇಗೇರುವ ಭಾಗ್ಯ ಒಲಿದು ಬಂದಿದ್ದು ಅಭಿವೃದ್ಧಿ ಪರ್ವ ಆರಂಭವಾಗಲಿದೆ. ಕಮಲಾಪುರ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ್ದು,ಈ ಭಾಗದ ಜನರ ಬಹುದಿನದ ಬೇಡಿಕೆ ಈಡೇರಿದೆ.

Advertisement

ಬಹು ವರ್ಷಗಳಿಂದ ಈ ಪಟ್ಟಣದ ನಾಗರಿಕರು ಮತ್ತು ಪಪಂ ಸದಸ್ಯರು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂದು ಸಚಿವ ಆನಂದ್‌ ಸಿಂಗ್‌ ಅವರಲ್ಲಿ ಬೇಡಿಕೆಯನ್ನಿಟ್ಟಿದ್ದರು. ಇದಕ್ಕೆ ಸ್ಪಂದಿಸಿದ ಸಚಿವ ಆನಂದ್‌ ಸಿಂಗ್‌ ಅವರು ಮಾರ್ಚ್‌ 11ರಂದು ನಡೆದ ಕ್ಯಾಬಿನೆಟ್‌ನಲ್ಲಿ ಈ ವಿಷಯವನ್ನು ತಂದಿದ್ದರು. ಈ ಬಗ್ಗೆ ವಿಸ್ತೃತ ಚರ್ಚೆ ನಡೆದು ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ ದೊರೆತಿದೆ.

ಗ್ರಾಪಂನಿಂದ ಪಪಂ

ಗ್ರಾಮ ಪಂಚಾಯಿತಿಯಾಗಿದ್ದ ಕಮಲಾಪುರ ಜನಸಂಖ್ಯೆ ಆಧಾರದಲ್ಲಿ 1998ರಲ್ಲಿ ಪಟ್ಟಣ ಪಂಚಾಯಿತಿಯಾಗಿ ಬಡ್ತಿ ಪಡೆದಿತ್ತು. ಈಗ ಪುರಸಭೆಯಾಗಿ ಮೇಲ್ದರ್ಜೆಗೇರಿದೆ. ಇದರಿಂದ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೂ ಅನುಕೂಲವಾಗಲಿದೆ.

ಪುರಸಭೆಗೆ ಪ್ರಸ್ತಾವನೆ ಸಲ್ಲಿಕೆ

Advertisement

ಕಮಲಾಪುರ ಪಟ್ಟಣವನ್ನು ಜನಗಣತಿ ಆಧಾರದ ಮೇಲೆ ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರಕ್ಕೆ ಈ ಹಿಂದೆಯೇ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕಮಲಾಪುರ ಪಪಂ ಮುಖ್ಯಾಧಿಕಾರಿಗಳು 2021ರ ಡಿಸೆಂಬರ್‌ 20ರಂದು ಮತ್ತು ಜಿಲ್ಲಾಧಿಕಾರಿಗಳು ಫೆ. 21ರಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಬಳಿಕ ಸರ್ಕಾರದ ಕಾರ್ಯದರ್ಶಿಗೆ ಸಲ್ಲಿಸಲಾಗಿತ್ತು. ಈ ಬಗ್ಗೆ ಪಟ್ಟಣ ಪಂಚಾಯತ್‌ನ ಸಭೆಯಲ್ಲೂ ನಿರ್ಣಯ ಅಂಗೀಕರಿಸಲಾಗಿತ್ತು.

ಕಮಲಾಪುರದ ಜನಸಂಖ್ಯೆ ಎಷ್ಟಿದೆ?

2011ರ ಜನಗಣತಿ ಅನ್ವಯ ಕಮಲಾಪುರದ ಜನಸಂಖ್ಯೆ 25,552 ಇದೆ. ವಾರ್ಷಿಕವಾಗಿ ಶೇ. 1.50ರಷ್ಟು ಜನಸಂಖ್ಯೆ ಬೆಳವಣಿಗೆಯಾಗಿದ್ದು, 2021ಕ್ಕೆ ಪಟ್ಟಣದ ಜನಸಂಖ್ಯೆ 29, 385 ಅಗುತ್ತದೆ. ಈ ಪಟ್ಟಣ 39.60 ಚ.ಕಿ.ಮೀ ವ್ಯಾಪ್ತಿ ಹೊಂದಿದ್ದು, ಪ್ರತಿ ಚ.ಕಿ.ಮೀ.ಗೆ 742 ಜನಸಾಂದ್ರತೆ ಹೊಂದಿದೆ. ಪ್ರಸ್ತುತ ಪಟ್ಟಣ ಪಂಚಾಯತ್‌ ಸರಹದ್ದನ್ನೇ ಪುರಸಭೆ ಸರಹದ್ದಾಗಿ ಗುರುತಿಸಲಾಗಿದೆ. ಹಾಗಾಗಿ ಪುರಸಭೆಯಾದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದಲೂ ಅನುದಾನ ಹರಿದು ಬರಲಿದೆ. ಇದರಿಂದ ಹಂಪಿಗೆ ಭೇಟಿ ನೀಡುವ ಪ್ರವಾಸಿಗರು ಕಮಲಾಪುರಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಕಮಲಾಪುರ ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಕೈಗೊಂಡು ಈ ಭಾಗದಲ್ಲೂ ಉದ್ಯೋಗ ಸೃಷ್ಟಿಸಲು ಪುರಸಭೆಯಿಂದ ಅನುಕೂಲ ಆಗಲಿದೆ ಎಂಬುದು ಕಮಲಾಪುರ ಪಟ್ಟಣದ ಸದಸ್ಯರ ಅಭಿಪ್ರಾಯವಾಗಿದೆ.

-ಪಿ.ಸತ್ಯನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next