Advertisement

ನಗರಸಭೆ ಅಕ್ರಮ ವ್ಯವಹಾರ ತನಿಖೆ ನಡೆಸಲಿ

02:52 PM Mar 01, 2022 | Team Udayavani |

ಹಾಸನ: ಹಾಸನ ನಗರಸಭೆ ಲೂಟಿಕೋರರ ಕೈ ಸೇರಿದೆ. ಕಳೆದ 10ತಿಂಗಳಲ್ಲಿ ನಗರಸಭೆಯಲ್ಲಿ ಸಮರ್ಪಕವಾಗಿ ಸಾಮಾನ್ಯ ಸಭೆ ನಡೆದಿಲ್ಲ. ಆದರೂ, ಸರ್ವಾನುಮತದಿಂದ ಅನುಮೋದನೆ ದೊರೆತಿದೆ ಎಂದು ಲೂಟಿ ಮಾಡುತ್ತಿರುವ ಬಗ್ಗೆ ಲೋಕಾಯುಕ್ತ ಅಥವಾ ಸಿಐಡಿ ತನಿಖೆ ನಡೆಯಬೇಕು ಎಂದು ಜೆಡಿಎಸ್‌ ಮುಖಂಡ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಒತ್ತಾಯಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ನಗರಸಭೆಯಲ್ಲಿ ಬಹುಮತವಿಲ್ಲದಿದ್ದರೂ ಮೀಸಲಾತಿ ಬಲದಲ್ಲಿ ಹಿಂಬಾಗಿಲಿ  ನಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿಯವರು ನಗರಸಭೆಯಲ್ಲಿಲೂಟಿ ಮಾಡುವುದನ್ನು ಪ್ರಶ್ನಿಸುವ ಜೆಡಿಎಸ್‌ ಸದಸ್ಯರ ವಿರುದ್ಧ ಪ್ರತಿಭಟನೆ ಮುಂದಾಗುತ್ತಾರೆ. ಇದು ನಗರಸಭೆಯಲ್ಲಿ ಆಡಳಿತ ನಡೆಸುವ ರೀತಿಯೇ ಎಂದು ತರಾಟೆಗೆ ತೆಗೆದುಕೊಂಡರು.

ಗುಣಮಟ್ಟದ ಅಭಿವೃದ್ಧಿ ಆಗುತ್ತಿಲ್ಲ: ಹಣ ಲೂಟಿ ಮಾಡುವುದನ್ನು ಬಿಟ್ಟರೆ ಹಾಸನ ನಗರದಲ್ಲಿ ಗುಣಮಟ್ಟದ ಅಭಿವೃದ್ಧಿ ಆಗುತ್ತಿಲ್ಲ.ಕಾನೂನು ಬಾಹಿರ ಕಾಮಗಾರಿಗಳನ್ನು ಮಾಡಿ ಹಣ ಲೂಟಿ ಮಾಡು ತ್ತಿದ್ದಾರೆ. ಹಾಸನ ನಗರಸಭೆಯ ಹಿಂದಿನ ಮತ್ತು ಈಗಿನ ಆಯುಕ್ತರು,ಎಂಜಿನೀಯರ್‌ಗಳು ಹಾಗೂ ಟೌನ್‌ ಪ್ಲಾನಿಂಗ್‌ ಎಂಜಿನೀಯರುಗಳನ್ನು ಸಸ್ಪೆಂಡ್‌ ಮಾಡಿ ಅಕ್ರಮಗಳ ಬಗ್ಗೆ ತನಿಖೆ ನಡೆಸಬೇಕು. ಈಸಂಬಂಧ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಯವರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸುಳ್ಳು ದಾಖಲೆ ಸೃಷ್ಟಿ: ಹಾಸನ ನಗರಸಭೆಯಲ್ಲಿ ಪ್ರಮುಖ ವಿಷಯಗಳ ಬಗ್ಗೆ ಸಾಮಾನ್ಯಸಭೆಯಲ್ಲಿ ಚರ್ಚೆ ನಡೆಸಿ ಅನುಮೋದನೆ ಪಡೆಯದೆ ಸರ್ವಾನುಮತದಿಂದ ಅಂಗೀಕಾರ ಪಡೆಯಲಾಗಿದೆಎಂದು ಸುಳ್ಳು ದಾಖಲೆ ನಿರ್ಮಿಸಿ ಹಣ ಲೂಟಿ ಮಾಡಲಾಗುತ್ತಿದೆ. ವಿರೋಧ ಪಕ್ಷ ಜೆಡಿಎಸ್‌ ಸದಸ್ಯರ ಯಾವುದೇ ಮನವಿಯನ್ನೂಸ್ವೀಕರಿಸದೆ, ಏಕ ಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ಬೋಗಸ್‌ ಎಸ್ಟಿಮೇಟ್‌ ಮಾಡಿ ಅಕ್ರಮ ಎಸಗಲಾಗಿದೆ. ಹಾಸನ ನಗರದಲ್ಲಿ ನೀರಾವರಿ ಇಲಾಖೆ ಅನುದಾನದಲ್ಲಿ ಕಾಂಕ್ರೀಟ್‌ ರಸ್ತೆ, ಪಾರ್ಕ್‌ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ದೂರಿದರು.

ಹಣ ಲೂಟಿ ಸಹಿಸಲ್ಲ: ನಗರಸಭೆ ಸಾಮಾನ್ಯ ಸಭೆಯಲ್ಲಿ ಜಿಲ್ಲಾಧಿಕಾರಿಯವರೇ ಒಬ್ಬ ಅಧಿಕಾರಿಯನ್ನು ನೇಮಿಸಿ ಸಂಪೂರ್ಣ ವೀಡಿಯೋ ಮಾಡಿಸಿ ಪರಿಶೀಲಿಸಲಿ. ಈ ಸಂಬಂಧ ಜಿಲ್ಲಾಧಿಕಾರಿ ಯವರಿಗೆ ಮನವಿ ಸಲ್ಲಿಸಲಾಗಿದೆ. ಹಾಸನ ನಗರದ ಅಭಿವೃದ್ಧಿಹಾಗೂ ಜನಹಿತದ ಕೆಲಸಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ.ಆದರೆ, ಹಣ ಲೂಟಿ ಮಾಡುವುದನ್ನು ಜೆಡಿಎಸ್‌ ಸದಸ್ಯರು ಸಹಿಸುವುದಿಲ್ಲ ಎಂದು ಹೇಳಿದರು.

Advertisement

ಹಾಸನ ನಗರಸಭೆಯಲ್ಲಿಯಷ್ಟೇ ಅಕ್ರಮ ನಡೆದಿಲ್ಲ. ಹಾಸನ ನಗರಕ್ಕೆ ಹೊಂದಿಕೊಂಡಂತಿರುವ ಸತ್ಯಮಂಗಲ ಗ್ರಾಪಂ, ಕಾಟೀಹಳ್ಳಿಮತ್ತು ಹರಳಹಳ್ಳಿ ಗ್ರಾಮ ಪಂಚಾಯತಿಗಳಲ್ಲೂ ಅಕ್ರಮ ನಡೆದಿದ್ದು,ಕೋಟ್ಯಂತರ ರೂ. ಲೂಟಿ ನಡೆದಿದೆ. ಈ ಬಗ್ಗೆ ತನಿಖೆ ನಡೆಯಲಿ ಎಂದು ಆಗ್ರಹಪಡಿಸಿದರು. ಜಿಪಂ ಮಾಜಿ ಉಪಾಧ್ಯಕ್ಷ ಎಚ್‌.ಪಿ.ಸ್ವರೂಪ್‌ ಹಾಜರಿದ್ದರು.

ಹಾಸನಕ್ಕೆ ಬಿಜೆಪಿ ಕೊಡುಗೆ ಏನು :

ಈ ಹಿಂದೆ ಜೆಡಿಎಸ್‌ – ಕಾಂಗ್ರೆಸ್‌ ಸರ್ಕಾರದಲ್ಲಿ ಮಂಜೂರಾದಅಭಿವೃದ್ಧಿ ಯೋಜನೆಗಳನ್ನು ಹೊರತುಪಡಿಸಿದರೆ, ಕಳೆದ ಎರಡೂವರೆ ವರ್ಷಗಳಲ್ಲಿ ಬಿಜೆಪಿ ಸರ್ಕಾರ ಹಾಸನ ನಗರದ ಅಭಿವೃದ್ಧಿಗೆ ಏನು ಕೊಡುಗೆ ಕೊಟ್ಟಿದೆ? ಯಡಿಯೂರಪ್ಪ ಅವರು ಅಕ್ರಮವಾಗಿ ಮೀಸಲಾತಿ ನಿಗದಿಪಡಿಸಿ ಹಿಂಬಾಗಿಲಿನಿಂದ ಹಾಸನ ನಗರಸಭೆಯಲ್ಲಿ ಅಧಿಕಾರ ಹಿಡಿದಿದ್ದೇ ಬಿಜೆಪಿಯ ಬಹುದೊಡ್ಡ ಕೊಡುಗೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ವ್ಯಂಗ್ಯವಾಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next