Advertisement
ನಗರದ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಮಾತನಾಡಿದ ಅವರು, ನಗರಸಭೆಯಿಂದ ಎಲ್ಲ ಸವಲತ್ತು ಪಡೆಯುವ ನಾಗರಿಕರು ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿ ಮಾಡಲು ಅವಕಾಶವಿದೆ. ಮನೆ ಕಟ್ಟಲು ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ತೆರಿಗೆ ಪಾವತಿ ಮಾಡಲು ಬಂದರು ಅಧಿಕಾರಿಗಳು ಆಸ್ತಿ ತೆರಿಗೆ ನಿರಾಕರಿಸುತ್ತಿದ್ದಾರೆ. ತೆರಿಗೆಪಾವತಿಯಾದರೆ ಮನೆಗಳಿಗೆ ಇ-ಖಾತೆ ನೀಡಬೇಕು ಎಂಬ ಕಾರಣಕ್ಕೆ ನಗರ ಸಭೆ ಆದಾಯದ ಮೂಲವನ್ನು ನಿರಾಕರಿಸುತ್ತಿರುವ ಕ್ರಮ ಸರಿಯಲ್ಲ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
Related Articles
Advertisement
ಇ ಖಾತೆಗೆ ಅಧಿಕಾರಿಗಳ ವಿಳಂಬ: ನಗರಸಭೆ ಸದಸ್ಯ ಜಯರಾಮು ಮಾತನಾಡಿ, ನಾನು ಒಬ್ಬ ನಗರಸಭೆ ಸದಸ್ಯ ಇ-ಖಾತೆಗಾಗಿ ಅರ್ಜಿ ಸಲ್ಲಿಸಿದ್ದೇನೆ. ಆರು ತಿಂಗಳು ಕಳೆದರೂ ನನಗೆ ಇನ್ನು ಇ- ಖಾತೆ ಮಾಡಿಕೊಟ್ಟಿಲ್ಲ. ಸಾರ್ವಜನಿಕರಿಗೆ ಹೇಗೆ ಇ ಖಾತೆ ಕೊಡುತ್ತೀರಿ? ನಗರದ ಲ್ಲಿರುವ ಶಿರಾ ಹಳ್ಳ ಮತ್ತು ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡುತ್ತಿದ್ದಾರೆ. ರಾಜಕಾಲುವೆ ಪಕ್ಕದಲ್ಲೇ ಮನೆ ನಿರ್ಮಾಣ ಮಾಡುತ್ತಿರುವ ಕೆಲವರು 20×30ಕ್ಕೆ
ಅನುಮತಿ ಪಡೆದು 60×80ಕ್ಕೆ ಮನೆ ನಿರ್ಮಾಣ ಮಾಡಿದ್ದಾರೆ. ಅಧಿಕಾರಿಗಳು ಸ್ಥಳ ಪರಿಶೀಲನಮಾಡದೆ ಅನುಮತಿ ಕೊಟ್ಟಿದ್ದಾರೆ. ನಗರದಲ್ಲಿ ಎಷ್ಟು ಶಿರ ಹಳ್ಳ ಮತ್ತು ರಾಜ ಕಾಲುವೆಗಳಿವೆ. ಅವುಗಳವಿಸ್ತೀರ್ಣ ಎಷ್ಟು ಮಾಹಿತಿ ಕೊಡಿ ಎಂದರು.
6500 ಇ-ಖಾತೆ ಬಾಕಿ: ನಗರಸಭೆ ಪೌರಾಯುಕ್ತೆ ಶುಭ ಮಾತನಾಡಿ, ನಗರಸಭೆ ವ್ಯಾಪ್ತಿಯ ಲ್ಲಿ 6500ಇ-ಖಾತೆ ಆಗಬೇಕಿದೆ. ವಾರ್ಡ್‌ವಾರು ಸಭೆ ನಡೆಸಿ ಬಾಕಿ ಇರುವ ಖಾತೆಗಳನ್ನು ಸ್ಥಳದಲ್ಲಿ ಮಾಡಿಕೊಡು ವಂತೆ ಯೋಜನೆ ರೂಪಿಸಲಾಗಿದೆ. ವಾರ್ಡ್‌ಗಳಲ್ಲಿಇ-ಖಾತೆ ಜೊತೆಗೆ ನೀರಿನ ತೆರಿಗೆ ಮತ್ತು ಕಂದಾಯವಸೂಲಿ ಮಾಡಲು ಚಿಂತನೆ ನಡೆಸಲಾಗಿದೆ. ಬ್ಯಾಂಕಿನಲ್ಲಿ ಚಲನ್ ಕಟ್ಟಲು ಅಲೆದಾಡುವ ಬದಲನಗರಸಭೆಯ ಲ್ಲಿ ಹಣ ಪಾವತಿ ಮಾಡಿ ಸ್ಥಳದಲ್ಲಿ ಇ-ಖಾತೆ ಕೊಡಬಹುದು. ಇವೆಲ್ಲವನ್ನು ಸುಧಾ ರಣೆ ಮಾಡಬೇಕಾಗಿದೆ. ಅದಕ್ಕೆ ಎಲ್ಲರ ಸಹಕಾರ ಬೇಕು.ಬಾಕಿಯಿರುವ 6500 ಇ-ಖಾತೆ ಮಾಡುವುದು ನಮ್ಮಧ್ಯೇಯೋದ್ದೇಶ. ವಾರ್ಡ್‌ವಾರು ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ಸಭೆಯಲ್ಲಿ ಅಧ್ಯಕ್ಷ ವೆಂಕಟೇಶ್, ಪರಿಸರ ಇಲಾಖೆ ಪಾರ್ವತಿ, ಲೆಕ್ಕಾಧಿಕಾರಿ ನಟರಾಜ್, ಎಂಜಿನಿಯರ್ ವಿಜಯ್ ಕುಮಾರ್, ನಗರಸಭಾ ಮಾಜಿ ಅಧ್ಯಕ್ಷ ಮಕ್ಬುಲ್ ಪಾಷಾ, ಸದಸ್ಯರಾದ ಸ್ಟುಡಿಯೋ ಚಂದ್ರು,ನಾಗರಾಜು, ಕೃಷ್ಣಪ್ಪ, ರಾಮ ದಾಸು, ಕಿರಣ್, ಮಾಲತಿಸೇರಿದಂತೆ 31 ಸದಸ್ಯರು ನಗರಸಭೆ ಅಧಿಕಾರಿಗಳು ಹಾ ಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಲೈಸೆನ್ಸ್ ದರ ಏರಿಕೆ :
ನಗರಸಭೆ ವ್ಯಾಪ್ತಿಯಲ್ಲಿರುವ ಆಟೋಮೊಬೈಲ್ಸ್, ಬೇಕರಿ, ಕಾಂಡಿಮೆಂಟ್ಸ್, ಹೋಟೆಲ್, ಉದ್ದಿಮೆ,ವಸತಿಗೃಹ, ಅಂಗಡಿ ಮಳಿಗೆ, ಬಾರ್ ಅಂಡ್‌ರೆಸ್ಟೋರೆಂಟ್, ಬುಕ್ ಸ್ಟಾಲ್, ಬೆಳ್ಳಿ-ಬಂಗಾರದ ಅಂಗಡಿ, ಬಾಳೆಮಂಡಿ, ಬೀಡಿ ತಯಾರಿಕೆ ಮತ್ತುಮಾರಾಟ, ಬ್ಯೂಟಿ ಪಾರ್ಲರ್, ಸೆಲೂನ್, ಬಟ್ಟೆಅಂಗಡಿ, ಶಾ ಮಿಲ್, ಕಲ್ಯಾಣ ಮಂಟಪ, ಸಭಾಂಗಣ, ಆಯಿಲ್ ಮಿಲ್ ಸೇರಿದಂತೆ 175 ಉದ್ದಿಮೆ ಪರವಾನಗಿ ಶುಲ್ಕ ಏರಿಕೆ ಮಾಡಲು ಸಭೆಯಲ್ಲಿ ಅನುಮೋದನೆ ಪಡೆಯ ಲಾಯಿತು