Advertisement

ಮೂಲಸೌಕರ್ಯ ನೀಡದ ನಗರಸಭೆ

01:15 PM Jun 18, 2019 | Suhan S |

ತಿಪಟೂರು: ಹಲವಾರು ವರ್ಷದಿಂದ ನಗರಸಭೆಯ 12ನೇ ವಾರ್ಡ್‌ಗೆ ಸೇರಿದ್ದ ಹಳೆಪಾಳ್ಯದ ಕೆಂಚರಾಯ ನಗರವು (ಕಳ್ಕೆರೆ) ಈಗ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದೆ ಎಂದು ಕಾರಣ ಹೇಳಿ ವಾರ್ಡ್‌ಗೆ ಮೂಲಸೌಕರ್ಯ ನೀಡುತ್ತಿಲ್ಲ ಎಂದು ವಾರ್ಡ್‌ನ 50ಕ್ಕೂ ಹೆಚ್ಚು ನಿವಾಸಿಗಳು ನಗರಸಭೆ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ವಾರ್ಡ್‌ಗೆ ನೀರಿಲ್ಲ: ಈ ವೇಳೆ ಮಾತನಾಡಿದ ನಿವಾಸಿ ನಾರಾಯಣ್‌, ಕಳೆದ 2 ತಿಂಗಳಿನಿಂದಲೂ ನಮ್ಮ ವಾರ್ಡ್‌ಗೆ ನೀರು ಸಿಗುತ್ತಿಲ್ಲ. ಚರಂಡಿಗಳಲ್ಲಿ ನೀರು ಶೇಖರಣೆಯಾಗಿ ಗಬ್ಬು ನಾರುತ್ತಿದ್ದು, ಮಹಿಳೆಯರು, ಮಕ್ಕಳು, ವಯಸ್ಸಾದವರು ಕಾಯಿಲೆಗಳಿಗೆ ತುತ್ತಾಗುತ್ತಿ ದ್ದಾರೆ. ಬೀದಿದೀಪ ವ್ಯವಸ್ಥೆ ಇಲ್ಲ. ಬೋರ್‌ವೆಲ್ನಲ್ಲಿ ನೀರಿದ್ದರೂ, ಹೆಚ್ಚುವರಿ ಪೈಪ್‌ ಬಿಡದ ಕಾರಣ ನೀರು ಸಿಗುತ್ತಿಲ್ಲ. 2 ಕಿಮೀ ದೂರದ ಅಣ್ಣಾಪುರ, ಹಳೇ ಪಾಳ್ಯದಿಂದ ನೀರು ತರಬೇಕಾಗಿದೆ. ನಗರದಿಂದ ಹೊರ ಹೋಗುತ್ತಿರುವ ಕಸ ಸಂಗ್ರಹಣಾ ಘಟಕ ನಮ್ಮ ವಾರ್ಡ್‌ಗೆ ಸಮೀಪವಿದ್ದು, ಇದರಿಂದ ನಿತ್ಯವೂ ದುರ್ನಾತ ಬೀರುತ್ತಿದೆ. ಕಲುಷಿತ ಗಾಳಿಯಿಂದ ನಮಗೆ ನಿತ್ಯವೂ ಕಿರಿಕಿರಿ ಉಂಟಾಗುತ್ತಿದೆ.

15 ವರ್ಷದಿಂದ ನಗರಸಭೆಗೆ ಕಂದಾಯ ಪಾವತಿ ಸುತ್ತಿದ್ದೇವೆ. ಆದರೆ ಈಗ ನಿಮ್ಮ ವಾರ್ಡ್‌ ನಗರಸಭೆಗೆ ಸೇರಿಲ್ಲ, ಹುಚ್ಚಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುತ್ತದೆ. ನೀವು ಅಲ್ಲಿ ಸಮಸ್ಯೆ ಬಗೆಹರಿಸಿ ಕೊಳ್ಳಿ ಎಂದು ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಗ್ರಾಮ ಪಂಚಾಯಿತಿಯಲ್ಲಿ ವಿಚಾರಿಸಿ ದರೆ ನಮಗೆ ಇನ್ನು ಯಾವುದೇ ಮಾಹಿತಿ ಬಂದಿಲ್ಲ ಎನ್ನುತ್ತಾರೆ. ಇದರಿಂದ ನಮ್ಮ ವಾರ್ಡ್‌ನಲ್ಲಿ ಮೂಲ ಭೂತ ಸೌಕರ್ಯಗಳೇ ಇಲ್ಲದಂತಾಗಿದೆ. ಅಲ್ಲದೆ ಈ ಬಾರಿ ನಗರಸಭೆ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಮತದಾರರಿದ್ದರೂ, ಮತದಾನ ಮಾಡಲು ಅವಕಾಶ ನೀಡಿಲ್ಲ. ನಗರಸಭೆ ಅಧಿಕಾರಿಗಳು ನಮ್ಮ ವಾರ್ಡ್‌ ನಿರ್ಲಕ್ಷಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಕುಡಿಯಲು ನೀರಿಲ್ಲ: ವರಲಕ್ಷ್ಮಮ್ಮ ಮಾತನಾಡಿ, 120 ಮನೆಗಳಿರುವ ನಮ್ಮ ವಾರ್ಡ್‌ನಲ್ಲಿ ನಿತ್ಯ ಬಳಕೆಗೆ ಮತ್ತು ಕುಡಿಯಲು ನೀರಿಲ್ಲದಂತಾಗಿದೆ. ಉಳ್ಳವರು ಟ್ಯಾಂಕರ್‌ ಮೂಲಕ ನೀರು ಪೂರೈಸಿಕೊಳ್ಳುತ್ತಾರೆ. ನಾವು ಕೂಲಿ ಮಾಡುವ ಜನ 2 ಕಿ.ಮೀ ದೂರದಿಂದ ನೀರು ತರಬೇಕಿದೆ. ಅಧಿಕಾರಿಗಳು ನಮ್ಮನ್ನು ಕೀಳಾಗಿ ನೋಡುತ್ತಿದ್ದಾರೆ ಎಂದು ಹರಿಹಾಯ್ದರು.

ಸಮಸ್ಯೆ ಕೇಳುತ್ತಿಲ್ಲ: ಶಶಿಕುಮಾರ್‌ ಮಾತನಾಡಿ, ನಮ್ಮ ವಾರ್ಡ್‌ ಸಮಸ್ಯೆಗಳ ಆಗರವಾಗಿದೆ. ಅಧಿಕಾರಿಗಳು ನಮ್ಮ ಸಮಸ್ಯೆ ಕೇಳುತ್ತಿಲ್ಲ. ಬೆಳಗ್ಗೆಯಿಂದ ಕಾದು ಕುಳಿತರೂ ಸಮಸ್ಯೆಗೆ ಸ್ಪಂದಿಸದೆ ಪೊಲೀಸರನ್ನು ಕರೆಸು ವುದಾಗಿ ಹೇಳುತ್ತಾರೆ. ಈ ಬಗ್ಗೆ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ಕಸ ಸಂಗ್ರಹಣಾ ಘಟಕ ಸಮೀಪದಲ್ಲೆ ಇರುವುದರಿಂದ ನಾಯಿಗಳ ಹಾವಳಿ ಹೆಚ್ಚಾಗಿದೆ. ನಮ್ಮ ಮನೆಯ ಪತ್ರಗಳು ನಗರಸಭೆಯ ವ್ಯಾಪ್ತಿಯಲ್ಲಿವೆ ಆದರೆ ನಗರಸಭೆ ಅಧಿಕಾರಿಗಳು ಇದಕ್ಕೆ ಉತ್ತರ ನೀಡದೆ ಗ್ರಾಮ ಪಂಚಾಯಿತಿ ಮೇಲೆ ಆರೋಪಿಸುತ್ತಿದ್ದಾರೆ ಎಂದು ಕಿಡಿಕಾರಿದರು. ನಿವಾಸಿಗಳಾದ ಭಾಸ್ಕರ್‌, ದಯಾನಂದ್‌, ನಾಗರಾಜು, ರಮೇಶ್‌, ರಾಜು, ಗಂಗಾಧರಯ್ಯ, ನಾಗಮ್ಮ, ಧನಲಕ್ಷಿ ್ಮೕ, ಕಮಲಮ್ಮ, ಉಮಾದೇವಿ, ರಾಜಮ್ಮ, ಗಂಗಮ್ಮ ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next