Advertisement

ಪುರಸಭೆಗೆ ಸಂಸದರ ಭೇಟಿ; ಆಡಳಿತ ಪಕ್ಷದವರ ಗೈರು ಹಾಜರು: ಆಕ್ರೋಶ

03:45 AM Jun 30, 2017 | Team Udayavani |

ಕಾಪು: ಇಲ್ಲಿನ ಪುರಸಭಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರ ಸಮಸ್ಯೆಗಳ ಬಗ್ಗೆ ಸಂಸದರೇ ಪುರಸಭೆಗೆ ಬಂದು ಉತ್ತರಿಸಬೇಕು ಎಂದು ಹಿಂದಿನ ಸಭೆಯಲ್ಲಿ ಆಗ್ರಹಿಸಿದ್ದ ಆಡಳಿತ ಪಕ್ಷದ ಸದಸ್ಯರು, ಸಂಸದರ ಭೇಟಿಯ ಸಂದರ್ಭ ಗೈರು ಹಾಜರಾಗಿದ್ದು ಯಾಕೆ? ಎಂಬ ವಿಪಕ್ಷ ಸದಸ್ಯರ ಪ್ರಶ್ನೆಯಿಂದಾಗಿ ಗುರುವಾರ ನಡೆದ ಕಾಪು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಭಾರೀ ಮಾತಿನ ಚಕಮಕಿ ನಡೆಯಿತು.

Advertisement

ಸಂಸದರಿಗೆ ಅಗೌರವ ಸರಿಯೇ ?
ಜೂ. 29ರಂದು ಪುರಸಭಾಧ್ಯಕ್ಷೆ  ಸೌಮ್ಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಪು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಕಳೆದ ಶನಿವಾರ ಸಂಸದೆ ಶೋಭಾ ಕರಂದ್ಲಾಜೆ ಅವರು ಕಾಪು ಪುರಸಭೆಗೆ ಭೇಟಿ ನೀಡಿದಾಗ ಪುರಸಭೆ ಅಧ್ಯಕ್ಷರ ಸಹಿತವಾಗಿ ಆಡಳಿತ ಪಕ್ಷದ 11 ಜನರು ಗೈರಾಗುವ ಮೂಲಕ ಸಂಸದರಿಗೆ ಅಗೌರವ ತೋರಿಸಿದ್ದಾರೆ. ಇದು ಸರಿಯೇ ? ಈ ಬಗ್ಗೆ ಆಡಳಿತ ಪಕ್ಷದ ಪರವಾಗಿ ಅಧ್ಯಕ್ಷರು ಸ್ಪಷ್ಟನೆ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಅರುಣ್‌ ಶೆಟ್ಟಿ, ಸದಸ್ಯರಾದ ಕಿರಣ್‌ ಆಳ್ವ, ಅನಿಲ್‌ ಕುಮಾರ್‌ ಅವರು ಆಗ್ರಹಿಸಿದರು.

ಇದಕ್ಕುತ್ತರಿಸಿದ ಪುರಸಭಾಧ್ಯಕ್ಷೆ ಕು| ಸೌಮ್ಯಾ ಅವರು ಅನಾರೋಗ್ಯದ ಕಾರಣ ನಾನು ಆಸ್ಪತ್ರೆಗೆ ತೆರಳಿದ್ದೆ ಎಂದು ಸಮಜಾಯಿಷಿ ನೀಡಿದರು. ಇದರಿಂದ ತƒಪ್ತರಾಗದ ವಿಪಕ್ಷ ಸದಸ್ಯರು ನಿಮಗೆ ಅನಾರೋಗ್ಯ ಇತ್ತಾದರೆ ಇತರರು ಬರಬಹುದಿತ್ತಲ್ಲವೇ?, ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆಗೆ ಸಂಸದರೇ ಉತ್ತರಿಸಬೇಕು. ಅವರು ಪುರಸಭೆಗೆ ಭೇಟಿ ನೀಡಬೇಕೆಂದವರು ನೀವೇ. ಆದರೆ ಸಂಸದರು ಬಂದಾಗ ಗೆ„ರಾಗಿರುವುದು ರಾಜಕೀಯವಲ್ಲವೇ ಎಂದರು.

ಮತ್ತೂಮ್ಮೆ ಸಂಸದರ 
ಭೇಟಿಗೆ ದಿನ ನಿಗದಿ

ಇದು ಆಡಳಿತ -ವಿಪಕ್ಷ ಸದಸ್ಯರ ಮಾತಿನ ಚಕಮಕಿಗೆ ಕಾರಣವಾಯಿತು. ಈ ಬಗ್ಗೆ ಎರಡೂ ಕಡೆಗಳಿಂದ ಸದಸ್ಯರು ಪರಸ್ಪರ ಚರ್ಚೆ ನಡೆಸಲಾರಂಭಿಸಿದರು. ಸಂಸದರು ಬರುವ ಹಿಂದಿನ ದಿನವೇ ಪುರಸಭೆಯ ಮುಖ್ಯಾಧಿಕಾರಿಗೆ ಮಾಹಿತಿ ನೀಡಲಾಗಿದೆ. ಅವರು ಎಲ್ಲ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಮುಂದೆ ಮತ್ತೂಮ್ಮೆ ಸಂಸದರ ಸಮಯ ನಿಗದಿ ಮಾಡಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಪುರಸಭಾಧ್ಯಕ್ಷೆ ಕು| ಸೌಮ್ಯಾ ತಿಳಿಸಿದರು.

ಹಸಿರೀಕರಣ ಯೋಜನೆಗೆ 
70 ಸಾವಿರ ಗಿಡ ಪೂರೈಕೆ 

ಪುರಸಭೆ ವ್ಯಾಪ್ತಿಯಲ್ಲಿ ಹಸಿರೀಕರಣ ಯೋಜನೆಗೆ ಅರಣ್ಯ ಇಲಾಖೆ 70 ಸಾವಿರ ಗಿಡಗಳನ್ನು ನೀಡಲಿದ್ದು, ಒಂದು ತಿಂಗಳೊಳಗೆ ಎಲ್ಲ 23 ವಾರ್ಡ್‌ಗಳಲ್ಲಿ ಶಾಲಾ ಮಕ್ಕಳು, ಸಂಘ – ಸಂಸ್ಥೆಗಳ ಸಹಯೋಗದಲ್ಲಿ ಗಿಡಗಳನ್ನು ನೆಡಲು ಕಾರ್ಯೋನ್ಮುಖರಾಗುವಂತೆ ಪುರಸಭೆಗೆ ಶಾಸಕ ಸೊರಕೆ ಸಲಹೆ ನೀಡಿದರು.

Advertisement

ಅಗ್ನಿಶಾಮಕ ಠಾಣೆ, 
ಮೌಲಾನಾ ಅಜಾದ್‌ ಶಾಲೆ 

ಕಾಪುವಿಗೆ ನೂತನವಾಗಿ ಅಗ್ನಿಶಾಮಕ ಠಾಣೆ ಮಂಜೂರಾತಿ ಹಂತದಲ್ಲಿದೆ. ಮೌಲಾನಾ ಅಜಾದ್‌ ಶಾಲೆ ಮಂಜೂರಾಗಿದ್ದು, ಮಲ್ಲಾರಿನಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೆಯ ಕಟ್ಟಡದಲ್ಲಿ ಅದನ್ನು ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

ಯೋಜನಾ ಪ್ರಾಧಿಕಾರವೇ 
ಸುಪ್ರೀಂ ಆಗಿದೆಯೇ ?

ಬಹುಮಹಡಿ ಕಟ್ಟಡಗಳ ಪರವಾನಿಗೆ ನವೀಕರಣಕ್ಕೆ ನಗರ ಯೋಜನಾ ಪ್ರಾಧಿಕಾರದ ಅನುಮತಿ ಪಡೆಯಬೇಕೆನ್ನುವುದು ಸರಿಯಲ್ಲ. ಪ್ರಾಧಿಕಾರದ ತಾಂತ್ರಿಕ ತೊಂದರೆಯಿಂದ ವಿನ್ಯಾಸ ಅನುಮೋದನೆಯಾಗದೆ, ಹಿಂದೆ ಭೂ ಪರಿವರ್ತನೆ, 9/11 ಆಗಿರುವ ಜಮೀನಿನಲ್ಲಿ ಮನೆ ನಿರ್ಮಾಣ ಮಾಡುವವರಿಗೆ ತೊಂದರೆಯಾಗುತ್ತಿದೆ ಎಂದು ವಿಪಕ್ಷ ನಾಯಕ ಅರುಣ್‌ ಶೆಟ್ಟಿ ಪಾದೂರು ಮತ್ತು ಆಡಳಿತ ಪಕ್ಷದ ಸದಸ್ಯ ಹರೀಶ್‌ ನಾಯಕ್‌ ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ರಾಯಪ್ಪ ಪುರಸಭಾ ವ್ಯಾಪ್ತಿಯಲ್ಲಿ ತಳಮಟ್ಟದಿಂದ ಹಿಡಿದು ಮೂರು ಅಂತಸ್ತಿಗಿಂತ ಹೆಚ್ಚಿನ ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡಲಾಗುವುದಿಲ್ಲ. ಅದಕ್ಕೆ ಮೀರಿದ ಪರವಾನಿಗೆಗಾಗಿ ಯೋಜನಾ ಪ್ರಾಧಿಕಾರದ ಅನುಮತಿ ಪಡೆಯುವುದು ಕ‌ಡ್ಡಾಯ ಎಂದರು.

ಪುರಸಭಾ ವ್ಯಾಪ್ತಿಯಲ್ಲಿ ಎಲ್ಲೆಂದ ರಲ್ಲಿ ತ್ಯಾಜ್ಯ ಸುರಿದಲ್ಲಿ ದಂಡ ವಿಧಿಸಲಾಗುವುದು. ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ 2.50 ಲಕ್ಷ ರೂ. ಮೀಸಲಿರಿಸಿದ್ದು, ಆ ಹಣಕ್ಕೆ ಹೊಂದಿಕೊಂಡು ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು ಎಂದು ಮುಖ್ಯಾಧಿಕಾರಿ ತಿಳಿಸಿದರು.ಪುರಸಭೆಯ ಉಪಾಧ್ಯಕ್ಷ ಕೆ.ಎಚ್‌. ಉಸ್ಮಾನ್‌, ಸ್ಥಾಯೀ ಸಮಿತಿ ಅಧ್ಯಕ್ಷ ಹಮೀದ್‌ ಮೂಳೂರು, ಪುರಸಭಾ ಸದಸ್ಯರು, ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಬ್ಯಾನರ್‌ ಅಳವಡಿಕೆಗೆ ಸ್ಥಳ ನಿಗದಿ
ಕಾಪು ಪೇಟೆಯಲ್ಲಿಯಾವುದೇ ಬ್ಯಾನರ್‌, ಬಂಟಿಂಗ್ಸ್‌ ಅಳವಡಿಕೆಯನ್ನು ನಿಷೇಧಿಸಿ ಅಧಿಸೂಚನೆ ಹೊರಡಿಸಲಾಗಿದೆ. ಇತರೆಡೆ ಬ್ಯಾನರ್‌, ಬಂಟಿಂಗ್ಸ್‌ ಅಳವಡಿಕೆಗೆ ಪುರಸಭೆಯ ಪರವಾನಿಗೆ ಕಡ್ಡಾಯವಾಗಿದೆ. ಖಾಸಗಿ ಸ್ಥಳಗಳಲ್ಲಿಯೂ ಬ್ಯಾನರ್‌ ಅಳವಡಿಕೆಗೆ ಪರವಾನಿಗೆ ಪಡೆಯಬೇಕು. ಪರವಾನಿಗೆ ಮೂವತ್ತು ದಿನಗಳ ಅವಧಿಗೆ ನೀಡಲಾಗುತ್ತಿದ್ದು, ಬ್ಯಾನರ್‌ ಅಳವಡಿಕೆಗೆ ಪ್ರತ್ಯೇಕ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಮುಖ್ಯಾಧಿಕಾರಿ ರಾಯಪ್ಪ ಮಾಹಿತಿ ನೀಡಿದರು.

ನೂತನ ಪ್ರವಾಸಿ ಬಂಗ್ಲೆ ನಿರ್ಮಾಣಕ್ಕೆ ಮನವಿ 
ಪ್ರಸ್ತುತ ಕಾಪುವಿನ ಪ್ರವಾಸಿ ಬಂಗ್ಲೆ ಜಾಗದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ನೂತನ ಬಂಗ್ಲೆ ನಿರ್ಮಿಸಲು ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಲಾಗಿದ್ದು, ಅಲ್ಲಿರುವ ಅಧಿಕಾರಿಗಳ ಹಳೆಯ ವಸತಿ ಗƒಹಗಳನ್ನು ತೆರವು ಮಾಡಿ ಹೊಸ ಕಟ್ಟಡ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.

ಕೊಳಚೆ ನೀರಿನ ಶುದ್ಧೀಕರಣ ಘಟಕಕ್ಕೆ ಅನುದಾನ ಹೆಚ್ಚಳಕ್ಕೆ ಪ್ರಸ್ತಾವನೆ
ಪುರಸಭೆಯ ವಾರ್ಷಿಕ ಆದಾಯ 5 ಕೋಟಿ ರೂ. ಮಾತ್ರವಿದ್ದು, ಎಸ್‌ಎಫ್‌ ನಿಧಿ ಹೆಚ್ಚು ನೀಡುವಂತೆ ಹಣಕಾಸು ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ಪುರಸಭಾ ವ್ಯಾಪ್ತಿಯಲ್ಲಿ ಕೊಳಚೆ ನೀರಿನ ಶುದ್ಧೀಕರಣ ಘಟಕ ನಿರ್ಮಾಣ ಮಾಡಲು ಈ ಹಿಂದೆ 3 ಕೋಟಿ ರೂ. ಅನುದಾನ ಮಂಜೂರಾಗಿತ್ತು. ಯೋಜನೆ ಅನುಷ್ಠಾನ ವಿಳಂಬವಾಗಿರುವುದರಿಂದ ಈಗ ಹೆಚ್ಚುವರಿ 1.50 ಕೋಟಿ ರೂ. ಅನುದಾನ ಬೇಕಾಗಿದ್ದು, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆಯೂ ಮುಖ್ಯಾಧಿಕಾರಿಗೆ ಶಾಸಕ ಸೊರಕೆ ಸೂಚನೆ ನೀಡಿದರು.

ಕಾಪುವಿಗೆ ಮಿನಿ ವಿಧಾನಸೌಧ : ಸೊರಕೆ
ತಾಲೂಕು ಕೇಂದ್ರವಾಗಿರುವ ಕಾಪುವಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಮಾಡಲು ಸೂಕ್ತ ಜಮೀನು ಗುರುತಿಸಿ ಯೋಜನೆ ರೂಪಿಸಬೇಕಿದೆ. ಮಾತ್ರ ವಲ್ಲದೇ ತಾಲೂಕು ಕೇಂದ್ರವಾಗಿರುವ ಕಾರಣ 1.50 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣ ಮಾಡಲು ಅನುದಾನ ಲಭಿಸಲಿದೆ. ಇವೆಲ್ಲದರ ಪ್ರಯೋಜನವನ್ನು ಪುರಸಭೆಯ ಮೂಲಕ ಪಡೆದು ಕೊಳ್ಳಬೇಕಿದೆ ಎಂದು ಶಾಸಕ ವಿನಯ ಕುಮಾರ್‌ ಸೊರಕೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next