Advertisement

ಪುರಸಭೆ ವಸತಿ ಮಂಜೂರಾತಿ ಪತ್ರ ವಿತರಣೆ

02:22 PM Dec 16, 2017 | |

ಬಂಟ್ವಾಳ : ರಾಜ್ಯದಲ್ಲಿ ಕಳೆದ 60 ವರ್ಷಗಳ ಹಿಂದೆ ನಿವೇಶನರಹಿತ ಕುಟುಂಬಗಳ ಸಂಖ್ಯೆ ಗರಿಷ್ಠ ಪ್ರಮಾಣದಲ್ಲಿದ್ದವು. ಇದು ಕ್ರಮೇಣ ಹಂತ ಹಂತವಾಗಿ ಸಾಮಾಜಿಕ ಬದಲಾವಣೆ ಮೂಲಕ ಸರ್ವರಿಗೂ ಸೂರು ಒದಗಿಸುವ ನಿಟ್ಟಿನಲ್ಲಿ ಬಸವ ವಸತಿ ಯೋಜನೆ ಸಹಿತ ರಾಜೀವ್‌ ಗಾಂಧಿ ವಸತಿ ನಿಗಮ ಮತ್ತಿತರ ಯೋಜನೆಯಡಿ ಜನತೆಗೆ ಮನೆ ನಿವೇಶನದ ಜತೆಗೆ ಸರಕಾರವು ವಸತಿ ನಿರ್ಮಿಸಲು ಕೂಡ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.  ಅವರು ಡಿ. 14ರಂದು ಸಂಜೆ ಬಂಟ್ವಾಳ ಪುರಸಭೆಯಲ್ಲಿ ರಾಜೀವ್‌ ಗಾಂಧಿ ವಸತಿ ನಿಗಮ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ವಸತಿ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದರು.

Advertisement

ಪುರಸಭಾ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿ, ಇಲ್ಲಿನ ಪುರಸಭೆಗೆ ಉಸ್ತುವಾರಿ ಸಚಿವರು 10 ಕೋ. ರೂ. ಮಿಕ್ಕಿ ಅನುದಾನ ಒದಗಿಸಿದ್ದಾರೆ ಎಂದರು. ಸ್ಥಾಯೀ ಸಮಿತಿ ಅಧ್ಯಕ್ಷ ವಾಸು ಪೂಜಾರಿ, ಎಂಜಿನಿಯರ್‌ ಡೊಮಿನಿಕ್‌ ಡಿಮೆಲ್ಲೊ, ಸಮುದಾಯ ಅಭಿವೃದ್ಧಿ ಅಧಿಕಾರಿ ಮತ್ತಡಿ, ಮೇಲ್ವಿಚಾರಕಿ ಉಮಾವತಿ, ಪುರಸಭಾ ಸದಸ್ಯರಾದ ಗಂಗಾಧರ ಪೂಜಾರಿ, ಜಗದೀಶ ಕುಂದರ್‌, ಪ್ರವೀಣ್‌ ಬಿ., ಮಹಮ್ಮದ್‌ ಶರೀಫ್‌, ವಸಂತಿ ಚಂದಪ್ಪ, ಜೆಸಿಂತಾ ಡಿ’ಸೋಜಾ, ನಾರ್ಬರ್ಟ್‌ ಡಿ’ಸೋಜಾ, ಮತ್ತು ಆಶ್ರಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಸಹಾಯಧನ 
ರಾಜೀವ್‌ ಗಾಂಧಿ ವಸತಿ ನಿಗಮ ಯೋಜನೆಯಡಿ ವಸತಿ ಮಂಜೂರಾದ ಅರ್ಹ ಫಲಾನುಭವಿಗಳಿಗೆ ರಾಜ್ಯ ಸರಕಾರದಿಂದ 1.20 ಲ.ರೂ. ಮತ್ತು ಕೇಂದ್ರ ಸರಕಾರದಿಂದ 1.50 ಲ.ರೂ. ಹೀಗೆ ಒಟ್ಟು 2.70 ಲ.ರೂ. ವೆಚ್ಚದಲ್ಲಿ 700 ಚದರಡಿ ವಿಸ್ತೀರ್ಣದ ಮನೆ ನಿರ್ಮಿಸಲು ನಾಲ್ಕು ಹಂತದಲ್ಲಿ ಸಹಾಯಧನ ಬಿಡುಗಡೆಯಾಗುತ್ತದೆ.
ರೇಖಾ ಜೆ. ಶೆಟ್ಟಿ , ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next