Advertisement

ನಗರಸಭೆ ಚುನಾವಣೆ: ನಾಳೆಯಿಂದ ನಾಮಪತ್ರ ಸ್ವೀಕಾರ

12:36 PM Apr 07, 2021 | Team Udayavani |

ರಾಮನಗರ: ಚನ್ನಪಟ್ಟಣ ಹಾಗೂ ರಾಮನಗರನಗರಸಭೆಗಳ ಚುನಾವಣಾ ಅಧಿಸೂಚನೆ ಏ.8 ರಂದು ಹೊರಡಿಸಲಿದ್ದು, ಚುನಾವಣಾಧಿಕಾರಿಗಳಾಗಿನೇಮಕವಾಗಿರುವ ಅಧಿಕಾರಿಗಳು ಆಯೋಗ ನೀಡಿರುವ ನಿಯಮಗಳನ್ನು ಅನುಸರಿಸಿ ಮುಕ್ತ ಹಾಗೂ ಪಾರದರ್ಶಕ ಚುನಾವಣೆ ನಡೆಸುವಂತೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ ಕುಮಾರ್‌ ಸೂಚಿಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಚುನಾವಣಾಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಅಧಿಕಾರಿಗಳ ನಿರ್ಣಯವೇ ಅಂತಿಮವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳ ಪಾತ್ರ ಬಹಳ ಮಹತ್ವ ಹಾಗೂ ಜವಾಬ್ದಾರಿಯುತ ವಾಗಿರುತ್ತದೆ. ಇದೀಗ ಪಡೆಯುತ್ತಿರುವ ತರಬೇತಿ ಸದುಪಯೋಗಪಡಿಸಿಕೊಳ್ಳಿ. ಯಾವುದೇ ಸಂದೇಹವಿದ್ದಲ್ಲಿ ಪರಿಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಸಿದ್ಧತೆ ಮಾಡಿಕೊಳ್ಳಿ: ಚುನಾವಣೆಗೆ ಸಂಬಂಧಿಸಿದಂತೆನಾಮಪತ್ರ ಸಲ್ಲಿಕೆ ಏ.8 ರಿಂದ ಪ್ರಾರಂಭವಾಗಲಿದ್ದು,ಹಿಂದಿನ ದಿನವೇ ಚುನಾವಣಾಧಿಕಾರಿಗಳು ತಾವುಕಾರ್ಯನಿರ್ವಹಿಸುವ ಕಚೇರಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಿ, ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿವಿಡಿಯೋಗ್ರಫಿ ಮಾಡಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು. ಚುನಾವಣೆಗೆ ಮುನ್ನ ಬೇಕಾದ ಸಿದ್ಧತೆಗಳ ಬಗ್ಗೆ ಅವರು ಸಲಹೆ, ಸೂಚನೆಗಳನ್ನು ನೀಡಿದರು.

ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಮಾತನಾಡಿ, 7 ಅಥವಾ 8 ವಾರ್ಡ್‌ಗಳಿಗೆ ಒಬ್ಬರು ಚುನಾವಣಾಧಿ ಕಾರಿಯನ್ನು ನೇಮಕ ಮಾಡಲಾಗಿದೆ. ನಾಮಪತ್ರಸ್ವೀಕರಿಸುವಾಗ ವಾರ್ಡ್‌ವಾರು ಕಡತ ತೆರೆದುನಿರ್ವಹಿಸಿ ಎಂದು ಹೇಳಿದರು. ಹನುಮಂತನಗರಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕ ಪ್ರಭುಲಿಂಗಸ್ವಾಮಿಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕ ಸಿದ್ದಗಲಿಂಗಸ್ವಾಮಿ ಚುನಾವಣಾಧಿಕಾರಿಗಳಿಗೆ ತರಬೇತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next