Advertisement
ಹೆದ್ದಾರಿಯನ್ನು ವಿನ್ಯಾಸಗೊಳಿಸಿ ಅನುಷ್ಠಾನಗೊಳಿಸುವಾಗ ಪುರಸಭೆಗೆ ವಿನ್ಯಾಸದ ಮಾದರಿ ಪ್ರತಿ ನೀಡದೇ ಹಾಲಾಡಿ, ಉಡುಪಿ, ಮಂಗಳೂರು ಭಾಗದಿಂದ ಕುಂದಾಪುರ ಪಟ್ಟಣಕ್ಕೆ ಬರುವ ವಾಹನಗಳಿಗೆ ಸರಿಯಾಗಿ ಪ್ರವೇಶ ಮತ್ತು ನಿರ್ಗಮನಕ್ಕೆ ಸರಿಯಾದ ವ್ಯವಸ್ಥೆ ಮಾಡದೇ ಪೂರ್ತಿ ಕುಂದಾಪುರ ಪಟ್ಟಣ ತೊಂದರೆ ಅನುಭವಿಸುವಂತಾಗಿದೆ. ಇದರ ಪರಿಣಾಮವಾಗಿ ವ್ಯಾಪಾರಿಗಳು, ಸರಕಾರಿ ಕಚೇರಿಗಳು, ಆಸ್ಪತ್ರೆ, ದೇವಸ್ಥಾನ, ಕಲ್ಯಾಣ ಮಂಟಪ, ಶಾಲೆ ಕಾಲೇಜುಗಳು ತೊಂದರೆ ಅನುಭವಿಸುವಂತಾಗಿದೆ.
Related Articles
Advertisement
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕೇಂದ್ರ ಕಚೇರಿಯು ತನ್ನ ಪ್ರಕಟನೆಯಲ್ಲಿ ಯಾವುದೇ ಪಟ್ಟಣಗಳು ಇಬ್ಭಾಗವಾಗದಂತ ಮತ್ತು ಅಲ್ಲಿನ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಹೆದ್ದಾರಿಯನ್ನು ವಿನ್ಯಾಸಗೊಳಿಸಬೇಕು ಎಂದು ತನ್ನ ಪತ್ರಿಕಾ ಪ್ರಕಟನೆಯಲ್ಲಿ ಹೇಳಿದೆ. ನಿರ್ಧಾರ ಆಗುವವರೆಗೆ ತಾತ್ಕಾಲಿಕವಾಗಿ ಬೊಬ್ಬರ್ಯನಕಟ್ಟೆ ಹತ್ತಿರ ಪಟ್ಟಣಕ್ಕೆ ಪ್ರವೇಶ ನೀಡಲು ವಿನಂತಿಸಲಾಗಿದೆ.
ಹಾಗೆಯೇ ಹೆದ್ದಾರಿಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಶಾಸ್ತ್ರಿ ಸರ್ಕಲ್‌ನಲ್ಲಿ ಹೈಮಾಸ್ಟ್ ದೀಪ ಈ ವರೆಗೆ ಅಳವಡಿಸಿಲ್ಲ. ವಿನಾಯಕ ಥಿಯೇಟರ್ ಬಳಿ, ಹೊಟೇಲ್ ಹರಿಪ್ರಸಾದ್ ಬಳಿ, ಸಂಗಮ್ ಬಳಿ, ಮಳೆನೀರು ಹೋಗುವ ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದೆ. ಇದನ್ನೆಲ್ಲ ಸರಿಪಡಿಸಬೇಕು ಎಂದು ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್, ಉಪಾಧ್ಯಕ್ಷ ಸಂದೀಪ್ ಖಾರ್ವಿ, ಸ್ಥಾಯೀ ಸಮಿತಿ ಅಧ್ಯಕ್ಷ ಶೇಖರ್ ಪೂಜಾರಿ, ಸದಸ್ಯರಾದ ದೇವಕಿ ಸಣ್ಣಯ್ಯ, ಗಿರೀಶ್ ಜಿ.ಕೆ., ಸಂತೋಷ್ ಶೆಟ್ಟಿ, ವನಿತಾ ಬಿಲ್ಲವ, ಶ್ವೇತಾ ಸಂತೋಷ್, ಪ್ರಭಾಕರ್ ವಿ., ನಾಮನಿರ್ದೇಶಿತ ಸದಸ್ಯರಾದ ಪುಷ್ಪಾಶೇಟ್, ರತ್ನಾಕರ್ ಶೇರುಗಾರ್ ಉಪಸ್ಥಿತರಿದ್ದರು.
ಕಾಲಾವಕಾಶಜಿಲ್ಲಾಧಿಕಾರಿ ಅವರು ಪೂರಕವಾಗಿ ಸ್ಪಂದಿಸಿದ ಕಾರಣ 15 ದಿನಗಳ ಕಾಲಾವಕಾಶ ಕಾಯಲಾಗುತ್ತದೆ. ಅನಂತರ ನಾಗರಿಕರು, ಹೋರಾಟ ಸಮಿತಿಯವರು, ಪುರಸಭೆ ಸದಸ್ಯರು ಒಟ್ಟಾಗಿ ಜನರ ಅಭಿಪ್ರಾಯಕ್ಕೆ ಬೆಲೆ ನೀಡಲಿದ್ದೇವೆ. ಕಳೆದ 6 ತಿಂಗಳಿನಿಂದ ಈ ವಿಚಾರದಲ್ಲಿ ಸತಾಯಿಸಲಾಗುತ್ತಿದೆ. ಜನರ ಬೇಡಿಕೆಗೆ ಮನ್ನಣೆ ನೀಡಲಾಗುತ್ತಿಲ್ಲ.
-ಗಿರೀಶ್ ಜಿ.ಕೆ., ಸದಸ್ಯರು, ಪುರಸಭೆ