ಗೌರಿಬಿದನೂರು: ನಗರಸಭೆಯ ಮೊದಲನೇ ಅವಧಿಯ ಅಧಿಕಾರಾವಧಿ ಮುಕ್ತಾಯವಾಗಿದ್ದು, ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿಯತ್ತ ಆಕಾಂಕ್ಷಿಗಳ ಚಿತ್ತ ನೆಟ್ಟಿದೆ. ಮೊದಲ ಅವಧಿ ಮುಕ್ತಾಯವಾಗಿರುವುದರಿಂದ ಜಿಲ್ಲಾಧಿಕಾರಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಯಾರಿಗೂ ಬಹುಮತ ಸಿಗದ ಕಾರಣ ಅಧಿಕಾರ ಮೊದಲ ಎರಡೂವರೆ ವರ್ಷಗಳ ಅವಧಿಯಲ್ಲಿ ಕೆ.ಎಚ್. ಪುಟ್ಟಸ್ವಾಮಿಗೌಡರ ಬಣ ಇತರ ಬಣಗಳ ಬೆಂಬಲದಿಂದ ನಗರಸಭೆ ಅಧಿಕಾರ ಹಿಡಿದಿತ್ತು. ವಿರೋಧಿ ಬಣ ಒಟ್ಟುಗೂಡಿ ಕಾಂಗ್ರೆಸ್ ಅನ್ನು ನಗರ ಸಭೆ ಅಧಿಕಾರ ದಿಂದ ದೂರವಿರಿಸಿದ್ದರು.
ಆಗ ಪುಟ್ಟ ಸ್ವಾಮಿ ಗೌಡರು ಶಾಸ ಕರಾಗಿ ಆಯ್ಕೆಯಾಗಿರಲಿಲ್ಲ. ಪಕ್ಷೇತ ರರಾಗಿ ಆಯ್ಕೆಯಾಗಿ ಈಗ ಶಾಸಕರಾಗಿ ಕಾಂಗ್ರೆಸ್ ಸರ್ಕಾರಕ್ಕೆ ಬಾಹ್ಯ ಬೆಂಬಲ ಘೋಷಿಸಿದ್ದಾರೆ. ಆದ್ದರಿಂದ 2ನೇ ಅವಧಿಯಲ್ಲಿ ಯಾರು ಅಧಿಕಾರ ಹಿಡಿಯಲಿದ್ದಾರೆ ಎಂಬ ಕುತೂಹಲ ಕೆರಳಿಸಿದೆ.
ಪಕ್ಷಗಳ ಬಲಾಬಲ: ನಗರಸಭೆಯಲ್ಲಿ 31 ಸದಸ್ಯರು, ಶಾಸಕರ ಅಥವಾ ಹಾಗೂ ಸಂಸದರ ತಲಾ ಒಂದು ಮತ ಸೇರಿ ಒಟ್ಟು 33 ಮತಗಳಿವೆ. ಅಧಿಕಾರ ಹಿಡಿಯಲು 17 ಮತಗಳ ಅಗತ್ಯವಿದೆ. ಕಾಂಗ್ರೆಸ್ 15, ಜೆಡಿಎಸ್1, ಬಿಜೆಪಿ 3, ಪುಟ್ಟಸ್ವಾಮಿಗೌಡರ ಬಣ 12 ಸದಸ್ಯ ಬಲ ಹೊಂದಿದೆ. ಪುಟ್ಟಸ್ವಾಮಿಗೌಡರ ಬಣಕ್ಕೆ ಶಾಸಕರ ಹಾಗೂ ಸಂಸದರ 2 ಹೆಚ್ಚುವರಿ ಮತ ಸೇರಿ 14 ಮತ ದೊರೆಯಲಿದೆ. ಆದಾಗ್ಯೂ ಅಧಿಕಾರ ಹಿಡಿಯಲು ಇನ್ನೂ 3 ಮತಗಳ ಅಗತ್ಯ ಬೀಳಲಿದೆ ಮತ್ತೂಮ್ಮೆ ಪುಟ್ಟಸ್ವಾಮಿಗೌಡರ ಬಣವೇ ಇತರರ ಬೆಂಬಲ ಪಡೆದು 2ನೇ ಅವಧಿಗೂ ಅಧಿಕಾರ ಹಿಡಿಯಲಿದ್ದಾರೆಯೇ ಅಥವಾ ವಿರೋಧಿಗಳು ಒಂದಾಗಿ ಅಧಿಕಾರದ ಗದ್ದುಗೆಯೇರಲಿದ್ದಾರೆಯೇ ಎಂಬ ಕುತೂಹಲ ಮೂಡಿಸಿದೆ.
ಯಾವ ಸಮುದಾಯಕ್ಕೆ ಒಲಿಯಲಿದೆ ಮೀಸಲಾತಿ: ಈ ಮಧ್ಯೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಯಾವ ಸಮುದಾಯಗಳಿಗೆ ಒಲಿಯಲಿದೆ ಎಂದು ಆಕಾಂಕ್ಷಿ ಗಳು ಎದುರು ನೋಡುತ್ತಿದ್ದಾರೆ. ಇದೂ ನಗರಸಭೆಯಲ್ಲಿ ಯಾರು ಅಧಿಕಾರ ಹಿಡಿಯಲಿದ್ದಾರೆ ಎಂಬುದನ್ನು ಮತ ದೊರೆಯಲಿದೆ. ಆದಾಗ್ಯೂ ಅಧಿಕಾರ ಹಿಡಿಯಲು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.