Advertisement
ನೋಟ್ ಅಮಾನ್ಯ, ಜಿಎಸ್‌ಟಿ ತೆರಿಗೆ ಪದ್ಧತಿಯಿಂದ ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ವಹಿವಾಟು ಸಾಕಷ್ಟು ಪ್ರಮಾಣದಲ್ಲಿ ಕುಸಿದಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು, ಈಗ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಬೆಳಕಿಗೆ ಬಂದಿರುವ ಅಕ್ರಮಗಳ ಖಾತೆಗಳ ಹಗರಣದಿಂದಾಗಿ ಲಕ್ಷಾಂತರ ರೂ. ಬಂಡವಾಳ ಹಾಕಿ ಬಡಾವಣೆಗಳನ್ನು ಸಿದ್ಧªಪಡಿಸಿರುವ ರಿಯಲ್ ಎಸ್ಟೇಟ್ ಕುಳಗಳು ತಮ್ಮ ನಿವೇಶನಗಳ ಖರೀದಿಗೆ ಸಾರ್ವಜನಿಕರು ಆಸಕ್ತಿ ತೋರದ ಕಾರಣ ಕೈ ಸುಟ್ಟುಕೊಳ್ಳುವಂತಾಗಿದೆ.
Related Articles
Advertisement
ನಿವೇಶನದಾರರಲ್ಲಿ ಆತಂಕ: ಈಗಾಗಲೇ ತಮ್ಮ ಕನಸಿನ ಮನೆ ಕಟ್ಟಿಕೊಳ್ಳಲು ಚಿಕ್ಕಬಳ್ಳಾಪುರದ ಲೇಔಟ್‌ಗಳಲ್ಲಿ ಲಕ್ಷಾಂತರ ರೂ. ನೀಡಿ ನಿವೇಶನ ಖರೀಸಿರುವ ಸಾರ್ವಜನಿಕರಲ್ಲಿ ನಗರಸಭೆಯಲ್ಲಿ ಬಯಲಾಗಿರುವ ಅಕ್ರಮ ಖಾತೆಗಳ ಪ್ರಕರಣದರಿಂದ ಆತಂಕ ಮೂಡಿದೆ. ತಮ್ಮ ನಿವೇಶಗಳ ಖಾತೆ ಅಸಲಿಯೋ ಅಥವಾ ನಕಲಿಯೋ ಎಂಬುದನ್ನು ದೃಢಪಡಿಸಿಕೊಳ್ಳಲು ನಗರಸಭೆ ಮೆಟ್ಟಿಲು ಹತ್ತಿದ್ದಾರೆ. ಈಗಾಗಲೇ ಸಾವಿರಾರು ಅಕ್ರಮ ಖಾತೆಗಳನ್ನು ಅಧಿಕಾರಿಗಳ ಶಾಮೀಲುನೊಂದಿಗೆನಗರಸಭಾ ಸದಸ್ಯರೇ ಮುಂದೆ ನಿಂತು ಮಾಡಿಸಿರುವ ಪ್ರಕರಣಗಳು ಬೆಳಕಿಗೆ ಬಂದಿವೆ
ಬಡಾವಣೆಗಳಲ್ಲಿ ನಿವೇಶನ ಖರೀದಿಗೆ ಹಿಂದೇಟು ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಬೆಳಕಿಗೆ ಬಂದಿರುವ ಅಕ್ರಮ ಖಾತೆಗಳ ಪ್ರಕರಣದಿಂದ ಚಿಕ್ಕಬಳ್ಳಾಪುರ ಸುತ್ತಮುತ್ತ ರಿಯಲ್ ಎಸ್ಟೇಟ್ ವ್ಯಾಪಾರದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಬಡಾವಣೆಗಳಲ್ಲಿನ ನಿವೇಶನ ಖರೀದಿಸಲು ಸಾರ್ವಜನಿಕರು ಧೈರ್ಯ ತೋರದೇ ಹಿಂದೆ ಮುಂದೆ ನೋಡುತ್ತಿದ್ದಾರೆ.
ಇದರಿಂದ ನಿವೇಶನಗಳ ಬೆಲೆ ಕೂಡ ತುಸು ಕಡಿಮೆಯಾಗಿದೆ. ನಿರೀಕ್ಷಿತ ಮಟ್ಟದಲ್ಲಿ ರಿಯಲ್ ಎಸ್ಟೇಟ್ ವ್ಯಾಪಾರ ನಡೆಯುತ್ತಿಲ್ಲ ಎಂದು ರಿಯಲ್ ಎಸ್ಟೇಟ್ ವ್ಯಾಪಾರಿ ವಾಪಸಂದ್ರ ಮಂಜುನಾಥ ಅವಲತ್ತುಕೊಂಡಿದ್ದಾರೆ.
“ದಾಖಲಾತಿ ಪರಿಶೀಲಿಸಿ ಬಡಾವಣೆಗೆ ಅನುಮತಿ’ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹೊಸ ಬಡಾವಣೆಗಳ ಅನುಮೋದನೆಗೆ ಸಲ್ಲಿಕೆಯಾಗುವ ಅರ್ಜಿಗಳನ್ನು ಸಮಗ್ರವಾಗಿ ಪರಿಶೀಲಿಸಿಯೇ ಸೂಕ್ತ ದಾಖಲಾತಿಗಳಿದ್ದು, ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆಯಾಗಿದ್ದರೆ ಮಾತ್ರ ನಾವು ಅನುಮತಿ ನೀಡಲಾಗುತ್ತಿದೆ. ಭೂ ಪರಿವರ್ತನೆಯಾಗದ ಅರ್ಜಿಗಳನ್ನುನಾವು ತಿರಸ್ಕರಿಸುತ್ತಿದ್ದೇವೆ ಎಂದು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಗಂಗಾಧರಸ್ವಾಮಿ ತಿಳಿಸಿದರು.