Advertisement

ಪಾಲಿಕೆಯದ್ದು ಉಳಿತಾಯ ಬಜೆಟ್‌

01:35 PM Mar 21, 2017 | Team Udayavani |

ದಾವಣಗೆರೆ: ಮಹಾನಗರ ಪಾಲಿಕೆಯ 2017-18ನೇ ಸಾಲಿನ ಬಜೆಟ್‌ ಉಳಿತಾಯದ್ದಾಗಿದ್ದು, ಈ ಬಾರಿ 5.37 ಕೋಟಿ ರೂ. ಉಳಿತಾಯ ಆಗಲಿದೆ ಅಂದಾಜಿಸಲಾಗಿದೆ. 

Advertisement

ಪಾಲಿಕೆಯ ದೂರದರ್ಶನ ಸಮಗ್ರ ನೀರು ಸರಬರಾಜು ಕೇಂದ್ರದ ಪಂಪ್‌ ಹೌಸ್‌ ಬಳಿ ಆಯೋಜಿಸಲಾಗಿದ್ದ ಬಜೆಟ್‌ ಸಭೆಯಲ್ಲಿ ಒಟ್ಟು 516.43 ಕೋಟಿ ರೂ. ಆದಾಯ ಹಾಗೂ 510.97 ಕೋಟಿ ರೂ ವೆಚ್ಚದ ಆಯ-ವ್ಯಯದ ಅಂದಾಜು ಪಟ್ಟಿ ಮಂಡಿಸಿದ ಮೇಯರ್‌ ರೇಖಾ ನಾಗರಾಜ್‌, 2017-18ರ ಆರ್ಥಿಕ ವರ್ಷದಲ್ಲಿ 5.37 ಕೋಟಿ ರೂ. ಉಳಿತಾಯ ಪ್ರಸ್ತಾಪಿಸಿದ್ದಾರೆ.

ಪಾಲಿಕೆ ಆವರಣದಲ್ಲಿ ಎಸ್‌ಎಸ್‌  ಕ್ಯಾಂಟೀನ್‌ ಆರಂಭಿಸಿ, ಕಾರ್ಯನಿಮಿತ್ತ ಬರುವ ನಾಗರಿಕರಿಗೆ 5 ರೂ. ಉಪಹಾರ ಹಾಗೂ 10 ರೂ. ಗೆ ಊಟ ಒದಗಿಸುವುದು, ನಗರದ ಜನತೆಗೆ ಮುಂದಿನ ವರ್ಷದ ವೇಳೆ ದಿನದ 24 ತಾಸು ನಿರಂತರ ನೀರು ಒದಗಿಸುವ ಜಲಸಿರಿ ಯೋಜನೆ, ಮಹಿಳೆಯರ ರಕ್ಷಣೆಗೆ ತರಬೇತಿ, ಮಕ್ಕಳಿಗೆ 15 ಪಾರ್ಕ್‌ಗಳಲ್ಲಿ ಆಟಿಕೆ, ಪ್ರತ್ಯೇಕ ಗ್ರಂಥಾಲಯ, ವಿದ್ಯುತ್‌ ದೀಪ ಅಳವಡಿಕೆ ಈ ಸಾಲಿನ ಬಜೆಟ್‌ನ ಪ್ರಮುಖಾಂಶಗಳಾಗಿವೆ. 

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಉಪಸ್ಥಿತರಿದ್ದ ಸಭೆಯಲ್ಲಿ ಒಂದು ತಾಸು ಮಂಡಿಸಿದ ಬಜೆಟ್‌ಗೆ ಪಾಲಿಕೆಯ ಹಿರಿಯ ಸದಸ್ಯರಾದ ಶಿವನಹಳ್ಳಿ ರಮೇಶ್‌, ದಿನೇಶ್‌ ಕೆ. ಶೆಟ್ಟಿ, ಸಿಪಿಐನ ಪಾಲಿಕೆ ಸದಸ್ಯ ಎಚ್‌.ಜಿ. ಉಮೇಶ್‌ ಶ್ಲಾಘನೆ ವ್ಯಕ್ತಪಡಿಸಿದರು. ಉಪ ಮೇಯರ್‌ ಬೆಳವನೂರು ನಾಗರಾಜಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ. ಹಾಲೇಶ್‌, ಗೌರಮ್ಮ ಚಂದ್ರಪ್ಪ ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next