Advertisement

ಪುರಸಭೆ ಬಜೆಟ್‌ ಪೂರ್ವಭಾವಿ ಸಭೆಗೆ ನೀರಸ ಪ್ರತಿಕ್ರಿಯೆ

02:45 PM Feb 16, 2022 | Team Udayavani |

ಸಕಲೇಶಪುರ: ಪಟ್ಟಣದ ಪುರಸಭೆಯಲ್ಲಿ ಕರೆಯಲಾಗಿದ್ದ ಪುರಸಭೆಯ ಬಜೆಟ್‌ ಪೂರ್ವಭಾವಿ ಸಭೆಗೆ ನಾಗರಿಕರು ಹಾಗೂ ಸಂಘ ಸಂಸ್ಥೆಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

Advertisement

ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಪುರಸಭಾ ಅಧ್ಯಕ್ಷ ಕಾಡಪ್ಪನವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಅಭಿಪ್ರಾಯ ನೀಡಲು ಬೆರಳೆಣಿಕೆ ಸಾರ್ವಜನಿಕರುಹಾಜರಾಗಿದ್ದು ಸಭೆಯ ವರದಿ ಮಾಡಲು ಹೋಗಿದ್ದ ಪತ್ರಕರ್ತರೇ ಪಟ್ಟಣದ ಅಭಿವೃದ್ಧಿ ಕುರಿತು ಬಜೆಟ್‌ನಲ್ಲಿ ಸೇರಿಸಬೇಕಾದ ವಿಷಯಗಳ ಕುರಿತು ಸಲಹೆ ನೀಡಿದರು.

ಪ್ರಚಾರ ಮಾಡಿ: ಸಭೆಯಲ್ಲಿ ಹಾಜರಿದ್ದ ಪತ್ರಕರ್ತರು ಮಾತನಾಡಿ, ಈ ಹಿಂದೆ ಬಜೆಟ್‌ ಸಭೆಗಳಿಗೆ ನೂರಾರು ಜನ ಸಾರ್ವಜನಿಕರು ಹಾಜರಾಗಿ ತಮ್ಮ ಅಭಿಪ್ರಾಯ ಹೇಳುತ್ತಿದ್ದರು. ಈಹಿನ್ನೆಲೆ ಪುರಭವನದಲ್ಲಿ ಬಜೆಟ್‌ ಪೂರ್ವಭಾವಿ ಸಭೆಮಾಡಲಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಪುರಸಭಾ ಸಭಾಂಗಣದಲ್ಲೇ ಸಭೆ ಮಾಡಿದರೂ ಬೆರಳೆಣಿಕೆಯಷ್ಟು ಸಾರ್ವಜನಿಕರು ಸಭೆಗೆಹಾಜರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನಬಜೆಟ್‌ ಪೂರ್ವಭಾವಿ ಸಭೆ ಮಾಡುವ ಮೊದಲು ಆಟೋದಲ್ಲಿ ಧ್ವನಿವರ್ಧಕದ ಮುಖಾಂತರ ಪ್ರಚಾರ ಮಾಡಬೇಕೆಂದು ಹೇಳಿದರು.

ಮಾದರಿ ಬಜೆಟ್‌ ಉದ್ದೇಶ: ಸಭೆಯಲ್ಲಿ ಹಾಜರಿದ್ದ ಪುರಸಭಾ ಸದಸ್ಯರು ಹಾಗೂ ಸಾರ್ವಜನಿಕರುತಮ್ಮ ಅಭಿಪ್ರಾಯ ಮಂಡಿಸಿದರು. ಸಭೆ ಮುಕ್ತಾಯಗೊಂಡ ನಂತರ ಪುರಸಭಾ ಅಧ್ಯಕ್ಷ ಕಾಡಪ್ಪ ಮಾತನಾಡಿ, ಮಾದರಿ ಬಜೆಟ್‌ ಮಂಡಣೆ ಮಾಡುವುದು ನನ್ನ ಉದ್ದೇಶ. ಈ ನಿಟ್ಟಿನಲ್ಲಿಮತ್ತೂಂದು ಬಜೆಟ್‌ ಪೂರ್ವಭಾವಿ ಸಭೆಕರೆಯಲಾಗುತ್ತದೆ. ಬಜೆಟ್‌ನಲ್ಲಿ ಪಟ್ಟಣವನ್ನು ಮಾದರಿ ಪಟ್ಟಣವನ್ನಾಗಿಸಲು ಕೈಗೊಳ್ಳಬೇಕಾದ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟು ಬಜೆಟ್‌ ಮಂಡಿಸುತ್ತೇನೆ ಎಂದು ಹೇಳಿದರು. ಪುರಸಭೆ ಉಪಾಧ್ಯಕ್ಷೆ ಜ್ಯೋತಿ, ಮುಖ್ಯಾಧಿಕಾರಿ ಸ್ಟೀಫ‌ನ್‌ ಪ್ರಕಾಶ್‌ ಮತ್ತಿತರರು ಉಪಸ್ಥಿತರಿದ್ದರು.

 

Advertisement

ಹಲವು ಅಭಿಪ್ರಾಯ :  ಹಲವು ದಶಕಗಳ ಬೇಡಿಕೆಗಳಾದ ಪಟ್ಟಣಕ್ಕೆಪ್ರವೇಶ ಮಾಡುವ ಪ್ರಮುಖ ದ್ವಾರಗಳಲ್ಲಿ ಸ್ವಾಗತ ಫ‌ಲಕ, ಲೇಔಟ್‌ಗಳಲ್ಲಿ ಸಾರ್ವಜನಿಕಬಳಕೆ ನಿವೇಶನ ಸದ್ಭಳಕೆ ಮಾಡುವುದು,ಪುರಭವನಕ್ಕೆ ಸುಣ್ಣ ಬಣ್ಣ, ನಾಡ ಕಚೇರಿ ದುರಸ್ತಿ, ನಿವೇಶನ ರಹಿತರಿಗೆ ನಿವೇಶನ, ಎಸ್ಸಿ-ಎಸ್ಟಿಅಭಿವೃದ್ಧಿಗೆ ಕ್ರಮ, ಅತಿವೃಷ್ಟಿ ವೇಳೆ ನಾಗರಿಕರಿಗೆಪರಿಹಾರ, ಖಾಲಿ ಇರುವ ಪುರಸಭಾ ಮಳಿಗೆಹರಾಜು ಮಾಡುವುದು, ಅನುಮತಿ ಇಲ್ಲದೆಭಿತ್ತಿ ಪತ್ರ ಅಳವಡಿಸುವವರ ವಿರುದ್ಧ ಕ್ರಮ ಜರುಗಿಸುವುದು, ಘನತ್ಯಾಜ್ಯ ವಿಲೇವಾರಿಗೆ ಕ್ರಮ ಜರುಗಿಸುವುದು, ಪಟ್ಟಣದ ತೇಜಸ್ವಿವೃತ್ತದ ಅಗಲಿಕರಣ ಯೋಜನೆ ಸೇರಿದಂತೆಇನ್ನು ಹಲವು ವಿಷಯಗಳ ಕುರಿತು ಸದಸ್ಯರು,ಪತ್ರಕರ್ತರು, ನಾಗರಿಕರು ಅಭಿಪ್ರಾಯ ಮಂಡಿಸಿದ್ದಾರೆ. ಈ ಮೇಲ್ಕಂಡ ವಿಚಾರಗಳನ್ನು ಬಜೆಟ್‌ನಲ್ಲಿ ಅಳವಡಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಪುರಸಭಾ ಅಧ್ಯಕ್ಷ ಕಾಡಪ್ಪ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next