ಹುಣಸೂರು: ಹುಣಸೂರಿನ ಕಾಫಿ ವರ್ಕ್ಸ್ ರಸ್ತೆಯ ಶ್ರೀ ಮುನೇಶ್ವರಸ್ವಾಮಿ 17 ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ದೇವರ ಉತ್ಸವವು ನಗರದ ಪ್ರಮುಖ ಬೀದಿಗಳಲ್ಲಿ ಶನಿವಾರ ವಿಜೃಂಭಣೆಯಿಂದ ನಡೆಯಿತು. ಭಕ್ತರು ಉತ್ಸುಕತೆಯಿಂದ ಭಾಗವಹಿಸಿದ್ದರು.
ನಗರದ ಜನತೆಯ ಆರಾಧ್ಯ ಧೈವ ಮುನೇಶ್ವರಸ್ವಾಮಿ ದೇವಾಲಯದಲ್ಲಿ ಮುಂಜಾನೆ ಅರ್ಚಕ ನಾರಾಯಣಮೂರ್ತಿ ನೇತೃತ್ವದಲ್ಲಿ ಅರ್ಚಕರು ಗಣಪತಿ ಹೋಮ, ಅಭಿಷೇಕ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
ಸಂಜೆ ದೇವಾಲಯದಿಂದ ಮಂಗಳವಾದ್ಯ, ತಮಟೆ, ವೀರಗಾಸೆ ಕುಣಿತದೊಂದಿಗೆ ಹೊರಟ ದೇವರ ಉತ್ಸವವು ನಗರದ ಎಸ್.ಜೆ.ರಸ್ತೆ, ಜೆಎಲ್‌ಬಿ ರಸ್ತೆ, ಲಕ್ಷ್ಮೀ ವಿಲಾಸ್ ವೃತ್ತ, ಮಂಟಿ ಸರ್ಕಲ್, ಗಣೇಶಗುಡಿ ಬೀದಿ, ದಾವಣಿಬೀದಿ, ಬ್ರಾಹ್ಮಣಬೀದಿ ಮಾರ್ಗವಾಗಿ ದೇವಾಲಯಕ್ಕೆ ಸಾಗಿ ಬಂದರು. ನೂರಾರು ಮಂದಿ ಭಕ್ತರು ರಸ್ತೆಗಳಲ್ಲಿ ಈಡುಗಾಯಿ ಒಡೆದರು. ಪೂಜೆ ಸಲ್ಲಿಸಿದರು.
ಇಂದು ಅನ್ನದಾನ
ಭಾನುವಾರ ಮುಂಜಾನೆ
4 ಗಂಟೆಗೆ ಮುನೇಶ್ವರ ಸ್ವಾಮಿಗೆ ಹರಕೆ ಸಮರ್ಪಿಸುವರು, ಮದ್ಯಾಹ್ನ ಮಹಾಮಂಗಳಾರತಿ ನಂತರ ೧ಗಂಟೆಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಮುನೇಶ್ವರಸ್ವಾಮಿ ಸೇವಾ ಸಮಿತಿ ತಿಳಿಸಿದೆ.