Advertisement
ಪಂಚಾಯತ್‌ನ ಪಕ್ಕದಲ್ಲೇ ಇದೆಮುಂಡ್ಕೂರು ಗ್ರಾಮ ಪಂಚಾಯತ್ ಕಟ್ಟಡದಿಂದ ಅನತಿ ದೂರದಲ್ಲಿರುವ ಈ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಈ ರಸ್ತೆಯಲ್ಲಿ ಜಲ್ಲಿ ಹಾಗೂ ಟಾರು ಚೆಲ್ಲಾಪಿಲ್ಲಿಯಾಗಿದೆ. ಮುಂಡ್ಕೂರಿನ ಸಾರ್ವಜನಿಕ ಹಿಂದೂ ರುದ್ರಭೂಮಿ ಹಾಗೂ ಮಸೀದಿಗೆ ಸಾಗುವ ಪ್ರಮುಖ ರಸ್ತೆಯಾದರೂ ರಸ್ತೆ ದುರಸ್ತಿ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ.
ಗ್ರಾಮ ಪಂಚಾಯತ್ ಸಹಿತ ಅಂಚೆ ಕಛೇರಿ, ಕಂದಾಯ ಇಲಾಖೆ, ಗ್ರಂಥಾಲಯ, ಜಿಮ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಲು ಉತ್ಪಾದಕರ ಸಂಘ, ಪಶು ಆಸ್ಪತ್ರೆ, ವ್ಯವಸಾಯ ಸೇವಾ ಸಹಕಾರಿ ಸಂಘ ಹಾಗೂ ಇನ್ನಿತರ ವ್ಯವಸ್ಥೆಗಳಿಗೆ ನಿತ್ಯ ಬಹಳ ಸಂಖ್ಯೆಯಲ್ಲಿ ವಾಹನಗಳು ಹಾದು ಹೋಗುತ್ತವೆ.
ಕಳೆದ ಬಾರಿಯ ವಿಧಾನಸಭಾ ಚುನಾವಣೆಯ ಸಂದರ್ಭ ಈ ರಸ್ತೆಯನ್ನು ಡಾಮರೀಕರಣಕ್ಕಾಗಿ ಅಗೆತ ಮಾಡಿದ್ದರು. ಆದರೆ ಬಳಿಕ ಜಲ್ಲಿಕಲ್ಲು ಕೂಡ ಹಾಕಿಲ್ಲ. ಆದ್ದರಿಂದ ಈ ಬಾರಿಯಾದರೂ ರಸ್ತೆಗೆ ಮೋಕ್ಷ ಕಲ್ಪಿಸಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಬರೀ ಆಶ್ವಾಸನೆ
ರಸ್ತೆಯಲ್ಲಿ ಹಲವಾರು ಬಾರಿ ವಾಹನಗಳು ಸ್ಕಿಡ್ ಆಗಿ ಸವಾರರು ನೆಲಕ್ಕೆ ಉರುಳಿದ್ದಾರೆ. ಜನಪ್ರತಿನಿಧಿಗಳು ಬರೀ ಆಶ್ವಾಸನೆ ನೀಡುತ್ತಿದ್ದಾರೆ.
– ಗುರುಪ್ರಸಾದ್ ಭಟ್,
ಸ್ಥಳಿಯರು
Related Articles
ಈ ರಸ್ತೆ ದುರಸ್ತಿಗೆ ಕೂಡಲೇ ಕ್ರಮಕೈಗೊಳ್ಳಲಾಗುವುದು. ಕಾಮಗಾರಿ ನಿಲುಗಡೆಗೊಂಡ ಬಗ್ಗೆ ಪರಿಶೀಲನೆ ನಡೆಸಲಾಗುವುದು.
– ಶುಭಾ ಪಿ.ಶೆಟ್ಟಿ,
ಮೂಂಡ್ಕೂರು ಗ್ರಾ.ಪಂ. ಅಧ್ಯಕ್ಷೆ
Advertisement