Advertisement
ಆ ಬಳಿಕ ಉದಯವಾಣಿಯ ಸಕಾಲಿಕ ವರದಿ ಬಳಿಕ ನೂತನ ಕಿರು ಸೇತುವೆ ನಿರ್ಮಾಣಗೊಂಡರೂ ಸಮಸ್ಯೆ ಮಾತ್ರ ತಪ್ಪಿಲ್ಲ.ಕಿರು ಸೇತುವೆ ನಿರ್ಮಾಣಗೊಂಡು ಹಲವು ಸಮಯಗಳು ಕಳೆದರೂ ಎರಡೂ ಭಾಗದ ರಸ್ತೆಯನ್ನು ಸಂಪರ್ಕಿಸುವಲ್ಲಿ ಸಮತಟ್ಟು ಮಾಡದ ಹಿನ್ನೆಲೆಯಲ್ಲಿ ಮೋರಿ ನಿರ್ಮಿಸಿದ ಜಾಗದಲ್ಲಿ ಬೃಹತ್ ಹೊಂಡಗಳು ನಿರ್ಮಾಣವಾಗಿ ವಾಹನ ಸವಾರರು ಅಪಾಯ ಎದುರಿಸುತ್ತಿದ್ದಾರೆ. ಬೆಳ್ಮಣ್‌ನಿಂದ ಸಂಪರ್ಕವನ್ನು ಪಡೆದು ಕಿನ್ನಿಗೋಳಿ, ಕಟೀಲು, ಮೂಡುಬಿದಿರೆ ಸಹಿತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸಲು ಹೆಚ್ಚಿನ ವಾಹನ ಸವಾರರು ಇದೇ ರಸ್ತೆಯಲ್ಲಿ ಸಂಚಾರ ನಡೆಸುತ್ತಾರೆ.
ಪಡಿತ್ತಾರು ವರೆಗೆ ರಸ್ತೆಯೂ ಸುಂದರಗೊಂಡಿದೆ. ಆದರೆ ಹೊಸದಾಗಿ ನಿರ್ಮಾಣಗೊಂಡ ಕಿರು ಸೇತುವೆಯ ಪ್ರದೇಶದಲ್ಲಿ ಮಾತ್ರ ವಾಹನ ಸವಾರರು ಹೊಂಡಕ್ಕೆ ಬಿದ್ದು ಎಡವಟ್ಟು ಮಾಡಿಕೊಳ್ಳುವುದು ನಿರಂತರವಾಗಿದೆ. ಸಂಪೂರ್ಣ ಕೆಸರುಮಯ
ಹೊಂಡದಲ್ಲಿ ಕೆಸರು ನೀರು ನಿಂತಿದ್ದು ಕಾರು, ಬಸ್ಸು, ಲಾರಿಯಂತಹ ವಾಹನಗಳು ಓಡಾಡುವ ಸಂದರ್ಭದಲ್ಲಿ ದಾರಿಯಲ್ಲಿ ನಡೆದುಕೊಂಡು ಸಾಗುವ ದಾರಿಹೋಕರು, ಶಾಲಾ ಮಕ್ಕಳ ಸಹಿತ ಬೈಕ್ ಸವಾರರ ಮೇಲೆಯೂ ಕೆಸರು ನೀರಿನ ಸಿಂಚನವಾಗುತ್ತದೆ. ಹಲವು ತಿಂಗಳಿಂದ ನಿತ್ಯ ಈ ಭಾಗದ ಜನ ಸಮಸ್ಯೆಯನ್ನು ಎದುರಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆ, ಸ್ಥಳೀಯಾಡಳಿತ ಹಾಗೂ ಗುತ್ತಿಗೆದಾರರು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಗ್ರಾಮಸ್ಥರ ಆರೋಪ.
Related Articles
ಗುಂಡಿಯೂ ಹಾಗೆಯೇ ಇದ್ದು ದಿನೇ ದಿನೇ ರಸ್ತೆಯ ಹೊಂಡ ದೊಡ್ಡದಾಗುತ್ತಿದ್ದು, ವಾಹನ ಸವಾರು ಸಂಕಟವನ್ನು ಅನುಭವಿಸುವಂತಾಗಿದೆ.
Advertisement
ಕಾಮಗಾರಿ ನಡೆದು ಹಲವು ಸಮಯ ಕಳೆದರೂ ರಸ್ತೆಯ ಹೊಂಡವನ್ನು ಸರಿಪಡಿಸುವಲ್ಲಿ ಗುತ್ತಿಗೆದಾರರು ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಮೋರಿಯ ನಿರ್ಮಾಣ ಕಾಮಗಾರಿಯೂ ಅವೈಜ್ಞಾನಿಕವಾಗಿ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
*ಶರತ್ ಶೆಟ್ಟಿ ಮುಂಡ್ಕೂರು