Advertisement

Mundgod: ಮಂಜುನಾಥ ಭೋವಿ ಮನೆಗೆ ಜಿಲ್ಲಾಧಿಕಾರಿ ಭೇಟಿ; ಕುಟುಂಬಕ್ಕೆ ಪರಿಹಾರದ ಚೆಕ್ ವಿತರಣೆ

09:00 PM Oct 06, 2023 | Team Udayavani |

ಮುಂಡಗೋಡ: ಇತ್ತೀಚೆಗೆ ತಾಲೂಕಿನ ನ್ಯಾಸರ್ಗಿಯಲ್ಲಿ ಮಾರಣಾಂತಿಕವಾಗಿ ಹಲ್ಲೆಗೆ ಒಳಗಾಗಿ ಸಾವನ್ನಪ್ಪಿದ ಮಂಜುನಾಥ ಭೋವಿ ಅವರ ಮನೆಗೆ ಶುಕ್ರವಾರ ಸಂಜೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರದ ಚೆಕ್ ವಿತರಿಸಿದರು.

Advertisement

ಮಂಜುನಾಥ ಭೋವಿ ಅವರ ಮನೆಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರು ದೌರ್ಜನ್ಯ ಸಂತ್ರಸ್ತರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಘಟನೆಯ ಬಗ್ಗೆ ಮಾಹಿತಿ ಪಡೆದಕೊಂಡರು.

ಸರ್ಕಾರದಿಂದ ಬರುವ ಪರಿಹಾರ ನೀಡಲಾಗುವುದು. ಮೃತನ ಪತ್ನಿಗೆ ಪ್ರತಿ ತಿಂಗಳು ಭದ್ರತಾ 6500ರೂ ಪಿಂಚಣಿ ನೀಡಲಾಗುವುದು. ಕುಟುಂಬದ ಒಬ್ಬರಿಗೆ ಸರಕಾರಿ ಉದ್ಯೋಗ ನೀಡಲಾಗುವುದು. ಈ ಬಗ್ಗೆ ಕುಟುಂಬದವರು ಚರ್ಚೆ ಮಾಡಿ ಯಾರಿಗೆ ಉದ್ಯೋಗ ನೀಡುವಂತೆ ಹೇಳುತ್ತೀರೋ ಅವರಿಗೆ ನೀಡಲಾಗುವುದು. ನಿಮ್ಮ ರಕ್ಷಣೆಗೆ ಸರಕಾರ ಇದೆ. ಯಾರು ಹೆದರುವ ಅವಶ್ಯವಿಲ್ಲ. ಘಟನೆಯ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.

ಆ ಕುಟುಂಬದ ಮನೆಯ ಎಲ್ಲ ರೂಮ್ ಗಳನ್ನು ನೋಡಿ ಮರುಗಿದರು. ಅಲ್ಲದೆ ಮನೆಯಲ್ಲಿ ಕರೆಂಟ್ ಇಲ್ಲದೆ ಇರುವುದನ್ನು ನೋಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸರಿಪಡಿಸುವಂತೆ ಸೂಚಿಸಿದರು.

ಗ್ರಾಮಸ್ಥರನನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಗ್ರಾಮದಲ್ಲಿ ಎಲ್ಲರೂ ಏಕತೆಯಿಂದ ಇರಬೇಕೆನ್ನುವುದು ಸರ್ಕಾರದ ಉದ್ದೇಶ. ನಮ್ಮದು ಜಾತ್ಯತೀತ ರಾಷ್ಟ್ರ. ಜಾತಿ, ಬೇದ, ಮತ ಮರೆತು ನಾವೆಲ್ಲರೂ ಒಂದಾಗಿ ಬಾಳುಬೇಕೆಂದು ಸರ್ಕಾರದ ಸಾಕಷ್ಟು ನಿಯಮಗಳಿವೆ. ಸಿಟ್ಟಿನ ಬರದಲ್ಲಿಯೋ, ಜಾತಿ ವೈಷಮ್ಯದಿಂದಾಗಿ ಈ ರೀತಿ ಘಟನೆ ಆಗಬಾರದು. ಇದರಿಂದ ಕೇವಲ ಗ್ರಾಮಕ್ಕೆ ಅಷ್ಟೇ ಅಲ್ಲ ದೇಶಕ್ಕೆ ಕೆಟ್ಟ ಹೆಸರು. ಸರಕಾರದಿಂದ ಆ ಕುಟುಂಬಕ್ಕೆ ಸಹಾಯ, ಸಹಕಾರ ತಲುಪಿಸಿದ್ದೇವೆ. ಆದರೆ ನೆರೆಹೊರೆಯದವರು ಆ ಕುಟುಂಬದ ಜೊತೆಗೆ ನಿಂತು ಸಮಾಧಾನ ಹೇಳುವುದು ಮುಖ್ಯವಾಗಿದೆ. ಆ ಕೆಲಸವನ್ನು ನೀವುಗಳು ಮಾಡಬೇಕು. ಇನ್ನೂ ಮುಂದೆ ಗ್ರಾಮದಲ್ಲಿ ಹೀಗಾಗದಂತೆ ನೋಡಿಕೊಳ್ಳಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.

Advertisement

ಈ ವೇಳೆ ಶಿರಶಿ ಸಹಾಯಕ ಕಮಿಷನರ್ ದೇವರಾಜ ಆರ್, ತಹಶೀಲ್ದಾರ ಶಂಕರ ಗೌಡಿ, ತಾ.ಪಂ ಎಡಿ ಟಿ. ವೈ ದಾಸನಕೊಪ್ಪ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸಿದ್ದಯ್ಯನವರ, ಸಿಪಿಐ ಎಸ್ ಬಿ ಲೋಕಾಪುರ, ದಲಿತ ಮುಖಂಡರಾದ ಬಸವರಾಜ ಸಂಗನೇಶ್ವರ, ಬಸವರಾಜ ಹಳ್ಳಮ್ಮನವರ, ಹನಮಂತ ಆರೆಗೋಪ್ಪ, ದುರ್ಗಪ್ಪ ವಡ್ಡರ, ರಾಜು ಭೋವಿ, ಸುಭಾಷ ಭೋವಿ, ಹರೀಶ ಭೊವಿ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next