ಉದ್ಯೋಗಿಗಳು ಆದಾಯ ತೆರಿಗೆ, ಜಿಎಸ್‌ಟಿ ಕಟ್ಟಿದರೆ ಮಾತ್ರ ದೇಶದ ಆರ್ಥಿಕ ಬೆಳವಣಿಗೆಯಾಗಲಿದೆ ಎಂದು ಗದಗ
ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಧುಸೂದನ್ ಪುಣೇಕರ ಹೇಳಿದರು.
Advertisement
ಪಟ್ಟಣದ ಕ.ರಾ.ಬೆಲ್ಲದ ಕಾಲೇಜಿನ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದಿಂದ ಆಯೋಜಿಸಲಾಗಿದ್ದ ಭಾರತದಲ್ಲಿ ವಿವಿಧ ತೆರಿಗೆ ಪದ್ಧತಿಗಳು ಎನ್ನುವ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ತೆರಿಗೆಗಳಿರುತ್ತವೆ. ಅವುಗಳನ್ನು ಸಂಬಂಧಪಟ್ಟವರು ತಪ್ಪದೇ ಕಟ್ಟಬೇಕು. ಎಲ್ಲರೂ ತೆರಿಗೆ ಕಟ್ಟುವುದರಿಂದ ನಮ್ಮ ದೇಶದ
ಆರ್ಥಿಕ ಅಭಿವೃದ್ಧಿಗೆ ಮುಖ್ಯವಾಗುತ್ತದೆ. ಮುಂಬರುವ ದಿನಗಳಲ್ಲಿ ಎಲ್ಲರೂ ದೊಡ್ಡ ದೊಡ್ಡ ಉದ್ಯೋಗಿಗಳಾಗಿ, ದೇಶಕ್ಕೆ ತೆರಿಗೆ ಕಟ್ಟುವ ಮೂಲಕ ದೇಶದ ಅಭಿವೃದ್ಧಿಗೆ
ಮುಂದಾಗಬೇಕಾಗಿದೆ. ಮುಂಡರಗಿ ಪಟ್ಟಣದಲ್ಲಿ ತಾಲೂಕು ಮಟ್ಟದ ವಾಣಿಜ್ಯೋದ್ಯಮ ಸಂಸ್ಥೆ ತೆರೆಯಲು ಇಲ್ಲಿನ
ವ್ಯಾಪಾರಸ್ಥರು, ಮುಖಂಡರು ಆಸಕ್ತಿ ತೋರಿದ್ದು, ಅದಕ್ಕಾಗಿ ಒಂದು ಕಚೇರಿ ಮಾಡಲು ಸ್ಥಳಾವಕಾಶ ಮಾಡಿಕೊಟ್ಟರೆ, ಶೀಘ್ರ ಪ್ರಾರಂಭಿಸಿ ಉದ್ಘಾಟಿಸಬಹುದು ಎಂದರು.
Related Articles
ಪುರಾತನ ಕಾಲದಿಂದಲೂ ಜಾರಿಯಲ್ಲಿದೆ.
Advertisement
2 ಸಾವಿರ ವರ್ಷಗಳ ಹಿಂದೆಯೇ ತೆರಿಗೆ ಪ್ರಾರಂಭಿಸಲಾಗಿದೆ. ಯಾವುದೇ ವಸ್ತುವಿಗೆ ತೆರಿಗೆ ಹಾಕುವಾಗ ಅದು ಜನತೆಗೆ ಹೊರೆಆಗುವಂತೆ ಇರಬಾರದು. ಭಾರತೀಯ ತೆರಿಗೆ ಪದ್ಧತಿ ಬಹಳಷ್ಟು ಸಂಕೀರ್ಣವಾಗಿದ್ದು, ಅದನ್ನು ಒಂದಿಷ್ಟು ಸರಳೀಕರಣ ಮಾಡಬೇಕು. ಅಂದಾಗ ಜನತೆ ತೆರಿಗೆ ಕಟ್ಟಲು ಅನುಕೂಲವಾಗುತ್ತದೆ ಎಂದರು. ಸಾನ್ನಿಧ್ಯ ವಹಿಸಿದ್ದ ಜ|ನಾಡೋಜ ಡಾ|ಅನ್ನದಾನೀಶ್ವರ ಮಹಾಶಿವಯೋಗಿಗಳು ಮಾತನಾಡಿ, ಪ್ರತಿಯೊಬ್ಬರೂ ಸಹ ತೆರಿಗೆ
ಕೊಡುವಂತಹ ಪದ್ಧತಿ ನಿರಂತರವಾಗಿ ಮುಂದುವರೆಯಬೇಕು. ಯಾರೂ ಅದರಿಂದ ತಪ್ಪಿಸಿಕೊಳ್ಳಬಾರದು. ನಾವು ಮಾಡುವ
ಕಾರ್ಯಗಳಿಗೆ ಅನುಗುಣವಾಗಿ ಸರ್ಕಾರಕ್ಕೆ ತೆರಿಗೆ ಸಲ್ಲಿಸಬೇಕಾಗುತ್ತದೆ. ಮೊದಲು ನಾವು ಸರ್ಕಾರಕ್ಕೆ ತೆರಿಗೆ ಕಟ್ಟುವುದು, ನಂತರ ನಮಗೆ ಸರ್ಕಾರ ಮತ್ತೆ ಅದೇ ಹಣವನ್ನು ಅಭಿವೃದ್ಧಿಗಾಗಿ ನೀಡುವುದು ಈ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕು ಎಂದರು. ಆರ್.ಎಲ್.ಪೊಲೀಸ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಕುಂದ್ ಪೋತ್ನಿàಸ್, ಡಿ.ಬಿ.ಸಜ್ಜನರ, ಕರಬಸಪ್ಪ
ಹಂಚಿನಾಳ, ನಾಗೇಶ ಹುಬ್ಬಳ್ಳಿ, ಪ್ರಾ.ಡಿ.ಸಿ.ಮಠ, ವೀರನಗೌಡ ಗುಡದಪ್ಪನವರ, ತಿಮ್ಮಪ್ಪ ದಂಡೀನ, ಡಾ.ಅಮರೇಶ ಶಿವಶೆಟ್ಟರ, ಅಶೋಕ ಅಂಗಡಿ, ಎಂ.ಎಸ್.ಶಿವಶೆಟ್ಟರ,ಅಮೀನಸಾಬ್ ಬಿಸನಳ್ಳಿ, ಪ್ರೊ.ಎನ್.ಹನುಮಂತಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪ್ರಾ.ಆರ್. ಎಚ್.ಜಂಗನವಾರಿ ಸ್ವಾಗತಿಸಿ, ಡಾ.ಸಂತೋಷ ಹಿರೇಮಠ ನಿರೂಪಿಸಿದರು.