Advertisement

Pocso Case: ಅಪ್ರಾಪ್ತೆಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ: ಯುವಕನ ಬಂಧನ

01:56 PM Sep 16, 2023 | Team Udayavani |

ಮುಂಡಗೋಡ: ಅಪ್ರಾಪ್ತೆಯನ್ನು ಯುವಕನೊಬ್ಬ ಅಪಹರಿಸಿ ಲೈಗಿಂಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಇಲ್ಲಿನ ಪೊಲೀಸರು ಪೋಕ್ಸೋ ಅಡಿ ಪ್ರಕರಣ ದಾಖಲಿಸಿಕೊಂಡು ಯುವಕನನ್ನು ಬಂಧಿಸಿದ್ದಾರೆ.

Advertisement

ಮಳಗಿ ಗ್ರಾಮದ ವ್ಯಾಪ್ತಿಯ ನಿವಾಸಿ ಕಿರಣ ಹಿರೆಕಣಗಿ ಆರೋಪಿತನಾಗಿದ್ದಾನೆ. ಅಪ್ರಾಪ್ತೆ ವಿದ್ಯಾರ್ಥಿನಿಯಾಗಿದ್ದು ಸೆ.13 ರಂದು ಮನೆಯಿಂದ ಮಳಗಿ ಗ್ರಾಮದ ಪದವಿ ಪೂರ್ವ ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಹೋದವಳು ಮನೆಗೆ ಬಾರದೆ ಕಾಣೆಯಾಗಿದ್ದ ಬಗ್ಗೆ ವಿದ್ಯಾರ್ಥಿನಿಯ ತಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ತನಿಖೆ ಕೈಗೆತ್ತಿಕೊಂಡ ಪೊಲೀಸರು ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದು ಆತನ ವಿರುದ್ಧ ಪೋಕ್ಸೋ ಪ್ರಕರಣದ ಅಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Dunki: ಕ್ರಿಸ್ಮಸ್‌ ಗೆ ʼಡಂಕಿʼ ರಿಲೀಸ್ ಪಕ್ಕಾ; ಹ್ಯಾಟ್ರಿಕ್‌ ಹಿಟ್‌ ಕೊಡ್ತಾರ ಶಾರುಖ್?

Advertisement

Udayavani is now on Telegram. Click here to join our channel and stay updated with the latest news.

Next