Advertisement
ಈ ಲಾಡ್ಜ್ ಅನ್ನು ನಗರಸಭೆಯಿಂದ ರಮೇಶ್ ಶೆಟ್ಟಿ 20 ವರ್ಷಗಳಿಗಾಗಿ ಲೀಸಿಗೆ ಪಡೆದುಕೊಂಡಿದ್ದರು. ಈಗ 12 ವರ್ಷ ಪೂರೈಸಲಾಗಿದೆ. ಸರಕಾರ ಹಾಗೂ ನಗರಸಭೆಗೆ ಸಂಬಂಧಿಸಿದ ಈ ಕಟ್ಟಡದಲ್ಲಿ ನಿರಂತರವಾಗಿ ಅನೈತಿಕ ವ್ಯವಹಾರ ನಡೆಸಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುತ್ತಿದ್ದರು. ಈ ಬಗ್ಗೆ ಹಲವಾರು ಬಾರಿಗೆ ಎಚ್ಚರಿಕೆ ನೀಡಿದ್ದರೂ ಅನೈತಿಕ ವ್ಯವಹಾರ ಮುಂದುವರಿದಿದ್ದು, ಆದ್ದರಿಂದ ಪರವಾನಿಗೆ ರದ್ದುಪಡಿಸುವಂತೆ ಪೊಲೀಸ್ ಇಲಾಖೆಯು ನಗರಸಭೆಗೆ ಪತ್ರ ಬರೆದಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ನೋಟಿಸ್ ಜಾರಿ ಮಾಡಿದೆ.
ಇದೇ ಲಾಡ್ಜ್ ನಲ್ಲಿ ಬಾಲಕಿ ಹಾಗೂ ಮತ್ತೂರ್ವ ಆರೋಪಿಗೆ ರೂಮ್ ನೀಡಿದ್ದ ಎನ್ನುವ ಕಾರಣಕ್ಕೆ ರಮೇಶ್ ಶೆಟ್ಟಿ ಮೇಲೆ ಕೋಟ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಇದೇ ರೀತಿ ಬಿಟ್ಟರೆ ಚಟುವಟಿಕೆಯನ್ನು ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿ ನೋಟಿಸ್ ಜಾರಿ ಮಾಡಲಾಗಿದ್ದು, 10ರಿಂದ 15 ದಿನಗಳೊಳಗೆ ಪರವಾನಿಗೆ ರದ್ದುಗೊಳಿಸಲಾಗುತ್ತದೆ ಎಂದು ಪೌರಾಯುಕ್ತರು ತಿಳಿಸಿದ್ದಾರೆ. ಪ್ರಕರಣದಲ್ಲಿ ವಶಕ್ಕೆ ಪಡೆದಿರುವ ಇಬ್ಬರು ಮಹಿಳೆಯರನ್ನು ಸಖೀ ಕೇಂದ್ರಕ್ಕೆ ದಾಖಲಿಸಲಾಗಿದೆ.