Advertisement

ಅತಿಶಯ ಕ್ಷೇತ್ರ ಮುಂಬ್ರಾ: ಮಹಾಮಸ್ತಕಾಭಿಷೇಕ

04:40 PM May 17, 2017 | |

ಮುಂಬಯಿ: ಅತಿಶಯ ಕ್ಷೇತ್ರ  ಮುಂಬ್ರಾದ ಭಗವಾನ್‌ ಬಾಹುಬಲಿಯ ಪುಣ್ಯಕ್ಷೇತ್ರದಲ್ಲಿ   16 ವರ್ಷಗಳ ಬಳಿಕ ಮಹಾ ಮಸ್ತಕಾಭಿಷೇಕವು ರವಿವಾರ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ವೈಭವದಿಂದ  ನಡೆಯಿತು.

Advertisement

ಭಾರತ ಗೌರವ, ಗಣಿನಿ  ಆಯಿìಕಾ 105 ಜ್ಞಾನಮತಿ ಮಾತಾಜೀ ಮತ್ತು 105 ಚಂದನಮತಿ  ಮಾತಾಜಿಯವರ ದಿವ್ಯ ಉಪಸ್ಥಿತಿಯಲ್ಲಿ  ಹಾಗೂ ಸ್ವಸ್ತಿ ಶ್ರೀ ರವೀಂದ್ರಕೀರ್ತಿ ಸ್ವಾಮೀಜಿ ಅವರ ಶುಭಾಶೀರ್ವಾದಗಳೊಂದಿಗೆ ಭಗವಾನ್‌ ಬಾಹುಬಲಿಯ ಮಹಾಮಸ್ತಕಾಭಿಷೇಕ ಸಾವಿರಾರು  ಭಕ್ತಾದಿಗಳ ಸಮ್ಮುಖದಲ್ಲಿ ಮುಂಜಾನೆಯಿಂದ ಪೂಜಾ ವಿಧಿ-ವಿಧಾನಗಳೊಂದಿಗೆ ಮಂಗಳ ದ್ರವ್ಯಗಳ  ವಿತರಣೆ ನಡೆಯಿತು.

ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ, ಮೈತ್ರಿಯಿಂದ ಪ್ರಗತಿ, ಧ್ಯಾನದಿಂದ ಸಿದ್ಧಿª, ಈ ಚಿಂತನೆಗಳನ್ನು ತನ್ನ ಜೀವನದಲ್ಲಿ ಅನುಷ್ಠಾನಕ್ಕೆ ತಂದು ಅಹಿಂಸಾ ಶಕ್ತಿಯನ್ನು ಜಗಕ್ಕೆ  ಪಸರಿಸಿದವರು  ಭಗವಾನ್‌ ಬಾಹುಬಲಿ. ಇಂತಹ ಉನ್ನತ ಗರಿಮೆಯುಳ್ಳ ತ್ಯಾಗಿಯ ಉನ್ನತ ಮೂರ್ತಿ ಇರುವ ಮುಂಬ್ರಾದಲ್ಲಿ ಬೆಳಗ್ಗೆ 8 ರಿಂದ ಸಭಾ ಮಂಟಪದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು.

ಅನಂತರ ಭಗವಾನ್‌ ಬಾಹುಬಲಿಗೆ ನವರತ್ನ ಕಲಶ, ರಜತ ಕಲಶ, ತಾಮ್ರ ಕಲಶ ಹಾಗೂ ಪಂಚಾಮೃತ  ದ್ರವ್ಯಗಳಿಂದ, ಬಾಹುಬಲಿ ಗಿರಿಯಲ್ಲಿ 1008 ಕಲಶಗಳಿಂದ, ಜಲ, ಚಂದನ, ಅಷ್ಟಗಂಧ, ಅಮೃತರಸ, ಅರಶಿನ,  ಸರ್ವ ಔಷಧಿ, ಪುಷ್ಪ ವೃಷ್ಟಿ ಮುಂತಾದ ದ್ರವ್ಯಗಳಿಂದ ಮಹಾಮಜ್ಜನ ನೆರವೇರಿತು. 

ಸುಮಾರು 16 ವರ್ಷಗಳ ನಂತರ ಲಭಿಸಿದ ಇಂತಹ ಸೌಭಾಗ್ಯವನ್ನು ಸುಮಾರು 5000 ಶ್ರಾವಕ ಶ್ರಾವಕಿಯರು ಕಣ್ತುಂಬಿಕೊಂಡರು ಪುನೀತರಾದರು.
ಕೊನೆಯಲ್ಲಿ ಮಾತಾಜೀ ಹಾಗೂ ಹಾಗೂ ಸ್ವಾಮೀಜಿಯವರ ಪ್ರವಚನ ಕಾರ್ಯಕ್ರಮ ನಡೆಯಿತು.  

Advertisement

ಆಕರ್ಷಣೀಯವಾದ ಶಾಂತಿ ಮಂತ್ರ, ಮಹಾಮಂಗಳಾರತಿ ಯೊಂದಿಗೆ ಮಹಾಮಸ್ತಕಾಭಿಷೇಕ ಕಾರ್ಯಕ್ರಮವು ಸಮಾಪ್ತಿಗೊಂಡಿತು. 
ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಅನೇಕ ಧಾರ್ಮಿಕ, ರಾಜಕೀಯ ನೇತಾರರು, ಗಣ್ಯತಿ-ಗಣ್ಯರು, ತುಳು-ಕನ್ನಡಿಗರು, ಅಖೀಲ ಕರ್ನಾಟಕ ಜೈನ ಸಂಘ ಮುಂಬಯಿ ಇದರ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯರು, ಸಮಾಜ ಬಾಂಧವರು ವಿವಿಧೆಡೆಗಳಿಗೆ ಆಗಮಿಸಿ ಪ್ರಸಾದ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next