Advertisement

ಐ-ಲೇಸಾ ತಂಡದಿಂದ ತುಳು ಭಾವಗೀತೆಗಳ ಆಹ್ವಾನ

12:48 PM Sep 10, 2020 | Nagendra Trasi |

ಮುಂಬಯಿ, ಸೆ. 9: ಐ-ಲೇಸಾ (The Voice of Ocean) ತಂಡವು ಹೆಸರಾಂತ ಕವಿ ಮತ್ತು ತುಳು ಲಿಪಿ ತಜ್ಞ ಡಾ| ವೆಂಕಟರಾಜ್‌ ಪುಣಿಂಚತ್ತಾಯ ಇವರ
ಸಂಸ್ಮರಣೆಗಾಗಿ ನೂರ ಒಂದು ತುಳು ಭಾವಗೀತೆಗಳ ಪುಸ್ತಕವನ್ನು ಪ್ರಕಟಿಸಲಿದೆ. ಆ ಪ್ರಯುಕ್ತ ಜಗದಗಲ ಪಸರಿಸಿರುವ ತುಳು ಬರಹಗಾರರಲ್ಲಿ ಉತ್ತಮ ಗೇಯತೆಯ ತುಳು ಭಾವಗೀತೆಗಳನ್ನು ಆಹ್ವಾನಿಸಲಾಗಿದೆ.

Advertisement

ತುಳು ಭಾವಗೀತೆಗಳನ್ನು ಕನ್ನಡ ಲಿಪಿಯಲ್ಲಿ (ಯುನಿಕೋಡ್‌) ಟೈಪ್‌ ಮಾಡಿರಬೇಕು. ರಚನೆಕಾರರಿಗೆ ಯಾವುದೇ ವಯೋಮಾನದ ನಿರ್ಬಂಧವಿರುವುದಿಲ್ಲ. ಒಬ್ಬರಿಗೆ ಗರಿಷ್ಠ ಎರಡು ರಚನೆಗಳನ್ನು ಮಾತ್ರ ಕಳುಹಿಸುವ ಅವಕಾಶವಿದ್ದು, ರಚನೆಯು ಭಾವಗೀತೆಯ ರೂಪದಲ್ಲಿದ್ದು ಹಾಡುವುದಕ್ಕೆ ಸೂಕ್ತವಾಗಿರಬೇಕು. ಭಾವಗೀತೆಯ ಜೊತೆಗೆ ಜಾನಪದದ ಲೇಪವಿದ್ದರೂ ಪರವಾಗಿಲ್ಲ. ಭಾವಗೀತೆಯು ಬರಹಗಾರರ ಸ್ವರಚನೆಯಾಗಿರಬೇಕು.

ಈ ಹಿಂದೆ ಯಾವ ರೂಪದಲ್ಲಿ ಎಲ್ಲಿಯೂ ಇದು ಪ್ರಕಟವಾಗಿರಬಾರದು. ಮಾಧ್ಯಮದಲ್ಲಿ ಬಂದಿದ್ದರೆ ಅಂತಹ ರಚನೆಗಳನ್ನು ಕಳುಹಿಸಬಾರದು. ಅನುವಾದಿತ ರಚನೆಗಳಿಗೆ ಅವಕಾಶವಿಲ್ಲ. ಉತ್ತಮವಾದ ನೂರ ಒಂದು ಭಾವಗೀತೆಗಳನ್ನು ಮಾತ್ರ ಪರಿಗಣಿಸಲಾಗುವುದು.

ಆಯ್ಕೆಯಾದ ಭಾವಗೀತೆಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಲಾಗುವುದು. ಭಾವಗೀತೆಯ ರಚನೆಕಾರರ ಹೆಸರನ್ನು ಪುಸ್ತಕದಲ್ಲಿ ಪ್ರಕಟಿಸಲಾಗುವುದು. ಜೊತೆಗೆ
ಅವರಿಗೆ ಒಂದು ಪುಸ್ತಕವನ್ನು ಉಚಿತವಾಗಿ  ನೀಡಲಾಗುವುದು. ಸಂಸ್ಥೆಗೆ ಕಳುಹಿಸಿದ ನಂತರವೂ ಆ ಭಾವಗೀತೆ ರಚನೆಯನ್ನು ಬೇರೆಲ್ಲಿಗೂ ಕಳುಹಿಸಬಾರದು ಹಾಗೂ ಪ್ರಕಟಿಸಬಾರದು. ಆಯ್ಕೆಯಾದ ಭಾವಗೀತೆಯ ಸಂಪೂರ್ಣ ಹಕ್ಕು ಐ-ಲೇಸಾದ್ದಾಗಿರುತ್ತದೆ.

ಗೀತೆಗಳ ಆಯ್ಕೆ, ರಾಗ ಸಂಯೋಜನೆಯ ಹಕ್ಕು, ಇತ್ಯಾದಿ ತೀರ್ಮಾನಗಳು ಸಂಪೂರ್ಣವಾಗಿ ಐ-ಲೇಸಾ ತಂಡದ್ದಾಗಿರುತ್ತದೆ. ನಿಯಮಗಳು ಒಪ್ಪಿಗೆಯಾದಲ್ಲಿ ನಿಮ್ಮ ಟೈಪ್‌ ಮಾಡಿದ ತುಳು ಭಾವಗೀತೆ ರಚನೆಗಳನ್ನು ಈ ಮೈಲ್‌ 101tulusongs.ilesagmail.com ಅಥವಾ ವಾಟ್ಸಾಪ್‌ ಮೂಲಕ 9342936622
ಸಂಖ್ಯೆಗೆ ಕಳುಹಿಸಬಹುದು. ಭಾವಗೀತೆಗಳನ್ನು ಸೆ. 20 ರೊಳಗೆ ಕಳುಹಿಸತಕ್ಕದ್ದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next