Advertisement

ಜನಪ್ರಿಯ ಯಕ್ಷಗಾನ ಮಂಡಳಿ ಮುಂಬಯಿ: ನವೀಕೃತ ಕಚೇರಿಯ ಉದ್ಘಾಟನೆ

02:20 PM Aug 05, 2021 | Team Udayavani |

ಮುಂಬಯಿ: ವಿಶ್ವ ವಿಖ್ಯಾತ ಪ್ರಸಿದ್ದ ಜಿಎಸ್‌ಬಿ ಸೇವಾ ಮಂಡಲದ ಗಣೇಶೋತ್ಸವದ ಅಂಗ ಸಂಸ್ಥೆಯಾಗಿರುವ ಜನಪ್ರಿಯ ಯಕ್ಷಗಾನ ಕಲಾ ಮಂಡಳಿ ತನ್ನ ಸ್ವಂತ ಕಚೇರಿಯನ್ನು ಕುರ್ಲಾ ಪಶ್ಚಿಮದ ಶಾಂತಿ ನಿವಾಸದಲ್ಲಿ ಹೊಂದಿದೆ.

Advertisement

ಇದ ನವೀಕೃತ ಕಚೇರಿಯ ಉದ್ಘಾಟನ ಸಮಾರಂಭವು ಶ್ರೀ ಕಾಶೀ ಮಠಾಧೀಶ ಶ್ರೀಮದ್‌ ಸುಧೀಂದ್ರ ತೀರ್ಥ, ಶ್ರೀಮದ್‌ ಸಮ್ಯಮೇಂದ್ರ
ತೀರ್ಥ ಸ್ವಾಮೀಜಿಯವರ ಶುಭಾ ಶೀರ್ವಾದಗಳೊಂದಿಗೆ ಜರಗಿತು.

ಜು. 30ರಂದು ಧಾರ್ಮಿಕ ಕಾರ್ಯಕ್ರಮವಾಗಿ ವಾಸ್ತುಹೋಮ, ನವಗ್ರಹ ಹೋಮ, ಗಣಹೋಮ ಮತ್ತು ಶ್ರೀ ಸತ್ಯನಾರಾಯಣ ಮಹಾಪೂಜೆಯ
ವಿಧಿ-ವಿಧಾನವನ್ನು ವೇದಮೂರ್ತಿ ಪ್ರಶಾಂತ್‌ ಭಟ್‌, ಹರೀಶ್‌ ಭಟ್‌ ಅವರ ಮುಂದಾಳತ್ವದಲ್ಲಿ ನಡೆಯಿತು.

ಮಂಡಳಿಯ ವತಿಯಿಂದ ದೀಪಕ್‌ ಶೆಣೈ, ಆರ್‌. ಜಿ. ಭಟ್‌ ಅವರನ್ನು ಗೌರವಿಸಲಾಯಿತು. ಅನ್ನ ಸಂತರ್ಪಣೆ ಪ್ರಸಾದವನ್ನು ವಿಜಯ್‌ ದಿನೇಶ್‌
ಪ್ರಭು ಅವರ ಸೇವಾರ್ಥಕವಾಗಿ ಆಯೋಜಿಸಲಾಯಿತು. ಕಚೇರಿ ನವೀಕರಣಕ್ಕೆ ದೀಪಕ್‌ ಶೆಣೈ, ಸಹಾಯಕರಾಗಿ ಮತ್ತು ಪೂಜಾ
ಯಜಮಾನರಾಗಿಯೂ ಮಂಡಳಿಯ ಅಧ್ಯಕ್ಷ ಮೇಲು ಗಂಗೊಳ್ಳಿ ರವೀಂದ್ರ ಪೈ, ಕಾರ್ಯದರ್ಶಿ ಕುಕ್ಕೆಹಳ್ಳಿ ವಿಠಲ್‌ ಪ್ರಭು, ಕೋಶಾಧಿಕಾರಿ ಯೋಗೇಶ್‌ ಕೃಷ್ಣ ಡಾಂಗೆ ಅವರು ಸಹಕರಿಸಿದರು. ಕಾರ್ಯಕ್ರಮದಲ್ಲಿ ಮಂಡಳಿಯ ಎಲ್ಲ ಸದಸ್ಯರು, ಕಲಾವಿದರು ಉಪಸ್ಥಿತರಿದ್ದರು.

65 ವರ್ಷಗಳ ಹಿಂದೆ ಗೌಡ ಸಾರಸ್ವತ ಬ್ರಾಹ್ಮಣ ಬಾಂಧವರು ಒಟ್ಟುಗೂಡಿ ಯಕ್ಷಗಾನ ಮಂಡಳಿಯ ಸ್ಥಾಪನೆಗಾಗಿ ಶ್ರೀ ಕಾಶೀಮಠಾಧೀಶ ಶ್ರೀಮದ್‌ ಸುಧೀಂದ್ರ ತೀರ್ಥ ಸ್ವಾಮೀಜಿಯವರಲ್ಲಿ ಪ್ರಸ್ತಾವನೆಯನ್ನು ಇಟ್ಟಿದ್ದರು. ಈ ಪ್ರಸ್ತಾವನೆಗೆ ಗುರುಗಳು ಸಂತೋಷದಿಂದ ಒಪ್ಪಿಗೆ ಕೊಟ್ಟು ಇದಕ್ಕೆ ಜನಪ್ರಿಯ ಯಕ್ಷಗಾನ ಮಂಡಳಿ ಎಂದು ನಾಮಕರಣ ಮಾಡಿದರು. ಇದೀಗ ಮಂಡಳಿಯು 65ನೇ ವರ್ಷಾಚರಣೆಯಲ್ಲಿದ್ದು, ವರ್ಷಪೂರ್ತಿ ಹಲವಾರು ಯಕ್ಷಗಾನ ಕಾರ್ಯಕ್ರಮಗಳನ್ನು ಪ್ರದರ್ಶಿಸುವಲ್ಲಿಮಂಡಳಿಯು ಯಶಸ್ವಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.