Advertisement

ಹುಟ್ಟಿದ ದಿನವೇ ಕೊವೀಡ್ ಲಸಿಕೆ ಪಡೆದ ‘100’ರ ಅಜ್ಜಿ

08:18 PM Mar 06, 2021 | Team Udayavani |

ಮುಂಬೈ : ಸದ್ಯ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎರಡನೇ ಹಂತದ ಲಸಿಕೆ ಹಾಕುವ ಪ್ರಕ್ರಿಯೆ ಮಾರ್ಚ್ 1 ರಿಂದ ಪ್ರಾರಂಭವಾಗಿದೆ.

Advertisement

ಇದೇ ಹಿನ್ನೆಲೆಯಲ್ಲಿ 100 ವರ್ಷ ಪೂರೈಸಿರುವ ಅಜ್ಜಿ ಕೋವಿಡ್ ಲಸಿಕೆ ಮೊದಲ ಡೋಸ್ ಹಾಕಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ ತನ್ನ ಹುಟ್ಟು ಹಬ್ಬದ ದಿನವೇ ಲಸಿಕೆಯನ್ನು ಹಾಕಿಸಿಕೊಂಡು ಗಮನ ಸೆಳೆದಿದ್ದಾರೆ.

ಮುಂಬೈನ ಬಂದ್ರ ಕುರ್ಲಾ ಕಾಂಪ್ಲೆಕ್ಸ್ ವ್ಯಾಕ್ಸಿನೇಷನ್ ಸೆಂಟರ್‍ ನಲ್ಲಿ ಲಸಿಕೆ ಪಡೆದ ಪಾರ್ವತಿ ಕೇಡ್ಕರ್ ನಂತ್ರ ಹುಟ್ಟು ಹಬ್ಬದ ಸಂಭ್ರಮದಲ್ಲಿ ಕೇಕ್ ಕಟ್ ಮಾಡಿದ್ದಾರೆ. ಇವರು ಮಾರ್ಚ್ 5, 1921 ರಂದು ಜನಿಸಿದ್ದರು.

60 ವರ್ಷ ಮೇಲ್ಪಟ್ಟವರಿಗೆ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಡೋಸ್ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next