Advertisement

ಸುಂದರವಾಗಿ ಕಾಣಬೇಕೆಂದು 17,500 ಕೊಟ್ಟು ಫೇಷಿಯಲ್ ಮಾಡಿದ ಮಹಿಳೆಯ ಮುಖ ಹೇಗಾಗಿದೆ ನೋಡಿ

02:17 PM Jun 20, 2023 | Team Udayavani |

ಮುಂಬಯಿ: ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು ಮಹಿಳೆಯರು ಏನೇನೆಲ್ಲಾ ಮಾಡಿಕೊಳ್ಳುತ್ತಾರೆ, ಇದರಿಂದ ಕೆಲವರ ಸೌಂದರ್ಯ ಹೆಚ್ಚಾದರೆ ಇನ್ನು ಕೆಲವರದ್ದು ಇದ್ದ ಸೌಂದರ್ಯವೂ ಹೋಗಿ ಇನ್ನೇನೋ ಆಗಿ ಬಿಡುತ್ತದೆ, ಅದರಂತೆ ಮಹಾರಾಷ್ಟ್ರದ ಮಹಿಳೆಯೊಬ್ಬರು ತನ್ನ ಮುಖದ ಸೌಂದರ್ಯ ಹೆಚ್ಚಿಸಲು ಬರೋಬ್ಬರಿ 17,500 ಖರ್ಚು ಮಾಡಿ ಮುಖದ ಚರ್ಮ ಸುಟ್ಟಿಸಿಕೊಂಡ ಘಟನೆ ನಡೆದಿದೆ.

Advertisement

ಹೌದು ಕೆಲವೊಮ್ಮೆ ನಾವು ಹಚ್ಚಿಕೊಳ್ಳುವ ಸೌಂದರ್ಯ ವರ್ಧಕಗಳು ನಮ್ಮ ಚರ್ಮದ ಮೇಲೆ ಪರಿಣಾಮ ಬೀರುತ್ತವೆ ಅದೇ ರೀತಿ ಮಹಾರಾಷ್ಟ್ರದ ಮಹಿಳೆಯ ಮುಖಕ್ಕೆ ಮಾಡಿದ ಫೇಷಿಯಲ್ ನಿಂದ ಮಹಿಳೆಯ ಮುಖದ ಚರ್ಮವೇ ಸುಟ್ಟು ಹೋಗಿದೆ.

ಘಟನೆಯ ವಿವರ:
ಜೂನ್ 17 ರಂದು ಮಹಿಳೆಯೊಬ್ಬರು ಅಂಧೇರಿಯ ಕಾಮಧೇನು ಶಾಪಿಂಗ್ ಸೆಂಟರ್‌ನಲ್ಲಿರುವ ಗ್ಲೋ ಲಕ್ಸ್ ಸಲೂನ್‌ ಗೆ ತೆರಳಿ 17,500 ರೂಪಾಯಿ ಮೌಲ್ಯದ ಹೈಡ್ರಾಫೇಶಿಯಲ್ ಚಿಕಿತ್ಸೆ ಪಡೆದುಕೊಂಡಿದ್ದರು ಚಿಕಿತ್ಸೆ ಪಡೆದು ಮನೆಗೆ ಬಂದ ಮಹಿಳೆಗೆ ಮುಖದಲ್ಲಿ ತುರಿಕೆಯ ಅನುಭವಾಗಿದೆ ಅಲ್ಲದೆ ಕೆಲವೇ ಹೊತ್ತಿನಲ್ಲಿ ಮುಖದ ಚರ್ಮ ಸುಟ್ಟು ಹೋಗಿ ವಿರೂಪಗೊಂಡಿದೆ.

ಹೈಡ್ರಾಫೇಶಿಯಲ್ ಎಂಬುದು ವೈದ್ಯಕೀಯ – ದರ್ಜೆಯ ರಿಸರ್ಫೇಸಿಂಗ್ ಚಿಕಿತ್ಸೆಯಾಗಿದ್ದು ಪರವಾನಗಿ ಪಡೆದ ವೈದ್ಯಕೀಯ ವೃತ್ತಿಪರರು, ಪ್ರಮಾಣೀಕೃತ ಹೈಡ್ರಾಫೇಶಿಯಲ್ ಸೌಂದರ್ಯಶಾಸ್ತ್ರಜ್ಞರು ಲಭ್ಯವಿರುವಲ್ಲಿ ಈ ಚಿಕಿತ್ಸೆಯನ್ನು ನೀಡಲಾಗುತ್ತದೆ ಆದರೆ ಈ ಬ್ಯೂಟಿ ಪಾರ್ಲರ್ ನಲ್ಲಿ ನುರಿತ ತಜ್ಞರಿಂದಲೇ ಚಿಕಿತ್ಸೆ ನೀಡಲಾಗಿತ್ತೆ ಎಂಬುದು ಪ್ರಶ್ನೆಯಾಗಿದೆ.

ಮಹಿಳೆ ತನ್ನ ಸುಂದರವಾದ ಮುಖದ ಕಳೆಯನ್ನು ಕಳೆದುಕೊಂಡು ನರಕಯಾತನೆ ಅನುಭವಿಸುತ್ತಿದ್ದಾರೆ. ಅಲ್ಲದೆ ಚಿಕಿತ್ಸೆ ನೀಡಿದ ಬ್ಯೂಟಿ ಪಾರ್ಲರ್ ವಿರುದ್ಧ ಮಹಿಳೆ ದೂರು ದಾಖಲಿಸಿದ್ದಾರೆ.

Advertisement

ಇದನ್ನೂ ಓದಿ : 13000 ಅಡಿ ಆಳ; Titanic ಅವಶೇಷ ವೀಕ್ಷಿಸಲು ತೆರಳಿದ ಪ್ರವಾಸಿಗರ ಸಬ್‌ ಮರ್ಸಿಬಲ್ ನಾಪತ್ತೆ

Advertisement

Udayavani is now on Telegram. Click here to join our channel and stay updated with the latest news.

Next