ಮುಂಬಯಿ ಜನತೆಯ ಬಹುನಿರೀಕ್ಷಿತ ವಾಟರ್ ಟ್ಯಾಕ್ಸಿ ಸೌಲಭ್ಯ ಗುರುವಾರದಂದು ಶುರುವಾಗಿದ್ದು, ಮುಂಬಯಿ ಮತ್ತು ನವಿ ಮುಂಬಯಿ ನಡುವೆ ಸೇವೆ ನೀಡಲಿದೆ. 10 ವರ್ಷಗಳ ಹಿಂದಿನ ಯೋಜನೆಯಾದರೂ ಈಗ ಇದು ಕಾರ್ಯರೂಪಕ್ಕೆ ಬರುತ್ತಿದೆ. ಕೇಂದ್ರ ಸಚಿವ ಸರ್ಬಾನಂದ ಸೋನಾವಾಲ್ ಹಾಗೂ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಇದರ ಉದ್ಘಾಟನೆ ನೆರವೇರಿಸಿದ್ದಾರೆ.
8 ಬೋಟ್‌ಗಳ ಸೇವೆ :
ಬೇಲಾಪುರದಿಂದ ಈ ಸೇವೆ ಆರಂಭವಾಗಿದೆ. ಒಟ್ಟು 8 ಬೋಟ್‌ಗಳಿದ್ದು, ಇದರಲ್ಲಿ 7 ಸ್ಪೀಡ್ ಬೋಟ್‌ಗಳಾಗಿವೆ. ಕ್ಯಾಟಮಾರನ್ ಬೋಟ್ ಕೂಡ ಲಭ್ಯವಿದ್ದು, ಇದರಲ್ಲಿ 56 ಪ್ರಯಾಣಿಕರು ತೆರಳಬಹುದು. ನವಿ ಮುಂಬಯಿಯ ಬೇಲಾಪುರದಿಂದ ದಕ್ಷಿಣ ಮುಂಬಯಿಯ ಬೌಚಾ ಢಕ್ಕಾಗೆ ತೆರಳಲು ಈವರೆಗೆ 1.50 ಗಂಟೆ ಬೇಕಾಗಿತ್ತು. ಆದರೆ ಈಗ 30 ನಿಮಿಷ ಸಾಕು.
ಸಮಯ : ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ ಈ ಬೋಟ್‌ಗಳು ಸಂಚರಿಸಲಿವೆ. ಇದಕ್ಕೆ ಸಂಬಂಧಿಸಿದ ವೆಬ್‌ಸೈಟ್‌ವೊಂದು ಇದ್ದು, ಇದರ ಮೂಲಕ ಬುಕಿಂಗ್ ಮಾಡಬಹುದು.
3 ಮಾರ್ಗಗಳಲ್ಲಿ ಸಂಚಾರ :
8.37 ಕೋಟಿ ರೂ. ವೆಚ್ಚದ ಈ ಯೋಜನೆ ಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಮಪಾಲು ಇದೆ. ಬೇಲಾಪುರದಿಂದ ಫೆರ್ರಿ ವಾರ್ಫ್, ಬೇಲಾಪುರದಿಂದ ಎಲಿಫೆಂಟಾ ಕೇವ್ಸ್ ಮತ್ತು ಬೇಲಾಪುರದಿಂದ ಜೆಎನ್ ಪಿಟಿಗೆ ಅಂದರೆ ಒಟ್ಟು 3 ಮಾರ್ಗಗಳಲ್ಲಿ ವಾಟರ್ ಟ್ಯಾಕ್ಸಿ ಸಂಚಾರ ನಡೆಸಲಿದೆ.
ಸ್ಪೀಡ್‌ಬೋಟ್‌ಗೆ 800 ರಿಂದ :1,200 ರೂ. ದರ
ಕ್ಯಾಟಮಾರನ್ ಬೋಟ್‌ಗೆ : 290 ರೂ.
ಯೋಜನೆಯ ಒಟ್ಟು ವೆಚ್ಚ : 8.37 ಕೋಟಿ ರೂ.