Advertisement

ಮುಂಬಯಿ ವಿವಿ ಕನ್ನಡ ವಿಭಾಗ: ಕವಿ ಸಮಯ

03:35 PM May 05, 2018 | Team Udayavani |

ಮುಂಬಯಿ: ವಿಶ್ವ ಪುಸ್ತಕ ದಿನದ ಶುಭಾವಸರದಲ್ಲಿ ಸಾಂತಾಕ್ರೂಜ್‌ ಪೂರ್ವದ ಕಲೀನಾ ಕ್ಯಾಂಪಸ್‌ನ ವಿದ್ಯಾನಗರಿ ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ವತಿಯಿಂದ ಕವಿ ಸಮಯ ಕಾರ್ಯಕ್ರಮವು  ಜರಗಿತು.

Advertisement

ಮುಂಬಯಿ ವಿವಿಯ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್‌. ಉಪಾಧ್ಯ ಅವರು ಮಾತನಾಡುತ್ತ,  ಕನ್ನಡ ಸಾಹಿತ್ಯಕ್ಕೆ ಎರಡು ಸಾವಿರ‌ ವರ್ಷಗಳ ಇತಿಹಾಸವಿದೆ. ಕನ್ನಡ ಸಾಹಿತ್ಯವು ಬಹು ಶ್ರೀಮಂತಿಕೆಯಿಂದ ಕೂಡಿದೆ. ಕಥೆ, ಕಾವ್ಯ, ನಾಟಕ, ಕಾದಂಬರಿ, ವಿಮರ್ಶೆ ಸಂಶೋಧನೆ ಇತ್ಯಾದಿ ಸಾಹಿತ್ಯ ಪ್ರಕಾರಗಳಿಂದ ಸಾಹಿತ್ಯಕ್ಕೆ ಕನ್ನಡದ ಹಿರಿ-ಕಿರಿಯ ಬರಹಗಾರರು  ಶಕ್ತಿ ತುಂಬಿದ್ದಾರೆ. ಕಾವ್ಯ ಕಾಮನ ಬಿಲ್ಲು ಇದ್ದ ಹಾಗೆ. ಅದೊಂದು ಮಿಂಚು ಇದ್ದಂತೆ. ಓದುಗನ ಅಂತರಂಗವನ್ನು ಕೆದಕುವ ಕಾವ್ಯವೇ ನಿಜವಾದ ಕಾವ್ಯವಾಗಬಲ್ಲದು. ಇತ್ತೀಚೆಗೆ ನಾವೆಲ್ಲ ತುಂಬ ಮಾತನಾಡುತ್ತೇವೆ. ಬರೆಯುವುದು ಮಾತ್ರ ಕಡಿಮೆ. ಬರವಣಿಗೆ ಎಚ್ಚರಿಕೆಯಿಂದ ಆಗುವಂತಹದು. ಸತತ ಓದು, ಪರಿಶ್ರಮ ಇದ್ದರೆ ಲೇಖಕನು ಸುಲಭವಾಗಿ ಸಾಹಿತ್ಯ ರಚನೆ ಮಾಡಲು ಸಾಧ್ಯ. ಮುಂಬಯಿ ಯುವ ಬರಹಗಾರರಿಗೆ ಚಿತ್ತಾಲ, ಬಲ್ಲಾಳ, ಜಯಂತ ಕಾಯ್ಕಿಣಿ ಮೊದಲಾದ ಹಿರಿಯ ಲೇಖಕರು ಮಾದರಿಯಾಗಿದ್ದಾರೆ. ಬೇರೆ ಸಾಹಿತಿಗಳ ಕೃತಿಗಳನ್ನು ಓದದೆ ಕೃತಿ ರಚನೆ ಸಾಧ್ಯವಾಗದು ಎಂದು ತಿಳಿಸಿದರು.

ದಾಕ್ಷಾಯಣಿ ಯಡವಳ್ಳಿ ಅವರು ಜಾನಪದ ಹಾಡುಗಳನ್ನು ಹಾಡಿದರು. ಶಾರದಾ ಅಂಬೆಸಂಗ ಅವರು ಸ್ವರಚಿತ ಕವಿತೆಗಳನ್ನು ವಾಚಿಸಿದರು. ಅಮೃತಾ ಶೆಟ್ಟಿ, ಲಕ್ಷಿ¾à ಹೆರೂರ, ಜಯಕರ ಪಾಲನ್‌, ಶೈಲಜಾ ಹೆಗಡೆ, ಉದಯ ಶೆಟ್ಟಿ, ರಮಾ ಉಡುಪ, ಜಯಾ ಸಾಲಿಯಾನ್‌, ಮಧುಸೂದನ್‌ ರಾವ್‌, ಸುರೇಖಾ ದೇವಾಡಿಗ, ಶಿವರಾಜ ಎಂ.ಜಿ., ದಿನಕರ ಚಂದನ್‌, ಕುಮುದಾ ಆಳ್ವ  ಉಪಸ್ಥಿತರಿದ್ದರು. ಡಾ| ಪೂರ್ಣಿಮಾ ಎಸ್‌.ಶೆಟ್ಟಿ   ಕಾರ್ಯಕ್ರಮ ನಿರೂಪಿಸಿದರು. ದುರ್ಗಪ್ಪ ಕೋಟಿಯವರ್‌ ಅವರು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next