Advertisement
ಎ. 7ರಂದು ಅಪರಾಹ್ನ ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್‌ನ ವಿದ್ಯಾನಗರಿಯ ಕವಿವರ್ಯ ಡಾ| ಕುಸುಮಾಗ್ರಜ ಮರಾಠಿ ಭಾಷಾ ಭವನದ ಸಭಾಂಗಣದಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಆಯೋಜಿಸಿದ್ದ ಜಾನಪದ ಸಂಭ್ರಮ ಮತ್ತು ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ “ಜಾನಪದ ಉಳಿವು’ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಭಾರತೀಯ ಸಂಸ್ಕೃತಿ ಕಟ್ಟಿದ್ದೇ ನಾರಿಯರು. ಬೆಳಗಿನಿಂದ ಸಂಜೆಯ ವರೆಗೆ ಎಲ್ಲ ಕೆಲಸಗಳ ಮಧ್ಯೆಯೂ ಸಂಸ್ಕೃತಿ ಕಟ್ಟಿ ಬೆಳೆಸಿದ ಮಹಿಳೆಯರು. ಮಾತೆಯರು ಈ ತನಕ ಜಾನಪದ ವನ್ನು ಬದುಕುಳಿಸಿರುವುದೇ ದೊಡ್ಡತನ. ಇಂತಹ ಮನಸ್ಸು ಶುದ್ಧವಾಗಿಸಿದರೆ ಬದುಕು ಭವ್ಯವಾಗುವುದು. ಆದ್ದರಿಂದ ಯಾವುದೇ ತರ್ಕಕ್ಕೆ ತಲೆಯೊಡ್ಡದೆ ಬಾಳುವ ಪ್ರಯತ್ನ ಮಾಡಿರಿ ಎಂದರು.
ಇದೇ ಸಂದರ್ಭದಲ್ಲಿ ಜಾನಪದ ಕಲಾವಿದ ಸಿದ್ದಪ್ಪ ಬಿದರಿ ಅವರ “ಜಾನಪದ ಜವಾರಿ’ ಕೃತಿಯನ್ನು ಡಾ| ಅಪ್ಪಗೆರೆ ಬಿಡುಗಡೆಗೊಳಿಸಿದರು. ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕ ಡಾ| ಜೀವಿ ಕುಲಕರ್ಣಿ ಕೃತಿ ಪರಿಚಯಿಸಿದರು. ಬಳಿಕ ಡಾ| ಅಪ್ಪಗೆರೆ ತಿಮ್ಮರಾಜು, ಸಮಾಜ ಸೇವಕ ಮುದ್ರಾಡಿ ದಿವಾಕರ ಶೆಟ್ಟಿ ಹಾಗೂ ಶ್ರೀಪಾದ ಪಾದಕೀ ನವಿಮುಂಬಯಿ ಅವರನ್ನು ಅತಿಥಿಗಳು ಸಮ್ಮಾನಿಸಿ ಅಭಿನಂದಿಸಿದರು.
Related Articles
ಸಮಾಜ ಸೇವಕ ಮುದ್ರಾಡಿ ದಿವಾಕರ ಶೆಟ್ಟಿ ಇವರು ಗೌರವ ಸ್ವೀಕರಿಸಿ ಮಾತನಾಡಿ, ಎಂದು ನಾಲ್ಕು ಶಬ್ದಗಳು ಹುಟ್ಟಿದವೋ ಅಂದೇ ಜಾನಪದ ಹುಟ್ಟಿತು. ತಾಯಿಯ ಹುಟ್ಟಿನಿಂದ ಇಂತಹ ಜಾನಪದ ವಿಸ್ತೃತಗೊಂಡಿತು. ಇಂತಹ ಜಾನಪದವನ್ನು ಮುಂಬಯಿಗರು ಬೆಳೆಸಿದ್ದಾರೆ.
Advertisement
ಮುಂಬಯಿ ಕನ್ನಡಿಗರು ಸಿದ್ಧಿ ಸಾಧನೆಗೈದ ಪ್ರಾಮಾ ಣಿಕ ಬುದ್ಧಿ ಜೀವಿಗಳು. ಇಂತಹ ಜಾನಪದ ಸಂಭ್ರಮದ ವೇದಿಕೆಯಲ್ಲಿ ನನ್ನಂಥವರನ್ನು ಗುರುತಿಸಿ ಗೌರವಿಸಿದ್ದು ಅಭಿಮಾನ ಅನಿಸುತ್ತಿದೆ ಎಂದರು.
ಕನ್ನಡಿಗರು ಸಾಹಸಿಗರು ಮುಂಬಯಿ ವಾಸಿ ಕನ್ನಡಿಗರ ಸಾಧನೆ ಅಪರಿಮಿತ ವಾದದ್ದು. ಇಲ್ಲಿನ ಕನ್ನಡಿಗರು ಧೀರರು, ಶೂರರು, ಮಹಾನ್ ಸಾಹಸಿಗರೂ ಹೌದು. ಇಲ್ಲಿನ ಜನತೆಯ ಶ್ರದ್ಧೆ, ನಿಷ್ಠಾವಂತ ಬಾಳು ಸಾಮರಸ್ಯದ ಜೀವನ ಎಲ್ಲವೂ ಸುಂದರಮಯ. ಆದ್ದರಿಂದ ಮುಂಬಯಿ ಭಾರತದ ಭಾಗ್ಯ ನಗರಿಯಾಗಿದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಡಾ| ಜಿ. ಎನ್. ಉಪಾಧ್ಯ ತಿಳಿಸಿದರು. ಸುಶೀಲಾ ಎಸ್. ದೇವಾಡಿಗ ಸ್ವಾಗತ ಗೀತೆ ಹಾಡಿದರು. ನಳಿನಾ ಪ್ರಸಾದ್ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಸೋಮಶೇಖರ ಮಾಲ್ತಿ ಪಾಟೀಲ್ ವಂದಿಸಿದರು. ಚಿತ್ರ-ವರದಿ : ರೋನ್ಸ್ ಬಂಟ್ವಾಳ್