Advertisement
ಎ. 7 ರಂದು ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್‌ನ ವಿದ್ಯಾನಗರಿ ಅಲ್ಲಿನ ಕವಿವರ್ಯ ಡಾ| ಕುಸುಮಾಗ್ರಜ ಮರಾಠಿ ಭಾಷಾ ಭವನದ ಸಭಾಂಗಣದಲ್ಲಿ ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗವು ಆಯೋಜಿಸಿದ್ದ ಜಾನಪದ ಸಂಭ್ರಮದ ಮಧ್ಯಾಂತರದಲ್ಲಿ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್. ಶೆಟ್ಟಿ ಅವರ ಪಿಎಚ್‌ಡಿ ಮಹಾ ಪ್ರಬಂಧ “ಮುಂಬಯಿ ಕನ್ನಡಿಗರ ಸಿದ್ಧಿ ಸಾಧನೆಗಳು’ ಕೃತಿ ಬಿಡುಗಡೆಗೊಳಿಸಿ ಜಸ್ಟೀಸ್ ಶ್ರೀಕೃಷ್ಣ ಮಾತನಾಡಿದರು.ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್. ಉಪಾಧ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಿವೃತ್ತ ಪೊಲೀಸ್ ಅಧಿಕಾರಿ ಪ್ರಕಾಶ್ ಬಿ.ಭಂಡಾರಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಆರ್ಥಿಕ ತಜ್ಞ ಡಾ| ಆರ್. ಕೆ. ಶೆಟ್ಟಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಸಮಾಜ ಸೇವಕ ಮುದ್ರಾಡಿ ದಿವಾಕರ ಶೆಟ್ಟಿ, ಸುಧಾಕರ್ ಶೆಟ್ಟಿ ಮತ್ತು ಕು| ಸ್ವೀಕೃತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
Related Articles
Advertisement
ಡಾ| ಪೂರ್ಣಿಮಾ ಶೆಟ್ಟಿ ಇವರು ಮಾತನಾಡಿ, ನನ್ನ ಮೂರು ವರ್ಷದ ಅವಿರತ ಪರಿಶ್ರಮದ ಫಲ ಇಂದು ಕೃತಿರೂಪ ತಾಳಿ ಲೋಕಾರ್ಪಣೆಗೊಂಡಿದೆ. ನನ್ನ ಗುರುವರ್ಯ ಡಾ| ಜಿ. ಎನ್. ಉಪಾಧ್ಯ ಅವರ ಪ್ರೀತಿ ವಿಶ್ವಾಸದ ಭರವಸೆ, ಸಹಯೋಗ ಈ ಕೃತಿಯ ಬೆನ್ನುಲುಬಾಗಿದೆ. ಅವರ ಪ್ರೋತ್ಸಹದಿಂದ ನನ್ನ ಆಶಯದ ವಿದ್ಯೆಯ ಪಥ ಬದಲಾಯಿಸಿತು. ನನ್ನ ಕೈಯ ಅಕ್ಷರಗಳು ಬರವಣಿಗೆಯಾಗಿ ಪುಸ್ತಕ ರೂಪ ತಾಳುವಂತಾಯಿತು. ಅಲ್ಲದೆ ನನ್ನ ಪತಿ, ಸುಪುತ್ರಿ ಹಾಗು ತಾಯಿ-ತಂದೆ ಅವರ ಮಾತ್ರವಲ್ಲದೆ ಗಂಡನ ಮನೆಮಂದಿ, ಪರಿವಾರದ ಅನ್ಯೋನ್ಯ ಒಲುಮೆ, ಸಂಪೂರ್ಣ ಸಹಕಾರ ನನಗೆ ಪ್ರೇರಣೆಯಾಗಿದೆ. ಇದರಿಂದ ಮಹಿಳಾ ಸ್ವಾತಂತ್ರÂ ಮೌಲ್ಯ ಪಡೆದಂತಾಗಿದೆ. ಮುಂಬಯಿಗರ ಅತೀ ಹೆಚ್ಚು ಪ್ರೀತಿ ಗಳಿಸಿದ ನಾನು ಭಾಗ್ಯವಂತಳೇ ಸರಿ ಎಂದು ನುಡಿದರು. ಸುಶೀಲಾ ಎಸ್. ದೇವಾಡಿಗ ಸ್ವಾಗತಗೀತೆ ಹಾಡಿದರು. ನಳಿನಾ ಪ್ರಸಾದ್ ಸ್ವಾಗತಿಸಿ ಅತಿಥಿಗಳನ್ನು ಪರಿಚುಸಿ ಕಾರ್ಯಕ್ರಮ ನಿರೂಪಿಸಿದರು. ಸೋಮಶೇಖರ ಮಾಲ್ತಿ ಪಾಟೀಲ್ ವಂದಿಸಿದರು.
ಪೂರ್ಣಿಮ ಅವರ ಕೃತಿ ಕನ್ನಡಿಗರ ಸಿದ್ಧಿ ಸಾಧನೆಗಳ ಎಲ್ಲಾ ವಿಷಯಗಳನ್ನು ಹೊಂದಿದಂತಿದೆ. ಅವರು ಚಿಣ್ಣರ ಬಿಂಬದ ಆಧಾರ ಸ್ತಂಭದಂತಿದ್ದು ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗವೂ ನಮ್ಮ ಚಿಣ್ಣರಿಗೆ ಮಾರ್ಗದರ್ಶಕವಾಗಿದೆ. ನಮ್ಮ ಚಿಣ್ಣರ ವಿಷಯ ಶಕ್ತಿಯೂ ಈ ಕೃತಿಯಲ್ಲಿ ಸೇರಿದೆ.-ಪ್ರಕಾಶ್ ಭಂಡಾರಿ, ಚಿಣ್ಣರ ಬಿಂಬದ ರೂವಾರಿ ಇಷ್ಟೊಂದು ದೊಡ್ಡ ವಿಶಿಷ್ಟ ಕೃತಿ ನಿರ್ಮಾಣ ಸುಲಭವಲ್ಲ. ಸುಮಾರು 512 ಪುಟಗಳ ಪುಸ್ತಕ ಬರೆಯುವುದು ತುಂಬಾ ಕಷ್ಟಕರ. ಇಂತಹ ಮುಂಬಯಿ ಕನ್ನಡಿಗರ ಬದುಕು ಹೊರ ತಂದಿರುವುದು ಪೂರ್ಣಿಮಾರ ಸಾಧನೆ ಅಪೂರ್ವವಾಗಿದೆ. ಅವರ ಸಾಧನೆ ನಿಜಕ್ಕೂ ಅಭಿನಂದನೀಯ.
-ನಿತ್ಯಾನಂದ ಡಿ. ಕೋಟ್ಯಾನ್, ಅಧ್ಯಕ್ಷರು, ಬಿಲ್ಲವರ ಅಸೋಸಿಯೇಶನ್ ಮುಂಬಯಿ ನನ್ನ ಆಪ್ತಮಿತ್ರ ಅಭಿನಂದನ ಗ್ರಂಥದ ಹಿಂದೆ ಡಾ| ಜಿ. ಎನ್. ಉಪಾಧ್ಯ ಮತ್ತು ಪೂರ್ಣಿಮಾ ಅವರ ಶ್ರಮ ಅಪಾರವಾದದ್ದು. ಆಪ್ತಮಿತ್ರ ಕೃತಿಯಿಂದಾಗಿ ಪೂರ್ಣಿಮಾರ ಈ ಕೃತಿ ಪ್ರಕಟವಾಗಲು ತಡವಾಯಿತೋ ಏನೋ. ಮುಂಬಯಿ ಕನ್ನಡಿಗರ ಬದುಕು ಹರಸುವುದು ಸುಲಭ ಸಾಧ್ಯವಲ್ಲ. ಹುಡಿಕಿ, ಬಾಚಿದಷ್ಟು ವಿಸ್ತಾರವಾದ ಕ್ಷೇತ್ರ ಮುಂಬಯಿ ಕನ್ನಡಿಗರದ್ದಾಗಿದೆ. ಅಂತಹ ಸಾಧನೆಗೈದು ಪೂರ್ಣಿಮಾ ಈ ಕೃತಿ ರಚಿಸಿದ್ದು, ಇದು ಸಮಗ್ರ ಮುಂಬಯಿಗರೆಲ್ಲರ ಕೊಡುಗೆಯಾಗಬೇಕು.
-ಚಂದ್ರಶೇಖರ ಪಾಲೆತ್ತಾಡಿ, ಅಧ್ಯಕ್ಷರು, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಚಿತ್ರ-ವರದಿ : ರೋನ್ಸ್ ಬಂಟ್ವಾಳ್