Advertisement

ಮುಂಬಯಿ ವಿವಿ : ಸೀತಾಲಕ್ಷ್ಮೀ ಕರ್ಕಿಕೋಡಿಗೆ ಡಾಕ್ಟರೇಟ್‌ ಪ್ರದಾನ

04:49 PM Feb 05, 2018 | |

ಮುಂಬಯಿ: ಕನ್ನಡ ಸಂಶೋ ಧನೆಯ ದಿಕ್ಕು ಗುರುವಾಗುವ ಬದಲು ಲಘು ವಾಗುತ್ತಿದೆ. ಇದಕ್ಕೆ ಸಂಶೋಧಕರ ಆಸಕ್ತಿ, ಅವಸರದ ತಿಳುವಳಿಕೆಯ ಕೊರತೆ ಮೂಲ ಕಾರಣವಾಗಿರಬಹುದು. ಆದ್ದರಿಂದ ಕನ್ನಡದ ಸಂಶೋಧನೆ ರಂಗ ಎಚ್ಚರವಾಗಬೇಕಾಗಿದೆ. ಆಸಕ್ತಿ ಮತ್ತು ಅನುಭವ ವ್ಯಾಪ್ತಿಯ ಒಳಗಡೆ ಇದ್ದಾಗ ಸಂಶೋಧನೆ ಗುಣಮಟ್ಟ ಪಡೆಯುತ್ತದೆ. ಪ್ರಸ್ತುತ ಮಾರ್ಗದರ್ಶಕರ ಸ್ಥಿತ್ಯಾಂತರದಿಂದ ಸಂಶೋಧನಾ ಕೃತಿಗಳು ಕ್ಷೀಣಿಸುತ್ತಿವೆ. ವಲಯದೊಳಗಡೆ ಸಂಶೋಧನೆಯನ್ನ ವಿಸ್ತರಿಸಿಕೊಂಡಾಗ ಅದಕ್ಕೆ ಆಳ ಸಿಗುತ್ತದೆ. ಸೂಕ್ಷ¾ತೆ ಲಭ್ಯವಾಗುತ್ತದೆ. ಕಳೆದ ಹಲವಾರು ವರ್ಷಗಳಿಂದ ಬರೇ ಮಾಧ್ಯಮ ಕ್ಷೇತ್ರದಲ್ಲೇ ತೊಡಗಿಸಿಕೊಂಡಿರುವ ಸೀತಾಲಕ್ಷಿ¾à  ಅವರ ಈ ಮಹಾಪ್ರಬಂಧ ಪತ್ರಿಕೋದ್ಯಮದ ಸೂಕ್ಷ¾ತೆ, ಒಳನೋಟದಿಂದ ಕೂಡಿದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರನ್ನೂ ಎಚ್ಚರಿಸುವ ಕೆಲಸ ಈ ಪ್ರಬಂಧದಲ್ಲಿದ್ದು, ಸಂಶೋಧ‌ನೆಗೆ ಗುಣಮಟ್ಟವೇ ಮಾಪನವಾಗಿದೆ ಎಂದು ಸೀತಾಲಕ್ಷಿ¾à ಕರ್ಕಿಕೋಡಿ ಸಾಭೀತುಪಡಿಸಿದ್ದಾರೆ ಎಂದು ಮಂಗಳೂರು ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ| ಧನಂಜಯ ಕುಂಬ್ಳೆ ಅವರು ನುಡಿದರು.

Advertisement

ಫೆ. 1 ರಂದು ಪೂರ್ವಾಹ್ನ ಸಾಂತಾಕ್ರೂಜ್‌ ಪೂರ್ವದ ಕಲೀನಾ ಕ್ಯಾಂಪಸ್‌ನ ವಿದ್ಯಾನಗರಿಯ ಜೆಪಿ ನಾಯಕ್‌ ಭವನದಲ್ಲಿ ಮುಂಬಯಿ ವಿವಿ  ಕನ್ನಡ ವಿಭಾಗವು ವಿಭಾಗದ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಸೀತಾಲಕ್ಷಿ¾à ಕರ್ಕಿಕೋಡಿ “ಕನ್ನಡ ಪತ್ರಿಕೋದ್ಯಮ ದಲ್ಲಿ ಸ್ತ್ರೀ ಪರತೆ’ ವಿಷಯದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧ (ಪಿಎಚ್‌ಡಿ) ಪರಿಶೀಲಿಸಿ ಅದರ ದಾಖಲಾಧಾರಿತ ವಿಷಯಗಳ ಮೌಖೀಕ ಮೌಲ್ಯಮಾಪನ ನಡೆಸಿ ಡಾ| ಕುಂಬ್ಳೆ ಮಾತನಾಡಿದರು. ಕ‌ನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅಧ್ಯಕ್ಷತೆ ವಹಿಸಿ  ಮಾತನಾಡಿ, ಕನ್ನಡ ವಿಭಾಗ ಸಂಶೋಧನೆಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಕನ್ನಡದ ಸಾಹಿತ್ಯ ಕ್ಷೇತ್ರ, ಸಂಶೋಧನೆಗೆ ಕೆಲವು ವಿಶ್ವವಿದ್ಯಾಲಯ ದ್ವೀಪವಾಗುತ್ತಿದ್ದರೆ ಮುಂಬಯಿ ವಿವಿ ಕನ್ನಡ ವಿಭಾಗ ವಿಶಾಲಗುತ್ತಿದೆ.  ಸ್ವಾತಂತ್ರÂದ ನಂತರದ ನಮ್ಮ ಬದುಕು ಶೋಷಣೆಯಾಗಿಯೇ ಮುಂದುವರಿದಿದ್ದು ಶೋಚನೀಯ. ಆದರೂ ಪ್ರಜಾಪ್ರಭುತ್ವ ನೆಲೆಗೊಳಿಸುವಲ್ಲಿ ಪತ್ರಿಕೋದ್ಯಮದ ಕೊಡುಗೆ ಅಪಾರವಾಗಿದೆ. ಆದರೆ ಮಾಧ್ಯಮದ ಖರೀದಿ ಆತಂಕವಾಗುತ್ತಿದೆ. ಇದರಿಂದ ಸಾಮಾಜಿಕ ಮನಸ್ಸುಗಳು ಹಳಸುತ್ತಿವೆ. ಇದು ಜನವ್ಯವಸ್ಥೆಯ ನಿಯಂತ್ರಣಕ್ಕೆ  ದುಬಾರಿಯಾಗಬಲ್ಲದು. ಸ್ತ್ರೀಪರ ಸಮಾನತೆ ಜೊತೆಗೆ ಮಾಧ್ಯಮ ಬೆಳೆದಿದ್ದು ಸಾಮಾಜಿಕ ಚಿಂತನೆಗಳ ಬಗ್ಗೆ ಮಾಧ್ಯಮಗಳು ಬದ್ಧತೆ ಮೂಡಿಸಿಕೊಳ್ಳ‌ಬೇಕು ಎಂದು ನುಡಿದರು. ಇದೇ ಸಂದರ್ಭದಲ್ಲಿ ವಿಜಯ ಕರ್ನಾಟಕ ಕನ್ನಡ ದೈನಿಕದ ಮಂಗಳೂರು ಆವೃತ್ತಿಯ ಹಿರಿಯ ಉಪಸಂಪಾದಕಿ ಸೀತಾಲಕ್ಷ್ಮೀ  ಕರ್ಕಿಕೋಡಿ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನಿಸಿ ಶುಭಹಾರೈಸಲಾಯಿತು.

ಪ್ರಸಿದ್ಧ ರಂಗ ನಿರ್ದೇಶಕ, ಸಂಘಟಕ ಸದಾನಂದ ಸುವರ್ಣ ಪ್ರಧಾನ ಅಭ್ಯಾಗತರಾಗಿ ಉಪಸ್ಥಿತರಿದ್ದು ಮಾತನಾಡಿ, ಉದಯೋನ್ಮುಖ ಮತ್ತು ಯುವ ಪತ್ರಕರ್ತರಲ್ಲಿ ಸಾಮಾಜಿಕ ಅರಿವು, ಕಳಕಳಿಯ ಅವಶ್ಯಕತೆಯಿದೆ. ಸದ್ಯದ  ವಿದ್ಯಮಾನಗಳ, ಆಗುಹೋಗುಗಳ ತಿಳುವಳಿಕೆ, ಸಾಮಾಜಿಕ ಹೊಣೆಗಾರಿಕೆ ಪತ್ರಕರ್ತರ ಕರ್ತವ್ಯ ಆಗಬೇಕು. ಇದು ಸೀತಾಲಕ್ಷಿ¾à ಅವರಲ್ಲಿದ್ದು ಆದ್ದರಿಂದಲೇ  ಈ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ ಎಂದ‌ರು.

ವಿಭಾಗದ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ ಪ್ರಸ್ತಾವನೆಗೈದು,  ಸೀತಾಲಕ್ಷ್ಮೀ  ಅವರ  ಬಹು ಆಯಾಮದ ಮಹಾಪ್ರಬಂಧ ಇದಾಗಿದೆ. ಅನೇಕ ಸವಾಲುಗಳನ್ನು ಒಡ್ಡಿದ ಅನುಭವ ಆಕಾರ, ಒಳನೋಟಗಳಿರುವ ಮಹಾ ಪ್ರಬಂಧ. ಅರಿವಿನ ಬಂಡವಾಳ ಬಿಚ್ಚಿಟ್ಟು ಪತ್ರಿಕೋದ್ಯಮದಲ್ಲಿ ಚರ್ಚೆಗಳನ್ನು ಹುಟ್ಟು ಹಾಕಿಸುವ ಪ್ರಯತ್ನ ಪ್ರಬಂಧದಲ್ಲಿದೆ ಎಂದರು. ಪತ್ರಿಕೋದ್ಯಮ ವೃತ್ತಿಯಲ್ಲ. ಅದೊಂದು ಜವಾಬ್ದಾರಿ. ಪತ್ರಿಕೋದ್ಯಮದಲ್ಲಿ ಸ್ತ್ರೀಪರತೆ ಇನ್ನೂ ಬದಲಾಗಬೇಕು. ಕನ್ನಡ ಪತ್ರಿಕೋದ್ಯಮದಲ್ಲಿ ಸ್ತ್ರೀಪರತೆ ಅವಶ್ಯಕವಾಗಿದೆ  ಎಂದ‌ು ಸೀತಾಲಕ್ಷಿ¾à ಕರ್ಕಿಕೋಡಿ ನುಡಿದರು.

ಈ ಸಂದರ್ಭದಲ್ಲಿ ಎಸ್‌. ಕೆ. ಸುಂದರ್‌, ಡಾ| ವಿಶ್ವನಾಥ್‌ ಕಾರ್ನಾಡ್‌, ಎಚ್‌. ಬಿ. ಎಲ್‌. ರಾವ್‌, ಡಾ| ಮಮತಾ ರಾವ್‌, ಶಿವರಾಮ ಎಸ್‌. ಕೋಟ್ಯಾನ್‌, ಜಯಕರ ಡಿ. ಪೂಜಾರಿ, ಕೊಲ್ಯಾರು ರಾಜು ಶೆಟ್ಟಿ, ಡಾ| ಈಶ್ವರ್‌ ಅಲೆವೂರು, ಹರೀಶ್‌ ಜಿ. ಪೂಜಾರಿ ಕೊಕ್ಕರ್ಣೆ, ಜಿ. ಎಸ್‌. ನಾಯಕ್‌, ಸಾ. ದಯಾ, ಗೋಪಾಲ ತ್ರಾಸಿ, ಉದಯ ಶೆೆಟ್ಟಿ, ಶ್ಯಾಮಲಾ ಮಾಧವ್‌, ಗಣಪತಿ ಕೆ. ಮೊಗವೀರ, ಸುಗಂಧಾ ಸತ್ಯಮೂರ್ತಿ, ಡಾ| ಶ್ಯಾಮಲಾ ಪ್ರಕಾಶ್‌, ಶಿವರಾಜ್‌ ಎಂ. ಜಿ. ಕುಮುದಾ ಕೆ. ಆಳ್ವ, ದಿವಾಕರ ಎನ್‌. ಚಂದನ್‌, ಸುರೇಖಾ ಸುಂದರ್‌ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಉಪನ್ಯಾಸಕಿ ಡಾ| ಪೂರ್ಣಿಮಾ ಎಸ್‌. ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿದರು. ವೈ. ಮಧುಸೂದನ ರಾವ್‌ ವಂದಿಸಿದರು. 

Advertisement

ಚಿತ್ರ-ವರದಿ:ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next