ಮುಂಬಯಿ: ನಾವು ಯಾವ ಹಾಲಿವುಡ್ ಸಿನಿಮಾದ ದೃಶ್ಯದ ಬಗ್ಗೆ ಹೇಳುತ್ತಿಲ್ಲ.ವಾಡಿಯಲ್ಲಿ ರೈಲಿನ ಇಂಜಿನೊಂದು ಚಾಲಕನಿಲ್ಲದೆ 13 ಕಿ.ಮೀನಷ್ಟು ಚಲಿಸಿದ್ದು, ಬೈಕ್‌ನಲ್ಲಿ ಬೆನ್ನಟ್ಟಿದ ಸಿಬಂದಿ ಕೊನೆಗೂ ಬ್ರೇಕ್ ಹಾಕುವಲ್ಲಿ ಯಶಸ್ವಿಯಾದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.
ಬುಧವಾರ ಮಧ್ಯಾಹ್ನ 3 ಗಂಟೆಯ ವೇಳೆಗೆ ಈ ಘಟನೆ ನಡೆದಿದ್ದು, ಚೆನ್ನೈ -ಮುಂಬಯಿಯ ರೈಲು ವಾಡಿ ಜಂಕ್ಷನ್‌ಗೆ ಬಂದಿದೆ. ರೈಲಿನ ಎಲೆಕ್ಟ್ರಿಕ್ ಇಂಜಿನನ್ನು ಬದಲಾಯಿಸಿ ಡಿಸೇಲ್ ಇಂಜಿನ್ ಅಳವಡಿಸಲಾಗಿದೆ. ಈ ವೇಳೆ ಎಲೆಕ್ಟ್ರಿಯಲ್ ಇಂಜಿನ್ ಇದ್ದಕ್ಕಿದ್ದಂತೆ ಚಲಿಸಲಾರಂಭಿಸಿದೆ. ಈ ವೇಳೆ ಕೆಳಗಿಳಿದಿದ್ದ ಚಾಲಕ ಕಂಡು ದಿಗಿಲಾಗಿದ್ದಾನೆ.
ರೈಲು ಸಿಬಂದಿಗಳು ಕೂಡಲೆ ಮುಂದಿನ ಕೆಲ ನಿಲ್ದಾಣಗಳ ಸಿಬಂದಿಗಳಿಗೆ ಮಾಹಿತಿ ನೀಡಿ ಸಿಗ್ನಲ್ ಮತ್ತು ಟ್ರ್ಯಾಕ್‌ಗಳನ್ನು ಕ್ಲೀಯರ್ ಮಾಡಿದ್ದಾರೆ.
ಈ ವೇಳೆ ಹಿರೋ ಮಾದರಿಯಲ್ಲಿ ಸಿಬಂದಿಯೊಬ್ಬ ಬೈಕ್ ಏರಿ ಬೆನ್ನಟ್ಟಿದ್ದು 13 ಕಿ.ಮೀ ದೂರ ಕ್ರಮಿಸಿ ರೈಲಿನ ಇಂಜಿನ್‌ನ ಮೇಲೆ ಹಾರಿ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದ್ದಾನೆ.
ಈ ಬಗ್ಗೆ ವಿಶೇಷ ತನಿಖಾ ದಳದ ಮೂಲಕ ತನಿಖೆ ನಡೆಸಲು ರೈಲ್ವೇ ಇಲಾಖೆ ಅಧಿಕಾರಿಗಳು ಆದೇಶ ನೀಡಿದ್ದಾರೆ.