Advertisement
ಸೊಲ್ಲಾಪುರ: ಅಕ್ಕಲ್‌ಕೋಟೆ ಪಟ್ಟಣದ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದ 30ನೇ ವರ್ಧಂತ್ಯುತ್ಸವ ಹಾಗೂ ಶ್ರೀಗುರುಪೂರ್ಣಿಮೆ ಉತ್ಸವವನ್ನು ಜು. 9ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆ ಯಿಂದ ಆಚರಿಸಲಾಯಿತು.
Related Articles
Advertisement
ಮಲಾಡ್ ಪೂರ್ವದ ಭವಾನಿ ಶಂಕರ ಮಂದಿರಮುಂಬಯಿ: ಮಲಾಡ್ ಪೂರ್ವ ದಪ್ತರಿ ರೋಡ್‌ನ ದಿ| ಜನಾರ್ದನ ಭಟ್ ಅವರು ಸ್ಥಾಪಿಸಿರುವ ಶ್ರೀ ಭವಾನಿ ಶಂಕರ ಮಂದಿರದಲ್ಲಿ ಗುರುಪೂರ್ಣಿಮೆ ಆಚರಣೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಧಾರ್ಮಿಕ ಕಾರ್ಯಕ್ರಮವಾಗಿ ಸಂಜೆ ಶ್ರೀ ಸತ್ಯನಾರಾಯಣ ಮಹಾಪೂಜೆಯು ದೇವ
ಸ್ಥಾನದ ಪ್ರಧಾನರಾದ ಪರಮಾನಂದ ಜಿ. ಭಟ್ ದಂಪತಿಯ ಯಜಮಾನಿಕೆ
ಯಲ್ಲಿ ನೆರವೇರಿತು. ರಾತ್ರಿ ಮಹಾಪೂಜೆ ನಡೆದು ಸೇರಿದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. ದೇವಸ್ಥಾನದ ಸಂಧ್ಯಾ ಜನಾರ್ದನ ಭಟ್ ಮತ್ತು ರಮೇಶ್ ಭಟ್, ಪಾಂಡುರಂಗ ಭಟ್ ಹಾಗೂ ಆರ್. ಎಸ್. ಬ್ಯಾಂಕಿನ ಕಾರ್ಯಾಧ್ಯಕ್ಷ ಸದಾನಂದ ನಾಯಕ್ ದಂಪತಿ, ಪೊವಾಯಿ ಡಿ. ಕೆ. ಶೆಟ್ಟಿ ಪರಿವಾರ ಹಾಗೂ ತುಳು-ಕನ್ನಡಿಗರು, ವಿವಿಧ ಕ್ಷೇತ್ರಗಳ ಗಣ್ಯರು, ಸಮಾಜ ಸೇವಕರು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು. ಪುಣೆ ಶ್ರೀ ಗುರುದೇವ ಸೇವಾ ಬಳಗ
ಪುಣೆ: ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಪುಣೆ ಇದರ ವತಿಯಿಂದ ಜು. 9ರಂದು ಗುರು ಪೂರ್ಣಿಮೆ ಆಚರಣೆಯು ಕೇಂದ್ರದ ಅದ್ಯಕ್ಷೆ ಪ್ರೇಮಾ ಎಸ್. ಶೆಟ್ಟಿ ಅವರ ನೇತೃತ್ವದಲ್ಲಿ ಬೀಬೆವಾಡಿಯ ಮಧುಸೂದನ್ ಪಾರ್ಕ್ ನಿವಾಸದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಮೊದಲಿಗೆ ಪ್ರಾರ್ಥನೆಗೈದು ಗುರು ಪೂಜೆಯೊಂದಿಗೆ ಗುರು ಪೂರ್ಣಿಮೆಯು ಪ್ರಾರಂಭ ಗೊಂಡಿತು. ಅನಂತರ ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಸದಸ್ಯೆಯರು ಹಾಗೂ ಬಳಗದ ಸದಸ್ಯರಿಂದ, ಬಳಗದ ಭಜನ ಮಂಡಳಿಯ ಗುರುಗಳಾದ ದಾಮೋದರ ಬಂಗೇರ ಅವರ ಮುಂದಾಳತ್ವದಲ್ಲಿ ಭಜನೆ ನಡೆಯಿತು. ನಂತರ ಮಹಾಮಂಗಳಾರತಿ, ಪ್ರಸಾದ ವಿತರಣೆಯನ್ನು ಆಯೋಜಿಸಲಾಗಿತ್ತು. ಪ್ರೇಮಾ ಸಂಜೀವ ಶೆಟ್ಟಿ ದಂಪತಿ, ಪುಣೆ ಬಳಗದ ಅಧ್ಯಕ್ಷ ಸದಾನಂದ ಕೆ. ಶೆಟ್ಟಿ ಹಾಗು ಸೇರಿದ ಗುರು ಭಕ್ತರೆಲ್ಲರೂ ಗುರುದೇವರ ಫೋಟೋಗೆ ಆರತಿ ಬೆಳಗುವುದರ ಮೂಲಕ ಗುರುವಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪುಣೆ ಬಳಗದ ಅಧ್ಯಕ್ಷ ಸದಾನಂದ ಕೆ. ಶೆಟ್ಟಿ ಅವರು, ನಮ್ಮ ಉತ್ತಮ ಸಂಸ್ಕಾರ, ಸಂಸ್ಕೃತಿಯ ಜೀವನಕ್ಕೆ ಗುರುವೇ ಕಾರಣವಾಗಿದ್ದು. ಬದುಕಿನುದ್ದಕ್ಕೂ ಸತ್ಕರ್ಮಗಳನ್ನು ಮಾಡಲು ನಮಗೆ ಗುರುವಿನ ಉಪದೇಶ, ಪ್ರರಣೆ, ಮಾರ್ಗದರ್ಶನದಿಂದ ಮಾತ್ರ ಸಾಧ್ಯವಾಗಿದೆ. ಪುರಾತನ ಕಾಲದಿಂದಲೂ ಗುರುವಿಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಗುರುವಿನ ಪ್ರೇರಣೆಯಂತೆ ಬಹಳಷ್ಟು ಲೋಕ ಕಲ್ಯಾಣ ಕಾರ್ಯಗಳು ನಡೆದಿವೆ. ಈ ಒಂದು ಪರಂಪರೆ ಇಂದಿನ ದಿನಗಳಲ್ಲೂ ನಾವು ಕಾಣುತ್ತೇವೆ. ನಮ್ಮ ಜೀವನಕ್ಕೆ ಆಯಾಯ ಕಾಲಘಟ್ಟದಲ್ಲಿ ಗುರುವಿನ ಉಪದೇಶ ನಮಗೆ ಸಿಕ್ಕರೆ, ಅದರ ಮೂಲಕ ಸನ್ಮಾರ್ಗದಲ್ಲಿ ನಡೆದಾಗ ನಮ್ಮ ಜೀವನ ಪಾವನವಾಗಲು ಸಾಧ್ಯ. ಇಂದು ನಾವೆಲ್ಲ ಒಂದೇ ಕುಟುಂಬದಂತೆ ಇಲ್ಲಿ ಒಂದಾಗಿ ಸೇರಿ ಗುರು ಪೂರ್ಣಿಮೆಯ ಆಚರಣೆ ಮಾಡಿ ಗುರು ವಂದನೆ ಸಲ್ಲಿಸಿ ಗುರು ಕೃಪೆಗೆ ಪಾತ್ರರಾಗಿದ್ದೇವೆ ಎಂದರು. ಈ ಸಂದರ್ಭದಲ್ಲಿ ಬಳಗದ ಭಜನಾ ಮಂಡಳಿಯ ಗುರು ದಾಮೋದರ ಬಂಗೇರ ಅವರನ್ನು ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಮತ್ತು ಬಳಗದ ವತಿಯಿಂದ ಶಾಲು ಹೊದೆಸಿ, ಫಲಪುಷ್ಪ, ಗುರು ಕಾಣಿಕೆಯನ್ನಿತ್ತು ಸತ್ಕರಿಸಲಾಯಿತು. ಬಳಗದ ಪ್ರಮುಖರಾದ ಉಷಾ ಕುಮಾರ್ ಶೆಟ್ಟಿ, ವಾಸುದೇವ ಶೆಟ್ಟಿ, ಜಗದೀಶ್ ಹೆಗ್ಡೆ, ಪ್ರಮೋದ್ ರಾವುತ್, ಸತೀಶ್ ಶೆಟ್ಟಿ, ವಿಟuಲ್ ಶೆಟ್ಟಿ, ಕೇಂದ್ರದ ಪ್ರಮುಖರಾದ ಜಯಲಕ್ಷ್ಮೀ ಪಿ. ಶೆಟ್ಟಿ, ಶೋಭಾ ಯು. ಶೆಟ್ಟಿ, ವೀಣಾ ಡಿ. ಶೆಟ್ಟಿ, ಸರೋಜಿನಿ ಡಿ. ಬಂಗೇರ, ರಜನಿ ಹೆಗ್ಡೆ, ಲೀಲಾ ಶೆಟ್ಟಿ, ಸುಮನ್ ಎಸ್. ಹೆಗ್ಡೆ, ಜಯಲಕ್ಷ್ಮೀ ವಿ. ಶೆಟ್ಟಿ, ಅಮಿತಾ ಪಿ. ಪೂಜಾರಿ, ಆಶಾ ವಿ. ಶೆಟ್ಟಿ, ಅರ್ಚನಾ ಶೆಟ್ಟಿ, ಶಾರದಾ ಹೆಗ್ಡೆ, ಗೀತಾ ಶೆಟ್ಟಿ, ಸುಮನಾ ಶೆಟ್ಟಿ. ಸುಶೀಲಾ ಮೂಲ್ಯ, ಪ್ರಣೀತಾ ರಾವುತ್ ಹಾಗೂ ಹೆಚ್ಚಿನ ಸಂಖ್ಯೆಯ ಗುರು ಭಕ್ತರು ಉಪಸ್ಥಿತರಿದ್ದರು. ಹರೀಶ್ ಮೂಡಬಿದ್ರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕೊನೆಯಲ್ಲಿ ಲಘು ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮುಂಬಯಿ ಥಾಣೆ: ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಉಪ್ಪಳ ಇದರ ಮುಂಬಯಿ ಸಮಿತಿಯ ವತಿಯಿಂದ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಯಶೋದಾ ಬಟ್ಟಪಾಡಿ ಅವರ ನೇತೃತ್ವದಲ್ಲಿ ಗುರುಪೂರ್ಣಿಮೆಯು ಜು. 8ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಉಪ್ಪಳ ಇದರ ಮುಂಬಯಿ ಸಮಿತಿಯ ಅಧ್ಯಕ್ಷ ಕೃಷ್ಣ ಉಚ್ಚಿಲ್ ಅವರ ಮಾರ್ಗದರ್ಶನದಲ್ಲಿ ಸಂಜೆ 6ರಿಂದ ಭಜನೆ, ಗುರುವಂದನ ಕಾರ್ಯಕ್ರಮ ಜರಗಿತು. ಶೃಂಗರಿಸಿದ ಮಂಟಪದಲ್ಲಿ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರ ಭಾವಚಿತ್ರವನ್ನಿಟ್ಟು ಗುರುಪೂಜೆ ಸಲ್ಲಿಸಲಾಯಿತು. ರಾತ್ರಿ 8ರಿಂದ ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಕೊನೆಯಲ್ಲಿ ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸಮಿತಿಯ ಸದಸ್ಯರು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆ ಯಲ್ಲಿ ಪಾಲ್ಗೊಂಡಿದ್ದರು. ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಉಪ್ಪಳ ಇದರ ಮುಂಬಯಿ ಸಮಿತಿಯ ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ ಮಂಗಲ್ಪಾಡಿ, ಕೋಶಾಧಿಕಾರಿ ಉಷಾ ಶೆಟ್ಟಿ, ಜತೆ ಕೋಶಾಧಿಕಾರಿ ರವಿ ಬತ್ತೇರಿ, ಉಪಾಧ್ಯಕ್ಷ ರಮೇಶ್ ಕೋಟ್ಯಾನ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಗಳ ಸಂದೇಶವನ್ನು ಭಕ್ತರಿಗೆ ತಿಳಿಸಲಾಯಿತು. ಚಕಾಲ ಶ್ರೀ ಪಂಚಮುಖೀ ಗಾಯತ್ರಿ ಮಾತಾ ಮಂದಿರ: ಗುರುಪೂರ್ಣಿಮೆ
ಮುಂಬಯಿ: ಅಂಧೇರಿ ಪೂರ್ವದ ಚಕಾಲದ ತರುಣ್ ಭಾರತ್ ಸೊಸೈಟಿಯ ಬಳಿಯಿರುವ ಶ್ರೀ ಪಂಚಮುಖೀ ಗಾಯತ್ರಿ ಮಾತಾ ಮಂದಿರದಲ್ಲಿ ಗುರುಪೂರ್ಣಿಮೆ ಆಚರಣೆಯು ಜು. 9ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಪೂರ್ವಾಹ್ನ ಭಜನೆ ಬಳಿಕ ಪಂಚಮುಖೀ ಗಾಯತ್ರಿ ಮಾತಾ ದೇವಿಗೆ ಮಹಾಮಂಗಳಾರತಿಯನ್ನು ಸದ್ಗುರು ಶ್ರೀ ಪಂಚಮ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಶರಣಮ್ಮ ಪಂಚಮ ಮಾತೆ ಅವರು ನೆರವೇರಿಸಿದರು. ಬಳಿಕ ಭಕ್ತರಿಂದ ಗುರುವಂದನೆ, ಪಾದಪೂಜೆ ನಡೆಯಿತು. ಈ ಸಂದರ್ಭದಲ್ಲಿ ಮಂದಿರದ ಟ್ರಸ್ಟ್‌ನ ಉಪಾಧ್ಯಕ್ಷರಾದ ರಾಮ ಎಲ್. ಪೂಜಾರಿ, ಹರೀಶ್ ಕೆ. ಶೆಟ್ಟಿ, ಗೌರವ ಕಾರ್ಯದರ್ಶಿ ಅಶೋಕ್ ಎಸ್. ಕರ್ಕೇರ ಬಂಟ್ವಾಳ, ಗೌರವ ಕೋಶಾಧಿಕಾರಿ ವಿಜಯ ಕೆ. ಶೆಟ್ಟಿ, ಜತೆ ಕಾರ್ಯದರ್ಶಿ ಕಯ್ಯೂರುಗುತ್ತು ಪ್ರಕಾಶ್ ಬಿ. ರೈ, ಪೂಜಾ ಸಮಿತಿಯ ಕಾರ್ಯಾಧ್ಯಕ್ಷ ಪ್ರಕಾಶ್ ಬಿ. ರೈ, ಕೋಶಾಧಿಕಾರಿ ಕೃಷ್ಣಾನಂದ ಪೂಜಾರಿ, ಕಾರ್ಯದರ್ಶಿ ಸತೀಶ್ ಪೂಜಾರಿ, ಉಪ ಕಾರ್ಯಾಧ್ಯಕ್ಷ ರವಿ ಪೂಜಾರಿ ಬೆಳುವಾಯಿ, ನಾಗರಾಜ್ ಪಡುಕೋಣೆ, ಇತರ ಪದಾಧಿಕಾರಿಗಳು, ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಉದ್ಯಮಿ ಸಂದೀಪ್ ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಗುರುಪೂರ್ಣಿಮೆ ಪೂಜೆಯಂದು ಅಂಧೇರಿ ಪರಿಸರದ ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ
ಗಾಯತ್ರಿ ಮಾತೆಯ ಮತ್ತು ಪಂಚಮ ಸ್ವಾಮೀಜಿ, ಶರಣಮ್ಮ ಮಾತೆ ಅವರ
ಅನುಗ್ರಹ ಪಡೆದರು. ಭಕ್ತಾದಿಗಳಿಂದ ಭಜನ ಕಾರ್ಯಕ್ರಮ ನಡೆಯಿತು. ಭಕ್ತಾದಿಗಳು, ಪರಿಸರದ ತುಳು-ಕನ್ನಡಿಗರು, ಉದ್ಯಮಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಅನ್ಯಭಾಷಿಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.