Advertisement
ಇತ್ತೀಚೆಗೆ ಉತ್ತರಪ್ರದೇಶದ ಮಥುರಾದಲ್ಲಿ ಬಂಧನಕ್ಕೊಳಗಾದ ಯೋಗೇಶ್ ದೆಹಲಿಯ ಜಿಮ್ ಮಾಲೀಕನ ಹತ್ಯೆ ಆರೋಪಿ. “ಸಿದ್ಧಿಕಿ ವಿರುದ್ಧ ಮುಂಬೈ ಪೊಲೀಸರು ಮಹಾರಾಷ್ಟ್ರ ಸಂಘಟಿತ ಅಪರಾಧ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ದಾವೂದ್ ಜತೆ ಸಂಪರ್ಕ ಇತ್ತು. ಹಾಗಾಗಿ ಕೊಲ್ಲಲಾಯಿತು’ ಎಂದು ಪೊಲೀಸರ ವಿಚಾರಣೆ ವೇಳೆ ಆತ ಮಾಹಿತಿ ನೀಡಿದ್ದಾರೆ.
ಈ ನಡುವೆ, ಶುಕ್ರವಾರ ಬಂಧಿತರಾದ 5 ಆರೋಪಿಗಳು ಸಿದ್ಧಿಕಿ ಹತ್ಯೆಗೆ 50 ಲಕ್ಷ ರೂ. ಬೇಡಿಕೆಯಿಟ್ಟಿದ್ದರು. ಆದರೆ ಹಣದ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ, ಸಿದ್ದಿಕಿಯವರು ರಾಜಕೀಯವಾಗಿ ಪ್ರಭಾವಯುತವಾಗಿದ್ದರಿಂದ ಹಿಂದೆ ಸರಿದಿದ್ದರು. ಬಳಿಕ ಶೂಟರ್‌ಗಳಿಗೆ ವಾಹನ ಮತ್ತಿತರ ವಸ್ತುಗಳ ಪೂರೈಕೆಗೆ ಸಹಾಯ ಮಾಡಲು ಒಪ್ಪಿದ್ದರು ಎನ್ನಲಾಗಿದೆ. ಈ ನಡುವೆ, ತನಿಖೆಯಲ್ಲಿ ಶೂಟರ್ ಒಬ್ಬನ ಸ್ನ್ಯಾಪ್‌ಚಾಟ್ ಖಾತೆಯಲ್ಲಿ ಸಿದ್ಧಿಕಿ ಪುತ್ರ ಝೀಶಾನ್ ಫೋಟೋ ಸಿಕ್ಕಿದೆ. ಸಾಕ್ಷ್ಯಗಳು ಉಳಿಯಬಾರದೆಂದು ಆರೋಪಿಗಳು ಸ್ನ್ಯಾಪ್‌ಚಾಟ್ ಮೂಲಕ ಸಂಪರ್ಕಿಸುತ್ತಿದ್ದರು.