Advertisement

ಮುಂಬಯಿ ಶೇರು 115 ಅಂಕ ಜಿಗಿತ; ನಿಫ್ಟಿ ಸಾರ್ವಕಾಲಿಕ ದಾಖಲೆ

04:55 PM Mar 30, 2017 | udayavani editorial |

ಮುಂಬಯಿ : ಐತಿಹಾಸಿಕ ಜಿಎಸ್‌ಟಿ ಮಸೂದೆಯ ನಾಲ್ಕು ಪೂರಕ ಮಸೂದೆಗಳು ಲೋಕಸಭೆಯಲ್ಲಿ ಪಾಸಾಗಿದ್ದು ಇದೇ ವರ್ಷ ಜುಲೈ 1ರಿಂದ ಜಿಎಸ್‌ಟಿ ಜಾರಿಗೆ ಬರುವುದು ಖಚಿತವೆಂಬ ಆಶಾಭಾವನೆಯಲ್ಲಿ  ಹೊಸ ಭರವಸೆಯನ್ನು ತಳೆದಿರುವ ಮುಂಬಯಿ ಶೇರು ಪೇಟೆ ಇಂದು ನಿರಂತರ ಮೂರನೇ ದಿನವೂ ಮುನ್ನಡೆಯನ್ನು ಕಾಯ್ದುಕೊಂಡು 115.99 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು 29,647.42 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ. 

Advertisement

ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 29.95 ಅಂಕಗಳ ಏರಿಕೆಯೊಂದಿಗೆ ಸಾರ್ವಕಾಲಿಕ ಎತ್ತರದ ಮಟ್ಟವಾಗಿ ದಿನದ ವಹಿವಾಟನ್ನು 9,173.75 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿದೆ. 

ಇಂದಿನ ವಹಿವಾಟಿನಲ್ಲಿ ಅದಾನಿ ಪೋರ್ಟ್‌, ಎಚ್‌ ಡಿ ಎಫ್ ಸಿ ಬ್ಯಾಂಕ್‌, ಈಶರ್‌ ಮೋಟರ್‌, ಭಾರ್ತಿ ಏರ್‌ಟೆಲ್‌, ಇಂಡಸ್‌ಇಂಡ್‌ ಬ್ಯಾಂಕ್‌ ಟಾಪ್‌ ಗೇನರ್‌ ಎನಿಸಿಕೊಂಡವು. ಐಡಿಯಾ ಸೆಲ್ಯುಲರ್‌, ಬಿಎಚ್‌ಇಎಲ್‌, ಒಎನ್‌ಜಿಸಿ, ಕೋಲ್‌ ಇಂಡಿಯಾ, ಟಾಟಾ ಸ್ಟೀಲ್‌ ಟಾಪ್‌ ಲೂಸರ್‌ ಎನಿಸಿಕೊಂಡವು. 

Advertisement

Udayavani is now on Telegram. Click here to join our channel and stay updated with the latest news.

Next