Advertisement

ಎರಡನೇ ದಿನವೂ ಮುನ್ನಡೆದ ಮುಂಬಯಿ ಶೇರು 89 ಅಂಕ ಏರಿಕೆ

05:40 PM Mar 24, 2017 | udayavani editorial |

ಮುಂಬಯಿ: ವಾರಾಂತ್ಯದ ಕೊನೆಯ ದಿನವಾದ ಇಂದು ಶುಕ್ರವಾರದ ವಹಿವಾಟಿನಲ್ಲಿ  ಏಳುಬೀಳುಗಳನ್ನು ಕಾಣುತ್ತಲೇ ಸಾಗಿದ ಮುಂಬಯಿ ಶೇರುಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ದಿನಾಂತ್ಯಕ್ಕೆ 89.24 ಅಂಕಗಳ ಏರಿಕೆಯನ್ನು ದಾಖಲಿಸಿ 29,421.40 ಅಂಕಗಳ ಮಟ್ಟವನ್ನು ತಲುಪಿತು. ಆ ಮೂಲಕ ನಿರಂತರ ಎರಡನೇ ದಿನವೂ ಮುನ್ನಡೆಯನ್ನು ಕಾಯ್ದುಕೊಂಡಿತು. 

Advertisement

ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 21.70 ಅಂಕಗಳ ಏರಿಕೆಯನ್ನು ಕಂಡು 9,108 ಅಂಕಗಳ ಮಟ್ಟವನ್ನು ತಲುಪಿತು.

ಇಂದಿನ ವಹಿವಾಟಿನಲ್ಲಿ 1,345 ಶೇರುಗಳು ಮುನ್ನಡೆ ಸಾಧಿಸಿದರೆ 1,474 ಶೇರುಗಳು ಹಿನ್ನಡೆಗೆ ಗುರಿಯಾದವು. 217 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ. 

ಇಂದಿನ  ಟಾಪ್‌ ಗೇನರ್‌ಗಳು : ಬ್ಯಾಂಕ್‌ ಆಫ್ ಇಂಡಿಯಾ, ಎಸ್‌ಬಿಐ, ಐಸಿಐಸಿಐ ಬ್ಯಾಂಕ್‌, ಕೋಟಕ್‌ ಮಹೀಂದ್ರ, ಐಟಿಸಿ. ಟಾಪ್‌ ಲೂಸರ್‌ಗಳು : ಗ್ರಾಸಿಂ, ಟೆಕ್‌ ಮಹೀಂದ್ರ, ಟಿಸಿಎಸ್‌, ಅಂಬುಜಾ ಸಿಮೆಂಟ್‌, ಭಾರ್ತಿ ಇನ್‌ಫ್ರಾಟೆಲ್‌.

Advertisement

Udayavani is now on Telegram. Click here to join our channel and stay updated with the latest news.

Next