ಮುಂಬಯಿ : ಏಶ್ಯನ್ ಮಾರುಕಟ್ಟೆಗಳಲ್ಲಿ ಸ್ಥಿರತೆಯ ಪ್ರವೃತ್ತಿ ತೋರಿಬಂದುದನ್ನು ಅನುಸರಿಸಿ ಹೂಡಿಕೆದಾರರು ಮತ್ತು ವಹಿವಾಟುದಾರರು ಬ್ಲೂ ಚಿಪ್ ಶೇರುಗಳ ಖರೀದಿಯಲ್ಲಿ ಆಸಕ್ತಿ ತೋರಿದ ಪರಿಣಾಮವಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 147 ಅಂಕಗಳ ಉತ್ತಮ ಮುನ್ನಡೆಯನ್ನು ಪಡೆಯಿತು.
ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 127.27 ಅಂಕಗಳ ಏರಿಕೆಯೊಂದಿಗೆ 29,294.95 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 39.25 ಅಂಕಗಳ ಮುನ್ನಡೆಯೊಂದಿಗೆ 9,069.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿತ್ತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಅತೀ ಹೆಚ್ಚು ಕ್ರಿಯಾಶೀಲವಾಗಿದ್ದ ಶೇರುಗಳೆಂದರೆ ಎಕ್ಸಿಸ್ ಬ್ಯಾಂಕ್, ರಿಲಯನ್ಸ್, ಟಾಟಾ ಮೋಟರ್, ಐಟಿಸಿ ಮತ್ತು ಬಿಪಿಸಿಎಲ್.
ಟಾಪ್ ಗೇನರ್‌ಗಳು : ಬಿಪಿಸಿಎಲ್, ಗೇಲ್, ಟಾಟಾ ಮೋಟರ್, ಲಾರ್ಸನ್, ಎನ್‌ಟಿಪಿಸಿ.
ಟಾಪ್ ಲೂಸರ್‌ಗಳು : ಈಶರ್ ಮೋಟರ್, ಐಟಿಸಿ, ಬಾಶ್, ಅಂಬುಜಾ ಸಿಮೆಂಟ್, ಎಚ್‌ಯುಎಲ್.
ಕಳೆದ ಮೂರು ದಿನಗಳಿಂದ ನಿರಂತರ ಜಾರು ಹಾದಿಯಲ್ಲಿ ಸಾಗುತ್ತಿದ್ದ ಸೆನ್ಸೆಕ್ಸ್ ಮತ್ತು ನಿಫ್ಟಿ ಇಂದು ಗುರುವಾರ ಏರು ಹಾದಿ ಹಿಡಿದಿರುವುದು ಶೇರು ಪೇಟೆಯಲ್ಲಿ ಹೊಸ ಹುಮ್ಮಸ್ಸನ್ನು ತುಂಬಿದೆ.