Advertisement

ನಿರಂತರ ಐದನೇ ದಿನದ ಮುನ್ನಡೆ ಮುಂಬಯಿ ಶೇರು 103 ಅಂಕ ಏರಿಕೆ

05:33 PM Feb 22, 2017 | |

ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಧನಾತ್ಮಕ ಪ್ರವೃತ್ತಿ ಕಂಡು ಬಂದಿರುವುದು ಹಾಗೂ ರಿಲಯನ್ಸ್‌ ಇಂಡಸ್ಟ್ರೀಸ್‌ ಶೇರು ಮುನ್ನಡೆಯಲ್ಲಿ ಸಾಗಿರುವುದನ್ನು ಅನುಸರಿಸಿ, ನಿರಂತರ ಐದನೇ ದಿನದ ಮುನ್ನಡೆಯಾಗಿ, ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬುಧವಾರ 103.12 ಅಂಕಗಳ ಏರಿಕೆಯನ್ನು ಸಾಧಿಸಿ ದಿನದ ವಹಿವಾಟನ್ನು 28,864.71 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 19.05 ಅಂಕಗಳ ಮುನ್ನಡೆಯನ್ನು ದಾಖಲಿಸಿ ದಿನದ ವಹಿವಾಟನ್ನು 8,926.90 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ದಿನದ ವಹಿವಾಟಿನ ನಡುವೆ ರಿಲಯನ್ಸ್‌ ಶೇರು ಎಂಟು ವರ್ಷಗಳ ಗರಿಷ್ಠ ಮಟ್ಟದ ಎತ್ತರವನ್ನು ದಾಟಿ ಮುನ್ನಡೆದಿರುವುದು ಇಂದಿನ ಪ್ರಮುಖ ವಿದ್ಯಮಾನವೆನಿಸಿತು. ಆದರೆ ಐಟಿ, ಬ್ಯಾಂಕ್‌ ಮತ್ತು ಮೆಟಲ್‌ ರಂಗದ ಶೇರುಗಳು ಹಿನ್ನಡೆಗೆ ಗುರಿಯಾದವು.

ಬಿಎಸ್‌ಇ ಮಿಡ್‌ ಕ್ಯಾಪ್‌ ಮತ್ತು ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ಇಂದು ಶೇಕಡಾ 0.58ರಷ್ಟು ಕುಸಿದವು. 

Advertisement

Udayavani is now on Telegram. Click here to join our channel and stay updated with the latest news.

Next