ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಹಾಗೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ, ಇಂದು ಬುಧವಾರದ ವಹಿವಾಟನ್ನು ಹೊಸ ದಾಖಲೆಯ ಎತ್ತರದಲ್ಲಿ ಕೊನೆಗೊಳಿಸಿವೆ.
ದಿನಾಂತ್ಯದಲ್ಲಿ ಸೆನ್ಸೆಕ್ಸ್ 64.02 ಅಂಕಗಳ ಏರಿಕೆಯೊಂದಿಗೆ ಹೊಸ ದಾಖಲೆಯ ಎತ್ತರವಾಗಿ 29,974.24 ಅಂಕಗಳ ಮಟ್ಟಕ್ಕೆ ತಲುಪಿತಾದರೂ 30,000 ಅಂಕಗಳ ಮನೋಪ್ರಾಬಲ್ಯದ ಮಟ್ಟವನ್ನು ಮೀರುವಲ್ಲಿ ವಿಫಲವಾಗಿ ನಿರಾಶೆ ಉಂಟುಮಾಡಿತ್ತು. ಹಾಗಿದ್ದರೂ ಸೆನ್ಸೆಕ್ಸ್ ಇಂದಿನ ಆರಂಭಿಕ ವಹಿವಾಟಿನಲ್ಲಿ ಒಂದು ಹಂತದಲ್ಲಿ 30,000 ಅಂಕಗಳ ಗಡಿಯನ್ನು ದಾಟಿತ್ತು.
ನಿಫ್ಟಿ ಸೂಚ್ಯಂಕ ಇಂದಿನ ವಹಿವಾಟನ್ನು 27.30 ಅಂಕಗಳ ಏರಿಕೆಯೊಂದಿಗೆ ಹೊಸ ದಾಖಲೆಯ ಎತ್ತರವಾಗಿ 9,265.15 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ ಶೇರು ಮಾರುಕಟ್ಟೆ ಹೊಸ ಎತ್ತರ ಕಾಣಲು ರಿಲಯನ್ಸ್ ಹಾಗೂ ಲಾರ್ಸನ್ ಶೇರುಗಳೇ ಕಾರಣವಾದವು.
ಇಂದಿನ ವಹಿವಾಟಿನಲ್ಲಿ 1,998 ಶೇರುಗಳು ಮುನ್ನಡೆ ಸಾಧಿಸಿದವು; 932 ಶೇರುಗಳು ಹಿನ್ನಡೆಗೆ ಗುರಿಯಾದವು; 142 ಶೇರುಗಳು ಇದ್ದಲ್ಲೇ ಉಳಿದವು.