ಮುಂಬಯಿ : ನಿರಂತರ ಎರಡನೇ ದಿನವೂ ನಷ್ಟದ ಹಾದಿಯಲ್ಲಿ ಸಾಗಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 69.56 ಅಂಕಗಳ ನಷ್ಟದೊಂದಿಗೆ 28,743.32 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಪ್ಟಿ ಸೂಚ್ಯಂಕ 17.10 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 8,879.60 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಜಿಡಿಪಿ ಅಂಕಿ ಅಂಶಗಳು ಇಂದು ಪ್ರಕಟಗೊಳ್ಳಲಿದ್ದು ಅದಕ್ಕೆ ಮೊದಲೇ ಸೆನ್ಸೆಕ್ಸ್, ನಿಫ್ಟಿ ಜಾರು ಹಾದಿಯನ್ನು ಹಿಡಿದಿರುವುದು ನಿರಾಶೆಯ ಸಂಕೇತವೆಂದು ತಿಳಿಯಲಾಗಿದೆ.
ಇಂದಿನ ವಹಿವಾಟಿನಲ್ಲಿ ಬಿಎಚ್‌ಇಎಲ್ ಶೇರು ಶೇ.6ರಷ್ಟು ಏರುವ ಮೂಲಕ ಅಚ್ಚರಿ ಉಂಟುಮಾಡಿತು. ಇದನ್ನು ಅನುಸರಿಸಿ ಭಾರ್ತಿ ಏರ್‌ಟೆಲ್, ಏಶ್ಯನ್ ಪೇಂಟ್ಸ್, ಅದಾನಿ ಪೋರ್ಟ್, ಮಹೀಂದ್ರ, ಎಸ್ ಬ್ಯಾಂಕ್ ಮತ್ತು ಹಿಂಡಾಲ್ಕೊ ಶೇರುಗಳು ಕೂಡ ಏರುಮುಖವಾದವು.
ಆದರೆ ಇದೇ ವೇಲೆ ಬಿಪಿಸಿಎಲ್, ಗ್ರಾಸಿಂ, ಕೋಲ್ ಇಂಡಿಯಾ, ಟೆಕ್ ಮಹೀಂದ್ರ, ಬಜಾಜ್ ಆಟೋ, ಎನ್‌ಟಿಪಿಸಿ, ಹೀರೋ ಮೋಟೋ ಕಾರ್ಪ್ ಮತ್ತು ಐಟಿಸಿ ಶೇರುಗಳು ಶೇ.1ರಿಂದ ಶೇ.5ರಷ್ಟು ಇಳಿದವು.