ಮುಂಬಯಿ : ಮುಂಬಯಿ ಶೇರು ಪೇಟೆ ಇಂದು ಶುಕ್ರವಾರ ನಿರಂತರ ಎರಡನೇ ದಿನವೂ ಕುಸಿತವನ್ನು ಕಂಡಿತು. ದಿನಾಂತ್ಯಕ್ಕೆ ಸೆನ್ಸೆಕ್ಸ್ ಸೂಚ್ಯಂಕ 111.34 ಅಂಕಗಳ ನಷ್ಟಕ್ಕೆ ಗುರಿಯಾಗಿ 29,918.40 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 38.10 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 9,304.05 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದು ಎಫ್ಎಂಸಿಜಿ, ಟೆಕ್ನಾಲಜಿ, ಇನ್‌ಫ್ರಾ ಮತ್ತು ಎಚ್ ಡಿ ಎಫ್ ಸಿ ಸಮೂಹದ ಶೇರುಗಳು ಲಾಭ ನಗದೀಕರಣದ ಫಲವಾಗಿ ಹಿನ್ನಡೆಗೆ ಗುರಿಯಾದವು. ಅಂತೆಯೇ ಸೆನ್ಸೆಕ್ಸ್ ಸೂಚ್ಯಂಕವನ್ನು ಹಿಂದಕ್ಕೆ ಎಳೆದವು.
ಇಂದಿನ ವಹಿವಾಟಿನಲ್ಲಿ ಹೆಚ್ಚು ಕ್ರಿಯಾಶೀಲವಾಗಿದ್ದ ಶೇರುಗಳೆಂದರೆ ಮಾರುತಿ ಸುಜುಕಿ, ಎಕ್ಸಿಸ್ ಬ್ಯಾಂಕ್, ಎಚ್ ಡಿ ಎಫ್ ಸಿ, ಎಸ್‌ಬಿಐ, ರಿಲಯನ್ಸ್.
ಟಾಪ್ ಗೇನರ್‌ಗಳು : ಒಎನ್‌ಜಿಸಿ, ಬ್ಯಾಂಕ್ ಆಫ್ ಬರೋಡ, ಎಸ್‌ಬಿಐ, ಮಾರುತಿ ಸುಜುಕಿ, ಹಿಂಡಾಲ್ಕೊ. ಟಾಪ್ ಲೂಸರ್‌ಗಳು : ಭಾರ್ತಿ ಇನ್‌ಫ್ರಾಟೆಲ್, ಐಟಿಸಿ, ಬಿಪಿಸಿಎಲ್, ಟೆಕ್ ಮಹೀಂದ್ರ ಮತ್ತು ಎಚ್ ಡಿ ಎಫ್ ಸಿ.