ಮುಂಬಯಿ : ಜಾಗತಿಕ ಮಾರುಕಟ್ಟೆಗಳಲ್ಲಿನ ದೌರ್ಬಲ್ಯ, ದೇಶೀಯ ಮಾರುಕಟ್ಟೆಯಲ್ಲಿನ ಲಾಭ ನಗದೀಕರಣ ಮುಂತಾದ ಕಾರಣಗಳಿಗೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 317.70 ಅಂಕಗಳ ನಷ್ಟದೊಂದಿಗೆ 29,167.60 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 91 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 9,030.45 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇಂದು ವ್ಯವಹಾರಕ್ಕೆ ಒಳಪಟ್ಟ ಶೇರುಗಳ ಪೈಕಿ 990 ಶೇರುಗಳು ಮುನ್ನಡೆಯನ್ನು ಕಂಡರೆ, 1,822 ಶೇರುಗಳು ಹಿನ್ನಡೆಗೆ ಗುರಿಯಾದವು. 194 ಶೇರುಗಳು ಯಾವುದೇ ಬದಲಾವಣೆಯನ್ನು ಕಾಣಲಿಲ್ಲ.
ಲೂಪಿನ್, ಸಿಪ್ಲಾ ಮುಂತಾಗಿ ಕೆಲವು ಫಾರ್ಮಾ ಶೇರುಗಳು ಉತ್ತಮ ಧಾರಣೆಯನ್ನು ಕಂಡರೆ ಭಾರ್ತಿ ಏರ್‌ಟೆಲ್ ಶೇರು ಶೇ.3ಕ್ಕಿಂತಲೂ ಹೆಚ್ಚು ಕುಸಿತವನ್ನು ಕಂಡಿತು.
ಇಂದು ಅತೀ ಹೆಚ್ಚು ಸಕ್ರಿಯವಾಗಿದ್ದ ಶೇರುಗಳೆಂದರೆ ಕೋಟಕ್ ಮಹೀಂದ್ರ, ಎಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ರಿಲಯನ್ಸ್, ಐಡಿಯಾ ಸೆಲ್ಯುಲರ್.
ಇಂದಿನ ನಿಫ್ಟಿ ಟಾಪ್ ಗೇನರ್‌ಗಳು : ಎಚ್‌ಸಿಎಲ್ ಟೆಕ್, ಲೂಪಿನ್, ಸಿಪ್ಲಾ, ಸನ್ ಫಾರ್ಮಾ, ಬಿಪಿಸಿಎಲ್. ಟಾಪ್ ಲೂಸರ್‌ಗಳು : ಭಾರ್ತಿ ಏರ್‌ಟೆಲ್, ಟಾಟಾ ಮೋಟರ್, ಐಟಿಸಿ, ಐಸಿಐಸಿಐ ಬ್ಯಾಂಕ್ ಮತ್ತು ಹಿಂಡಾಲ್ಕೊ.