ಮುಂಬಯಿ : ಇನ್‌ಫೋಸಿಸ್ ಕುಸಿತಕ್ಕೆ ಸಾಕ್ಷಿಯಾದ ಇಂದಿನ ಗುರುವಾರದ ವಹಿವಾಟನ್ನು ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ 182.03 ಅಂಕಗಳ ನಷ್ಟದೊಂದಿಗೆ 29,461.45 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 52.65 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 9,150.80 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಇನ್‌ಫೋಸಿಸ್, ಟಾಟಾ ಸ್ಟೀಲ್ ಮತ್ತು ಹಿಂಡಾಲ್ಕೋ ಶೇರುಗಳು ಟಾಪ್ ಲೂಸರ್ ಎನಿಸಿಕೊಂಡವು. ಅದೇ ವೇಳೆ ಸನ್ ಫಾರ್ಮಾ, ರಿಲಯನ್ಸ್, ಐಓಸಿ ಮತ್ತು ಇಂಡಿಯಾ ಬುಲ್ಸ್ ಹೌಸಿಂಗ್ ಶೇರುಗಳು ಟಾಪ್ ಗೇನರ್ ಎನಿಸಿಕೊಂಡವು.
ಇಂದಿನ ವಹಿವಾಟಿನಲ್ಲಿ 1,456 ಶೇರುಗಳು ಮುನ್ನಡೆ ಸಾಧಿಸಿದರೆ 1,436 ಶೇರುಗಳು ಹಿನ್ನಡೆಗೆ ಗುರಿಯಾದವು. 151 ಶೇರುಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ.
ಇನ್‌ಫೋಸಿಸ್ ಜತೆಗೆ ಟಾಟಾ ಮೋಟರ್, ಲಾರ್ಸನ್, ಐಟಿಸಿ ಮತ್ತು ಟಿಸಿಎಸ್ ಶೇರುಗಳು ಶೇ.1ರಿಂದ ಶೇ.4ರ ಪ್ರಮಾಣದಲ್ಲಿ ಕುಸಿದವು. ಆದರೆ ರಿಲಯನ್ಸ್ ಮತ್ತು ಕೆಲವು ಆಯ್ದ ಬ್ಯಾಂಕಿಂಗ್ ಮತ್ತು ಹಣಕಾಸು ರಂಗದ ಶೇರುಗಳಿಗೆ ಉತ್ತಮ ಮಾರುಕಟ್ಟೆ ಬೆಂಬಲ ದೊರಕಿತು.