ಮುಂಬಯಿ : ನಾಳೆ ಗುರುವಾರ ಐಟಿ ದಿಗ್ಗಜ ಇನ್‌ಫೋಸಿಸ್ ಕಂಪೆನಿಯ ತ್ತೈಮಾಸಿಕ ಹಾಗೂ ವಾರ್ಷಿಕ ಫಲಿತಾಂಶ ಪ್ರಕಟಗೊಳ್ಳಲಿದ್ದು ಅದಕ್ಕೆ ಮುನ್ನವೇ ಹೂಡಿಕೆದಾರರು ಮತ್ತು ವಹಿವಾಟುದಾರರು, ಈಚಿನ ಮುನ್ನಡೆಗಳ ಲಾಭವನ್ನು ನಗದೀಕರಿಸಲು ಮುಂದಾದ ಪ್ರಯುಕ್ತ ಇಂದು ಬುಧವಾರದ ವಹಿವಾಟನ್ನು ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ 144.87 ಅಂಕಗಳ ನಷ್ಟಕ್ಕೆ ಗುರಿಯಾಗಿ 29,643.48 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 33.55 ಅಂಕಗಳ ನಷ್ಟವನ್ನು ಅನುಭವಿಸಿ ದಿನದ ವಹಿವಾಟನ್ನು 9,203.45 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನ ಕೊನೇ ವೇಳೆಯಲ್ಲಿ ಹೆಲ್ತ್ ಕೇರ್ ಶೇರುಗಳು ಉತ್ತಮ ಏರಿಕೆ ಕಂಡ ಫಲವಾಗಿ ನಿಫ್ಟಿ 9,200 ಅಂಕಗಳ ಮನೋಪ್ರಾಬಲ್ಯದ ಮಟ್ಟವನ್ನು ಕಾಯ್ದುಕೊಂಡಿತು.
ಇಂದು ತಡರಾತ್ರಿ ಕಾರ್ಖಾನೆ ಮತ್ತು ಚಿಲ್ಲರೆ ಹಣದುಬ್ಬರ ಅಂಕಿ ಅಂಶಗಳು ಹೊರಬೀಳಲಿರುವುದು ಕೂಡ ಹೂಡಿಕೆದಾರರದಲ್ಲಿ ಎಚ್ಚರ ಕಾಯ್ದುಕೊಳ್ಳುವುದಕ್ಕೆ ಕಾರಣವಾಗಿತ್ತು.
ನಿಫ್ಟಿ ಶೇರು ಮಾರಕಟ್ಟೆಯಲ್ಲಿನ ಇಂದಿನ ಟಾಪ್ ಗೇನರ್‌ಗಳು : ಭಾರ್ತಿ ಏರ್‌ಟೆಲ್, ಬಾಶ್, ಈಶರ್ ಮೋಟರ್, ಸನ್ ಫಾರ್ಮಾ. ಟಾಪ್ ಲೂಸರ್‌ಗಳು : ಟಾಟಾ ಸ್ಟೀಲ್, ಅದಾನಿ ಪೋರ್ಟ್, ವಿಪ್ರೋ, ಝೀ ಎಂಟರ್‌ಟೇನ್‌ಮೆಂಟ್ ಮತ್ತು ಎಕ್ಸಿಸ್ ಬ್ಯಾಂಕ್.