ಮುಂಬೈ:ಮಾರಕ ಕೊರೊನಾ ವೈರಸ್ ಭೀತಿ ಮುಂದುವರಿದಿರುವ ನಡುವೆಯೇ
ಮುಂಬೈ ಶೇರುಮಾರುಕಟ್ಟೆ ವಹಿವಾಟು ಸೋಮವಾರವೂ ಕೂಡಾ ಭರ್ಜರಿ ಕುಸಿತ ಕಾಣುವ ಮೂಲಕ ಹೂಡಿಕೆದಾರರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಇಂದು
ಶೇರುಪೇಟೆಯ ವಹಿವಾಟು ಆರಂಭಗೊಳ್ಳುತ್ತಿದ್ದಂತೆಯೇ ಸೆನ್ಸೆಕ್ಸ್ ಹಾಗೂ ನಿಫ್ಟಿ ಭಾರೀ ಪ್ರಮಾಣದ ಕುಸಿತ ಕಂಡಿದೆ. ಮುಂಬೈ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 2,112 ಅಂಕಗಳಷ್ಟು ಕುಸಿತ ದಾಖಲಿಸಿದ್ದು, 31,990.92 ಅಂಕಗಳ ವಹಿವಾಟಿಗೆ ಸಾಕ್ಷಿಯಾಗಿದೆ.
ರಾಷ್ಟ್ರೀಯ ಶೇರುಮಾರುಕಟ್ಟೆ ನಿಫ್ಟಿ ಸೂಚ್ಯಂಕ 600 ಅಂಕಗಳೊಂದಿಗೆ 9,500 ಅಂಕಗಳಿಗೆ ಕುಸಿತ ಕಂಡಿದೆ ಎಂದು ವರದಿ ತಿಳಿಸಿದೆ.
ಕೋವಿಡ್ 19 ವೈರಸ್ ಜಾಗತಿಕವಾಗಿ ವಾಣಿಜ್ಯ ನಗರಿಗಳಲ್ಲಿ ಹಬ್ಬಿರುವ ಪರಿಣಾಮ ಆರ್ಥಿಕವಾಗಿ ಹೊಡೆತ ಬಿದ್ದಿದ್ದು, ಇದರಿಂದಾಗಿ ಶೇರು ವಹಿವಾಟು ಕುಸಿತ ಕಂಡಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊರೊನಾ ವೈರಸ್ ಸೋಂಕಿತರ ಹಾಗೂ ಸಾವಿನ ಸಂಖ್ಯೆ ಇಳಿಮುಖವಾದ ನಂತರವೇ ಶೇರುಪೇಟೆ ವಹಿವಾಟು ಯಥಾಸ್ಥಿತಿಗೆ ಬರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.