ಮುಂಬಯಿ: ಬಾಂಬೆ ಷೇರು ಪೇಟೆಯಲ್ಲಿ ಸಂವೇದಿ ಸೂಚ್ಯಂಕ ವಾರಾಂತ್ಯ ದಿನವಾಗಿರುವ ಶುಕ್ರವಾರ 746 ಪಾಯಿಂಟ್ಸ್‌ಗಳಷ್ಟು ಪತನಗೊಂಡಿದೆ. ಹೀಗಾಗಿ ಐವತ್ತು ಸಾವಿರಕ್ಕೆ ಏರಿ ಮರೆ ಯಾಗಿದ್ದ ಸೂಚ್ಯಂಕ ಸಂತೋಷ ಮತ್ತೆ ಕಾಣಲಿಲ್ಲ. ದಿನಾಂತ್ಯಕ್ಕೆ ಸೂಚ್ಯಂಕ 48,878.54ರಲ್ಲಿ ಮುಕ್ತಾಯವಾಗಿದೆ. ಹೀಗಾಗಿ ಒಂದು ತಿಂಗಳ ಗರಿಷ್ಠ ಕುಸಿತವನ್ನೂ ಸೂಚ್ಯಂಕ ಕಂಡಂತಾಗಿದೆ. 2020ರ ಡಿ.21ರಂದು ಶೇ.3ರಷ್ಟು ಸೂಚ್ಯಂಕ ಪತನವಾಗಿತ್ತು.
ಆ್ಯಕ್ಸಿಸ್ ಬ್ಯಾಂಕ್‌ಗೆ ಹೆಚ್ಚು ನಷ್ಟ ಹೊಂದಿ ದ್ದರೆ, ಏಷ್ಯನ್ ಪೇಂಟ್ಸ್, ಎಸ್‌ಬಿಐ, ಇಂಡಸ್‌ಇಂಡ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ನಷ್ಟ ಹೊಂದಿದ ಇತರ ಪ್ರಮುಖ ಕಂಪೆನಿಗಳು. ಬಜಾಜ್ ಅಟೋ, ಹಿಂದುಸ್ತಾನ್ ಯುನಿಲಿವರ್, ಅಲ್ಟ್ರಾಟೆಕ್ ಸಿಮೆಂಟ್, ಟಿಸಿಎಸ್ ಷೇರುಗಳು ಲಾಭ ಪಡೆದುಕೊಂಡವು. ನಿಫ್ಟಿ ಸೂಚ್ಯಂಕ 218.45 ಪಾಯಿಂಟ್ಸ್ ಕುಸಿದು, 14, 371.90ರಲ್ಲಿ ಮುಕ್ತಾಯವಾಯಿತು.
ರೂಪಾಯಿ ದೃಢ: ಅಮೆರಿಕದ ಡಾಲರ್ ಎದುರು ರೂಪಾಯಿ 2 ಪೈಸೆಯಷ್ಟು ಅಲ್ಪ ಲಾಭ ಪಡೆದುಕೊಂಡಿದೆ. ಅದಕ್ಕೆ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕೊಂಚ ಇಳಿಕೆಯಾದದ್ದೂ ಕಾರಣವಾಗಿದೆ. ದಿನದ ಅಂತ್ಯಕ್ಕೆ ಡಾಲರ್ ಎದುರು 72.97 ರೂ.ನಲ್ಲಿ ಮುಕ್ತಾಯವಾಯಿತು.
ಕುಸಿತಕ್ಕೆ ಕಾರಣಗಳು ;
ಯು.ಕೆ., ಐರೋಪ್ಯ ಒಕ್ಕೂಟದಲ್ಲಿನ ಕೊರೊನಾಕ್ಕೆ ಸಂಬಂಧಿಸಿ ಹೊಸ ನಿಬಂಧನೆ ಹೇರಿಕೆ. ಹೀಗಾಗಿ ಅಲ್ಲಿನ ವಹಿವಾಟುಗಳ ಮೇಲೆ ಪ್ರತಿಕೂಲ ಛಾಯೆ.ಕೇಂದ್ರ ಬಜೆಟ್‌ನಲ್ಲಿ ಕೈಗೊಳ್ಳಬಹುದಾದ ನಿರ್ಧಾರಗಳು, ಅಮೆರಿಕ ಸರಕಾರದ ಮುಂದಿನ ಘೋಷಣೆಗಳು. ಒಂದು ವೇಳೆ ಅಮೆರಿಕದಲ್ಲಿ ಕಠಿನ ನಿಲುವು ಪ್ರದರ್ಶನಗೊಂಡರೆ ಎಂಬ ಅಳುಕು ಷೇರು ಪೇಟೆ ಮೇಲೆ ಬಿದ್ದಿದೆ.