Advertisement

ಮುಂಬಯಿ ಸೀರಿಯಲ್‌ ಬ್ಲಾಸ್ಟ್‌ ಅಪರಾಧಿ ದೊಸ್ಸಾ ಆಸ್ಪತ್ರೆಗೆ ದಾಖಲು

11:29 AM Jun 28, 2017 | udayavani editorial |

ಮುಂಬಯಿ : 1993ರ ಮಾರ್ಚ್‌ 12ರಂದು 257 ಅಮಾಯಕ ಜನರ ಸಾವಿಗೆ ಕಾರಣವಾಗಿದ್ದ ಮುಂಬಯಿ ಸೀರಿಯಲ್‌ ಬ್ಲಾಸ್ಟ್‌ ಪ್ರಕರಣದಲ್ಲಿ ಅಪರಾಧಿ ಎಂದು ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮುಸ್ತಫಾ ದೊಸ್ಸಾ  ತೀವ್ರ ಎದೆ ನೋವೆಂದು ಹೇಳಿಕೊಂಡಿರುವ ಕಾರಣ ಆತನನ್ನು ಇಂದು ಬುಧವಾರ ಇಲ್ಲಿನ ಜೆ ಜೆ ಆಸ್ಪತ್ರೆಗೆ ಸೇರಿಸಲಾಗಿದೆ. 

Advertisement

ದೊಸ್ಸಾನನ್ನು ಇಂದು ನಸುಕಿನ 3 ಗಂಟೆಯ ವೇಳೆಗೆ ಆಸ್ಪತ್ರೆಯ ಜೈಲ್‌ ವಾರ್ಡ್‌ಗೆ ಸೇರಿಸಲಾಯಿತು ಎಂದು ಆಸ್ಪತ್ರೆಯ ಡೀನ್‌ ಟಿ ಪಿ ಲಹಾಣೆ ತಿಳಿಸಿದ್ದಾರೆ. 

ಆರ್ಥರ್‌ ರೋಡ್‌ ಜೈಲಿನಲ್ಲಿ ಇಡಲಾಗಿರುವ ದೊಸ್ಸಾ ಅನಿಯಂತ್ರಿತ ರಕ್ತದ ಒತ್ತಡ, ಮಧುಮೇಹ ಹಾಗೂ ಸೋಂಕು ಇರುವ ತನಗೆ ತೀವ್ರ ಎದೆನೋವು ಬರುತ್ತಿದೆ ಎಂದು ಜೈಲು ಅಧಿಕಾರಿಗಳಲ್ಲಿ ದೂರಿದ್ದ. 

Advertisement

Udayavani is now on Telegram. Click here to join our channel and stay updated with the latest news.

Next