ಮುಂಬೈ:ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಮುಂಬೈ ಸ್ಫೋಟ ಪ್ರಕರಣದ ಅಪರಾಧಿ ಮುಸ್ತಫಾ ದೊಸ್ಸಾ ಮುಂಬೈನ ಜೆಜೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಬುಧವಾರ ಮುಂಬೈ ಸರಣಿ ಸ್ಫೋಟ ಪ್ರಕರಣದ ಅಪರಾಧಿ ದೋಸಾನನ್ನು ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುಂಜಾನೆ ದೋಸಾನನ್ನು ಜೈಲ್ ವಾರ್ಡ್ ಗೆ ಸೇರಿಸಲಾಗಿತ್ತು ಎಂದು ಪಿಟಿಐ ವರದಿ ಮಾಡಿದೆ.
ಅರ್ಥೂರ್ ರೋಡ್ ಜೈಲಿನಲ್ಲಿದ್ದ ದೋಸಾ ಎದೆನೋವಿನಿಂದ ಕುಸಿದು ಬಿದ್ದಿದ್ದ. ಅಲ್ಲದೆ ದೊಸ್ಸಾ ಮಧುಮೇಹದಿಂದಲೂ ಬಳಲುತ್ತಿದ್ದ ಎಂದು ವರದಿ ತಿಳಿಸಿದೆ.
ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಗಲ್ಲಿಗೇರಿಸಲ್ಪಟ್ಟ ಅಪರಾಧಿ ಯಾಕೂಬ್ ಮೆಮೊನ್ ಗಿಂತಲೂ ದೊಸ್ಸಾ ಹೆಚ್ಚಿನ ಪ್ರಮುಖ ಪಾತ್ರ ವಹಿಸಿದ್ದ ಹಾಗಾಗಿ ದೊಸ್ಸಾಗೂ ಗಲ್ಲುಶಿಕ್ಷೆ ವಿಧಿಸಬೇಕೆಂದು ಸಿಬಿಐ ಮಂಗಳವಾರ ಕೋರ್ಟ್ ಗೆ ಮನವಿ ಸಲ್ಲಿಸಿತ್ತು.
ಸ್ಫೋಟ ಪ್ರಕರಣದ ಪಿತೂರಿಯ ಪ್ರಮುಖ ರೂವಾರಿಯೇ ದೊಸ್ಸಾ, ಅಷ್ಟೇ ಅಲ್ಲ ಈ ಸ್ಫೋಟ ಪ್ರಕರಣ ಅತೀ ಘೋರ ದುರಂತ ನಡೆದಿರುವುದಕ್ಕೆ ದೊಸ್ಸಾನೆ ಹೊಣೆಗಾರ ಎಂಬುದು ಸಿಬಿಐನ ವಾದವಾಗಿತ್ತು.