Advertisement

ದೇಶದಲ್ಲಿ ಕೋವಿಡ್‌ ಸೋಂಕಿನ ಹೊಯ್ದಾಟ

11:51 PM Jan 15, 2022 | Team Udayavani |

ಹೊಸದಿಲ್ಲಿ: ದೇಶದ ವಿವಿಧ ಭಾಗಗಳಲ್ಲಿ ಕೊರೊನಾ ಕೇಸುಗಳ ಸಂಖ್ಯೆ ಏರಿಳಿಕೆಯ ಆಟವಾಡುತ್ತಿದೆ. ಗುರುವಾರದಿಂದ ಶುಕ್ರವಾರದ 24 ಗಂಟೆಗಳಿಗೆ ಹೋಲಿಸಿದರೆ ಶುಕ್ರವಾರದಿಂದ ಶನಿವಾರದ 24 ಗಂಟೆಗಳಲ್ಲಿ  4,361 ಹೆಚ್ಚುವರಿ ಪ್ರಕರಣಗಳು ದೃಢಪಡುವ ಮೂಲಕ ಅಲ್ಪ ಏರಿಕೆ ಕಂಡಿದೆ.

Advertisement

ದೇಶದಲ್ಲಿ ಶುಕ್ರವಾರದಿಂದ ಶನಿವಾರಕ್ಕೆ 2,68,833 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿ, 402 ಮಂದಿ ಅಸುನೀಗಿದ್ದಾರೆ. ಗುರುವಾರದಿಂದ ಶುಕ್ರವಾರದ ಅವಧಿಯಲ್ಲಿ 2,64,202 ಕೇಸುಗಳು ದೃಢಪಟ್ಟಿದ್ದವು.

ದಿಲ್ಲಿಯಲ್ಲಿ ಸಾಂಖ್ಯಿಕವಾಗಿ ಶನಿವಾರ ಸೋಂಕು ಸಂಖ್ಯೆ ಇಳಿಕೆಯಾಗಿದೆ. ಮುಂಬಯಿಯಲ್ಲೂ ದಿನವಹಿ ಸೋಂಕಿನ ಸಂಖ್ಯೆ ತಗ್ಗಿದ್ದರೂ 6 ತಿಂಗಳ ಬಳಿಕ ಒಂದೇ ದಿನ 11 ಮಂದಿ ಅಸುನೀಗಿದ್ದಾರೆ.

ದಿಲ್ಲಿಯಲ್ಲಿ ಶನಿವಾರ ಒಂದೇ ದಿನ 20,718 ಕೇಸುಗಳು ದೃಢಪಟ್ಟಿವೆ, 30 ಮಂದಿ ಅಸುನೀಗಿದ್ದಾರೆ. ಆದರೆ, ಪಾಸಿಟಿವಿಟಿ ಪ್ರಮಾಣ ಶೇ.30.64ಕ್ಕೆ ಸ್ಥಿರವಾಗಿದೆ. ದಿನವಹಿ ಸೋಂಕು ಪ್ರಕರಣ 15 ಸಾವಿರಕ್ಕೆ ಇಳಿಕೆಯಾದರೆ, ಹಾಲಿ ಇರುವ ಪ್ರತಿಬಂಧಕ ಕ್ರಮಗಳನ್ನು ಸಡಿಲಿಸಲಾಗುತ್ತದೆ ಎಂದು ದಿಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ಹೇಳಿದ್ದಾರೆ.

ಶುಕ್ರವಾರ ಇಲ್ಲಿ 24,383 ಪ್ರಕರಣಗಳು ದೃಢಪಟ್ಟಿದ್ದವು. ಇದೇ ವೇಳೆ, ದಿಲ್ಲಿಯಲ್ಲಿ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿ ವೆಂಟಿಲೇಟರ್‌ ಮೂಲಕ ಚಿಕಿತ್ಸೆ ಪಡೆಯುವವರ ಪ್ರಮಾಣ ಜ.1ರಿಂದ 14ರ ವರೆಗೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೇರಳದಲ್ಲಿ 17, 755 ಕೇಸುಗಳು ದಾಖಲಾಗಿವೆ. ಪಶ್ಚಿಮ ಬಂಗಾಲದಲ್ಲಿ ಶುಕ್ರವಾರಕ್ಕೆ ಹೋಲಿಕೆ ಮಾಡಿದರೆ 3,581 ಕಡಿಮೆ ಕೇಸುಗಳು ದೃಢಪಟ್ಟಿವೆ. ತಮಿಳುನಾಡಿನಲ್ಲಿ 23,989 ಕೇಸುಗಳು ದೃಢಪಟ್ಟಿವೆ.

Advertisement

ಇದನ್ನೂ ಓದಿ:ಹೆಚ್ಚುತ್ತಲೇ ಇದೆ ಕೋವಿಡ್ : ಇಂದು 32,793 ಕೇಸ್, 07 ಮಂದಿ ಬಲಿ

ಸಾವಿನ ಸಂಖ್ಯೆ ಏರಿಕೆ: ಮಹಾರಾಷ್ಟ್ರ ರಾಜಧಾನಿ ಮುಂಬಯಿಯಲ್ಲಿ ಆರು ತಿಂಗಳ ಬಳಿಕ 11 ಮಂದಿ ಸೋಂಕಿ ನಿಂದಾಗಿ ಸಾವಿಗೀಡಾಗಿದ್ದಾರೆ. 2021ರ ಜು.29ರಂದು 13 ಮಂದಿ ಅಸುನೀಗಿದ್ದರು. ದಿನವಹಿ ಸೋಂಕಿನ ಪ್ರಮಾಣ 10,661 ಆಗಿದೆ. ಶುಕ್ರವಾರಕ್ಕೆ ಹೋಲಿಕೆ ಮಾಡಿದರೆ ಶೇ.5.8ರಷ್ಟು ಕಡಿಮೆಯಾಗಿದೆ.  ಮುಂಬಯಿಯಲ್ಲಿ ಬುಧವಾರದಿಂದ ಈಚೆಗೆ ದಿನವಹಿ ಸೋಂಕು ಇಳಿಕೆಯಾಗುತ್ತಾ ಬಂದಿರು ವುದು ಗಮನಾರ್ಹ. ಮಹಾರಾಷ್ಟ್ರದಲ್ಲಿ ಜನರ ಬೇಜವಾಬ್ದಾರಿಯಿಂದಾಗಿ ಕೊರೊನಾ ಕೇಸುಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಡಿಸಿಎಂ ಅಜಿತ್‌ ಪವಾರ್‌ ದೂರಿದ್ದಾರೆ. ಇದರ ಹೊರತಾಗಿಯೂ ಹಾಲಿ ಇರುವ ಸೋಂಕು ಪ್ರತಿಬಂಧಕ ಕ್ರಮಗಳನ್ನು ಪರಿಷ್ಕರಿಸಲಾಗುವುದಿಲ್ಲ ಎಂದಿದ್ದಾರೆ. ಪುದುಚೇರಿಯ ಮಾಜಿ ಸಿಎಂ ವಿ. ನಾರಾಯಣ ಸ್ವಾಮಿ ಅವರಿಗೆ ಸೋಂಕು ದೃಢಪಟ್ಟಿದೆ.

ಕೊರೊನಾ ಬುಲೆಟ್‌
-ಪುದುಚೇರಿಯಲ್ಲಿ ಪಾಸಿಟಿವಿಟಿ ದರ ಶೇ.51.75ಕ್ಕೆ ಏರಿಕೆ.
-ಪಶ್ಚಿಮ ಬಂಗಾಲದಲ್ಲಿ ಮಾಸಾಂತ್ಯದವರೆಗೆ ಕೊರೊನಾ ನಿರ್ಬಂಧ ಮುಂದುವರಿಕೆ.
-ಝಾರ್ಖಂಡ್‌ನ‌ಲ್ಲಿಯೂ ಮಾಸಾಂ ತ್ಯದವರೆಗೆ ಮುಂದುವರಿಕೆ.
-ಜಮ್ಮು, ಕಾಶ್ಮೀರದಲ್ಲಿ 2 ವಾರಗಳ ಅವಧಿಯಲ್ಲಿ 250 ವೈದ್ಯರಿಗೆ, ಸಿಬಂದಿಗೆ ಸೋಂಕು.

 

Advertisement

Udayavani is now on Telegram. Click here to join our channel and stay updated with the latest news.

Next