Advertisement

ಮುಂಬಯಿ ಸಂತ ನಿರಂಕಾರಿ ಮಂಡಳ: ರಕ್ತದಾನ 

04:12 PM Feb 21, 2019 | |

ಮುಂಬಯಿ: ಸಂತ ನಿರಂಕಾರಿ ಮಂಡಳ ಮುಂಬಯಿ ವತಿಯಿಂದ ರಕ್ತದಾನ ಶಿಬಿರವು ಫೆ. 17 ರಂದು ವಿಲೇಪಾರ್ಲೆಯ ವೆಸ್ಟರ್ನ್ ಎಕ್ಸ್‌ಪ್ರೆಸ್‌ ಹೈವೇ ಸಮೀಪದ ಸಂತ ನಿರಂಕಾರಿ ಸತ್ಸಂಗ ಭವನದಲ್ಲಿ ನಡೆಯಿತು.

Advertisement

ಸ್ಥಳೀಯ ಸೆಕ್ಟರ್‌ ಸಂಯೋಜಕ ಜೆ.ಪಿ. ಉಪಾಧ್ಯಾಯ ಅವರ ಆಯೋಜನೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಸಂತ ನಿರಂಕಾರಿ ಸಂಸ್ಥೆಯ ನೂರಾರು ಸದಸ್ಯರು ಪಾಲ್ಗೊಂಡು ಶಿಬಿರದ ಯಶಸ್ಸಿಗೆ ಸಹಕರಿಸಿದರು. ಸಂತ ನಿರಂಕಾರಿ ಬ್ಲಿಡ್‌ ಬ್ಯಾಂಕ್‌ನವರು 101 ಯುನಿಟ್‌ ರಕ್ತವನ್ನು ಸಂಗ್ರಹಿಸಿದರೆ, ವಿ. ಎನ್‌. ದೇಸಾಯಿರೋಡ್‌ ಬ್ಲಿಡ್‌ ಬ್ಯಾಂಕ್‌ನವರು 72 ಯುನಿಟ್‌ ರಕ್ತವನ್ನು ಸಂಗ್ರಹಿಸಿದರು.

ಸ್ಥಳೀಯ ನಿರಂತಕಾರಿ  ಸೇವಾ ದಳದ ಕಾರ್ಯಕರ್ತರು, ಎಸ್‌ಎನ್‌ಸಿಎಫ್‌ ಮತ್ತು ಮೆಡಿಕಲ್‌ ತಂಡದವರು ಶಿಬಿರದ ಯಶಸ್ಸಿಗೆ ಸಹಕರಿಸಿದರು. ಸಂತ ನಿರಂಕಾರಿ ಮಂಡಳದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next