ಮುಂಬಯಿ: ಸಾಹಿತ್ಯ ಬಳಗ ಮುಂಬಯಿ ತನ್ನ ರಜತ ಮಹೋತ್ಸವದ ಅಂಗವಾಗಿ “ಸಾಧಕರಿಗೆ ನಮನ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರ ದ್ವಿತೀಯ ಹಂತದ ಹತ್ತು ಕೃತಿಗಳ ಬಿಡುಗಡೆ ಕಾರ್ಯಕ್ರಮವು ಸೆ. 30 ರಂದು ಸಂಜೆ ಸಾಂತಾಕ್ರೂಜ್ ಪೂರ್ವದ ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಶ್ರೀ ವಿಶ್ವೇಶತೀರ್ಥ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಿತು.
ವಿಜಯ ಸುಬ್ರಹ್ಮಣ್ಯ ಸಂಗ್ರಹದ ಅಪೂರ್ವ ತೌಳವ ಸಂಶೋಧಕಿ “ಡಾ| ಲಕ್ಷ್ಮೀ ಪ್ರಸಾದ್’, ಮುದ್ರಾ ವಿಜ್ಞಾನತಜ್ಞೆ, ಸ್ವರ್ಗಿàಯ ಸುಮನ್ ಚಿಪ್ಲೂಣ್‌ಕರ್ ಅವರ ಪ್ರೇಮಾ ಎಸ್. ರಾವ್ ಸಂಗ್ರಹದ “ಮುದ್ರಾ ”ಜ್ಞಾನಿ ಸುಮನ್ ಚಿಪ್ಲಣ್‌ಕರ್ ರ್, ಲೇಖಕಿ ಚಿತ್ರಾ ಮೇಲ್ಮನೆ ರಚಿತ ಲೆಕ್ಕ ಪರಿಶೋಧಕ ಸಿಎ ಸುಬ್ಬರಾವ್ ಅವರ “ಕರ್ತವ್ಯ ನಿಷ್ಠ ಲೆಕ್ಕ ಪರಿಶೋಧಕ-ಸಿಎ ಸುಬ್ಬರಾವ್, ಲೇಖಕಿ ಪ್ರೇಮಾ ಎಸ್.ರಾವ್ ರಚಿತ ಸ್ವರ್ಗಿàಯ ಮುಚ್ಚಾcರು ನಾರಾಯಣ ಭಟ್ ಕುರಿತ “ಪ್ರಚಾರ ಬಯಸದ ಕಲಾ ಪೋಷಕ ಮುಚ್ಚಾರು ನಾರಾಯಣ ಭಟ್’, ಲೇಖಕಿ ಡಾ| ಜಿ. ಪಿ, ಕುಸುಮಾ ರಚಿತ “ನೂರನಲ್ವತ್ತು ವರ್ಷಗಳ ಇತಿಹಾಸವಿರುವ ಶ್ರೀಮದ್ಭಾರತ ಮಂಡಳಿ’, ಲೇಖಕ ಅಶೋಕ್ ಎಸ್. ಸುವರ್ಣ ರಚಿತ “ಸೇವಾ ಮನೋಭಾವದ ಮೊಗವೀರ ವ್ಯವಸ್ಥಾಪಕ ಮಂಡಳಿ” ಹೀಗೆ ಸಾಹಿತ್ಯ ಬಳಗದ ಅಧ್ಯಕ್ಷ ಎಚ್. ಬಿ. ಎಲ್. ರಾವ್ ಸಂಗ್ರಹಣೆಯ ಎಲ್ಲಾ ಆರು ಕೃತಿಗಳನ್ನು ಅನಾವರಣಗೊಳಿಸಲಾಯಿತು.
ಪ್ರಸಿದ್ಧ ಸಾಹಿತಿ, ವಿಜ್ಞಾನಿ ಡಾ| ವ್ಯಾಸರಾವ್ ನಿಂಜೂರ್ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಕೈಗಾರಿಕೋದ್ಯಮಿ ಶ್ರೀನಿವಾಸ್ ಕಾಂಚನ್ ಮತ್ತು ಸುಮನ್ ಟ್ರಸ್ಟ್ ಯಾದಗಿರಿ ಇದರ ಅಧ್ಯಕ್ಷ ಡಾ| ಮರಿಯಪ್ಪ ನಾಟೇಕರ್ ಉಪಸ್ಥಿತರಿದ್ದರು. ಅತಿಥಿ-ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೇಶವರಾವ್ ಚಿಪೂÉಣRRರ್, ಎಂ. ಹರಿ ಭಟ್, ಸಿಎ ಸುಬ್ಬರಾವ್, ಡಾ| ಲಕ್ಷಿ¾à ಪ್ರಸಾದ್, ಜಗನ್ನಾಥ್ ಪಿ. ಪುತ್ರನ್, ಕೃಷ್ಣಕುಮಾರ ಎಲ್. ಬಂಗೇರ ಅವರು ಗ್ರಂಥ ಗೌರವದ ಸಮ್ಮಾನ ಸ್ವೀಕರಿಸಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ತನ್ವಿ ರಾವ್ ಅವರ ಯಕ್ಷನೃತ್ಯ ಶೆ„ಲಿಯ ಗಣಪತಿ ಸ್ತುತಿಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭಗೊಂಡಿತು. ಅನಿತಾ ಆಚಾರ್ಯ ಕಥಕ್, ಅನುಪಮಾ ರಾವ್ ಮೋಹಿನಿಯಾಟ್ಟಂ, ಪ್ರಿಯಾಂಜಲಿ ರಾವ್ ಭರತನಾಟ್ಯ ಹಾಗೂ ವಿದುಷಿ ಸಹನಾ ಭಾರದ್ವಾಜ್ ಶಿಷ್ಯೆಯರಾದ ಜಾಹ್ನವಿ, ಭಾರ್ಗವಿ, ತನ್ವಿ, ಹಂಸಾ ಮತ್ತು ಮನಸ್ವಿ ಅವರಿಂದ ನೃತ್ಯ ವೈವಿಧ್ಯ ನಡೆಯಿತು. ಹಿರಿಯ ಸಾಹಿತಿ ಮತ್ತು ಗಮಕಿ ಕೆ. ಆರ್. ಕೃಷ್ಣಯ್ಯ ಅವರು ಕುಮಾರವ್ಯಾಸ ಭಾರತದ ನಾಂದಿ ಪದ್ಯಗಳ ಕುರಿತು ವ್ಯಾಖ್ಯಾನ ನೀಡಿದರು. ಸಹನಾ ಭಾರದ್ವಾಜ್, ಡಾ| ಸಹನಾ ಪೋತಿ ಹಾಗೂ ಕಲಾ ಭಾಗವತ್ ಗಮಕ ವಾಚನಗೈದರು. ಶಾಲಿನಿ ರಾವ್ ಮತ್ತು ಅನಿತಾ ಆಚಾರ್ಯ ಪ್ರಾರ್ಥ®ಗೈದರು. ಸಾಹಿತ್ಯ ಬಳಗದ ಅಧ್ಯಕ್ಷ ಎಚ್. ಬಿ. ಎಲ್. ರಾವ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅನುರಾಧಾ ರಾವ್, ಡಾ| ಕರುಣಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಾ. ದಯಾ ವಂದಿಸಿದರು.
ಚಿತ್ರ-ವರದಿ: ರೊನಿಡಾ ಮುಂಬಯಿ.