Advertisement

ಸಾಂಕ್ರಾಮಿಕ ರೋಗ ಆಹ್ವಾನಿಸುತ್ತಿರುವ ಮುಂಬಯಿ ನಿವಾಸಿಗರು

12:29 PM May 01, 2019 | Vishnu Das |

ಮುಂಬಯಿ:ಮುಂಬಯಿ ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗದಿಂದ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಪ್ರಯತ್ನ ನಡೆಸುತ್ತಿದ್ದರೂ ಮುಂಬಯಿ ನಿವಾಸಿಗರು ಮಾತ್ರ ತಮ್ಮ ಸ್ವಂತ ಮನೆಯೊಳಗೆ ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳ ಉತ್ಪತ್ತಿಗೆ ಎಡೆಮಾಡಿಕೊಡುತ್ತಿರುವುದು ಕಂಡುಬರುತ್ತಿದೆ.

Advertisement

ಮಹಾನಗರ ಪಾಲಿಕೆಯ ಕೀಟನಾಶಕ ವಿಭಾಗದ ವತಿಯಿಂದ ಕಳೆದ ಮೂರು ತಿಂಗಳಲ್ಲಿ ಕಟ್ಟಡಗಳು, ಮನೆ ಹಾಗೂ ಜೋಪಡಿ ಸೇರಿದಂತೆ ಸುಮಾರು 4ಲಕ್ಷಕ್ಕಿಂತ ಅಧಿಕ ಕಡೆಗಳಲ್ಲಿ ತಪಾಸಣೆ ನಡೆಸಲಾಯಿತು. ಇದರಲ್ಲಿ 606 ಮನೆಗಳ‌ಲ್ಲಿ ಮಲೇರಿಯಾ, 3,102 ಮನೆಗಳಲ್ಲಿ ಡೆಂಗ್ಯೂ ಹಾಗೂ 2,714 ಕಡೆಗಳಲ್ಲಿ ಡೆಂಗ್ಯೂ ಹಾಗೂ ಮಲೇರಿಯಾ ಸೊಳ್ಳೆಗಳ ಉತ್ಪತ್ತಿ ಲಕ್ಷಣ ಪತ್ತೆಯಾಗಿದೆ. ಅಸ್ವತ್ಛತೆ ಮತ್ತು ನಿರ್ಲಕ್ಷ ಮಾಡಿದ ಹಿನ್ನೆಲೆಯಲ್ಲಿ ಎಲ್ಲ ನಿವಾಸಿಗರಿಗೆ ಮಹಾನಗರ ಪಾಲಿಕೆಯ ವತಿಯಿಂದ ನೋಟಿಸ್‌ ನೀಡಲಾಗಿದೆ. ಮಹಾನಗರ ಪಾಲಿಕೆಯ ವತಿಯಿಂದ ಪ್ರತಿದಿನ ಸುಮಾರು 30 ಮಂದಿಗೆ ನೋಟಿಸ್‌ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದೆ.

ಸುತ್ತ‌ಮುತ್ತಲ ಪರಿಸರದಲ್ಲಿ ನೀರು ಸಂಗ್ರಹ ಮತ್ತು ಸ್ವತ್ಛತೆ ಮಾಡದೆ ಇರುವುದರಿಂದ ಡೆಂಗ್ಯೂ ಮತ್ತು ಮಲೇರಿಯಾ ಸೊಳ್ಳೆಗಳು ಉತ್ಪತಿ ಯಾಗುತ್ತದೆ ಎಂದು ಜನಜಾಗೃತೆ ಮೂಡಿಸುವ ಕಾರ್ಯ ಮುಂಬಯಿ ಮಹಾನಗರ ಪಾಲಿಕೆ ಮಾಡುತ್ತಾ ಬಂದಿದೆೆ. ಈ ಜನ ಜಾಗೃತಿ ಕಾರ್ಯದ ವೇಳೆ ಮನೆಗಳಲ್ಲಿ ಸಂಗ್ರಹಿಸಿದ ನೀರು ಮತ್ತು ಪರಿಸರದ ಸ್ವಚ್ಚವಾಗಿರುಸುವಂತೆ ಮನಪಾ ಆಗಾಗ ಎಚ್ಚರಿಕೆ ನೀಡುತ್ತಾ ಬಂದಿದೆ.

ಮಹಾನಗರ ಪಾಲಿಕೆಯ ಸ್ವತ್ಛತೆ ಕಾರ್ಯಾಚರಣೆ ಆರಂಭಿಸಿದ್ದು, ಮನೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಂಗ್ರಹಿಸಿದ ನೀರಿನಲ್ಲಿ ಸೊಳ್ಳೆಗಳ ಉತ್ಪತಿ ಲಕ್ಷಣ ಕಂಡು ಬಂದರೆ ಅವುಗಳನ್ನು ನಷ್ಟಗೊಳಿಸುವ ಕಾರ್ಯ ನಡೆಸಲಾಗುತ್ತಿದೆ. ಮಳೆಗಾಲಕ್ಕೆ ಕೆಲವು ದಿನಗಳು ಬಾಕಿ ಇರುವಾಗ ಮಹಾನಗರ ಪಾಲಿಕೆಯ ಕೀಟನಾಶಕ ವಿಭಾಗವು ಕಾರ್ಯಾಚರಣೆ ನಡೆಸಲು ಮುಂದಾಗಿದೆ. ಮನೆಗಳಲ್ಲಿ ಸಂಗ್ರಹಿಸುವ ನೀರನ್ನು ಆಗಾಗ ಸ್ವತ್ಛತೆ ನಡೆಸಬೇಕು ಇಲ್ಲದೆ ಹೋದಲ್ಲಿ ಅದರಲ್ಲಿ ಸೊಳ್ಳೆ ಉತ್ಪತಿ ಅಂಶಗಳು ಕಂಡುಬರುತ್ತವೆ ಎಂದು ಮನಪಾ ಆಗಾಗ ಎಚ್ಚರಿಗೆ ನೀಡುತ್ತಾ ಬಂದಿದೆ. ಆದರೆ ಮುಂಬಯಿ ನಿವಾಸಿಗರು ಸ್ವತಃ ಸಾಂಕ್ರಾಮಿಕ ರೋಗಗಳಿಗೆ ಎಡೆಮಾಡಿಕೊಡುತ್ತಿದ್ದಾರೆ ಎನ್ನಲಾಗಿದೆ.

ನೋಟಿಸ್‌ ಜಾರಿ
ಮುಂಬಯಿ ನಗರದ ಮನೆಗಳಲ್ಲಿ ಸಂಗ್ರಹಿಸುವ ನೀರು ಮತ್ತು ಕಟ್ಟಡಗಳ ಸ್ವತ್ಛತೆಯ ಕುರಿತು ಮಾಹಿತಿ ನೀಡುತ್ತಾ ಬಂದಿದ್ದ, ಮಹಾನಗರ‌ಪಾಲಿಕೆ ಕಳೆದ ಮೂರು ತಿಂಗಳಲ್ಲಿ ಸುಮಾರು 2,714 ಮನೆಗಳಲ್ಲಿ ಸಂಗ್ರಹಿಸಿದ ನೀರಿನಲ್ಲಿ ಮಲೇರಿಯಾ ಮತ್ತು ಡೆಂಗ್ಯೂ ರೋಗದ ಉತ್ಪತಿ ಲಕ್ಷಣ ಪತ್ತೆಹಚ್ಚಿವೆ. ಮನಪಾದ ಕೀಟಾನಾಶಕ ವಿಭಾಗದ ಕಾರ್ಮಿಕರು ನೀಡುವ ಮಾಹಿತಿಯನ್ನು ನಿರ್ಲಕ್ಷಿಸಿದ ಜನರ ವಿರುದ್ಧ ನೋಟಿಸ್‌ ಜಾರಿಗೊಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next